ಲಕ್ನೋ : ಇಂಡಿಯನ್ ಪ್ರೀಮಿಯರ್ ಲೀಗ್ ( IPL 2022) ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಎಂಟು ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಈಗಾಗಲೇ ಘೋಷಣೆ ಮಾಡಿವೆ. ಉಳಿದಂತೆ ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಲಿದೆ ಅನ್ನೋ ಕುತೂಹಲ ಶುರುವಾಗಿದೆ. ಇದೀಗ ಹೊಸ ಫ್ರಾಂಚೈಸಿ ಲಕ್ನೋ ತಂಡ ( IPL 2022 Lucknow Team) ಕನ್ನಡಿಗ ಕೆಎಲ್ ರಾಹುಲ್ (KL Rahul) ನಾಯಕತ್ವ ವಹಿಸೋದು ಖಚಿತ, ಜೊತೆಗೆ ಡೇವಿಡ್ ವಾರ್ನರ್ (Warner), ರಶೀದ್ ಖಾನ್ (Rashid Khan) ತಂಡ ಸೇರುವುದು ಪಕ್ಕಾ.
ಟಿಂ ಇಂಡಿಯಾ ಚುಟುಕು ಕ್ರಿಕೆಟ್ ತಂಡದ ಉಪನಾಯಕ ಕೆಎಲ್ ರಾಹುಲ್, ಡೇವಿಡ್ ವಾರ್ನರ್, ರಶೀದ್ ಖಾನ್, ಹಾರ್ದಿಕ್ ಪಾಂಡ್ಯ ಮತ್ತು ಯುಜವೇಂದ್ರ ಚಹಾಲ್ ಸೇರಿದಂತೆ ಘಟನಾಘಟಿ ಆಟಗಾರರು ಮೆಗಾ ಹರಾಜಿನಲ್ಲಿ ಭಾಗಿಯಾಗಿದ್ದಾರೆ. ಈ ನಡುವಲ್ಲೇ ಲಕ್ನೋ ತಂಡ ಕೆಎಲ್ ರಾಹುಲ್ ನಾಯಕತ್ವದಲ್ಲಿ ಸುಸಜ್ಜಿತ ತಂಡವನ್ನು ನಿರ್ಮಿಸಲು ಯೋಜಿಸುತ್ತಿದೆ. ಲಕ್ನೋ ತಂಡದಲ್ಲಿ ಕೆಎಲ್ ರಾಹುಲ್ ಮತ್ತು ಡೇವಿಡ್ ವಾರ್ನರ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪ್ಲಾಫ್ ಡು ಪ್ಲಾಸಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರೆ, ವಿಕೆಟ್ ಕೀಪರ್ ಇಶಾನ್ ಕಿಶನ್ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಐದನೇ ಕ್ರಮಾಂಕದಲ್ಲಿ ಆಡಿದರೆ, ಆರನೇ ಶ್ರೇಯಾಂಕದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡ ಸೇರುವುದು ಬಹುತೇಕ ಖಚಿತ.
IPL 2021 ಪರ್ಪಲ್ ಕ್ಯಾಪ್ ಹೋಲ್ಡರ್ ಹರ್ಷಲ್ ಪಟೇಲ್ ಏಳನೇ ಕ್ರಮಾಂಕದಲ್ಲಿ ಆಡಿದರೆ, ಎಂಟನೇ ಕ್ರಮಾಂಕದ ಸ್ಪಿನ್ನರ್ ರಶೀದ್ ಖಾನ್. ಭುವನೇಶ್ವರ್ ಕುಮಾರ್ ಒಂಬತ್ತನೇ ಮತ್ತು ವೇಗಿ ಟ್ರೆಂಟ್ ಬೌಲ್ಟ್ ಹತ್ತನೇ, ಯುವವೇಂದ್ರ ಚಹಾಲ್ ಹನ್ನೊಂದರ ಆಡಲಿದ್ದಾರೆ. ಅದೇ ತಂಡವನ್ನು ಹರಾಜಿನಲ್ಲಿ ಖರೀದಿಸಬಹುದಾದರೆ, ಲಕ್ನೋ ತಂಡವು ಬಲಿಷ್ಠವಾಗುವ ಸಾಧ್ಯತೆಯಿದೆ.
ಲಕ್ನೋ ಭವಿಷ್ಯದ ತಂಡ : ಕೆಎಲ್ ರಾಹುಲ್ (ನಾಯಕ), ಡೇವಿಡ್ ವಾರ್ನರ್, ಪ್ಲಾನ್ ಡು ಪ್ಲೆಸಿಸ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುವವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್. ಇನ್ನು ಕ್ರಿಕೆಟ್‌ನಿಂದ ಮೆಗಾ ಹರಾಜು ಪ್ರಾರಂಭವಾಗುವ ಮೊದಲು, RCB ಅಭಿಮಾನಿಗಳಿಗೂ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಎಬಿ ಡಿವಿಲಿಯರ್ಸ್ IPL 2022 ಗಾಗಿ ಹೊಸ ಪಾತ್ರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮರಳುವ ಸಾಧ್ಯತೆಯಿದೆ.
ಐಪಿಎಲ್‌ನ ಕೊನೆಯ ಕೆಲವು ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಆಡಿದ್ದ ಡಿವಿಲಿಯರ್ಸ್ . ಇದೀಗ, ಆರ್‌ಸಿಬಿಯ ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರು ಎಬಿಡಿ ಆರ್‌ಸಿಬಿ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುಳಿವು ನೀಡಿದ್ದಾರೆ.ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಕಾಮೆಂಟರಿ ಮಾಡುವಾಗ, ಆರ್‌ಸಿಬಿ ಮುಖ್ಯ ಕೋಚ್ ಬಂಗಾರ್, ಎಬಿ ಡಿವಿಲಿಯರ್ಸ್‌ನಂತಹ ಆಟಗಾರನಿಗೆ ಬ್ಯಾಟಿಂಗ್ ಕೋಚ್ ಸ್ಥಾನ ನೀಡಿದರೆ ಅದು ಆಟಗಾರರಿಗೆ ಮತ್ತು ತಂಡಕ್ಕೆ ಒಳ್ಳೆಯದು ಎಂದು ಹೇಳಿದರು. ಐಪಿಎಲ್‌ನ ಕಳೆದ ಕೆಲವು ಸೀಸನ್‌ಗಳಲ್ಲಿ, ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ RCB ಗಾಗಿ ಹಲವಾರು ಪಂದ್ಯಗಳನ್ನು ಗೆದ್ದಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ, ಸಂಜಯ್ ಬಂಗಾರ್ ಮತ್ತು ಆಕಾಶ್ ಚೋಪ್ರಾ ಇಬ್ಬರೂ ಒಟ್ಟಿಗೆ ಕಾಮೆಂಟರಿ ಮಾಡುತ್ತಿದ್ದರು.
ಭಾರತ ತಂಡವು ರಾಹುಲ್ ದ್ರಾವಿಡ್ ಅವರಂತಹ ಶ್ರೇಷ್ಠ ಬ್ಯಾಟರ್ ಹೊಂದಿರುವಾಗ ತಂಡಕ್ಕೆ ಬ್ಯಾಟಿಂಗ್ ಕೋಚ್‌ನ ಅವಶ್ಯಕತೆ ಏನಿದೆ ಎಂದು ಆಕಾಶ್ ಹೇಳಿದರು. ದ್ರಾವಿಡ್ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದರೆ, ವಿಕ್ರಮ್ ರಾಥೋಡ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಈ ವಿಷಯದ ಬಗ್ಗೆ ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್, ಈಗ ಆರ್‌ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್, ಮುಖ್ಯ ಕೋಚ್ ಬ್ಯಾಟಿಂಗ್‌ನ ಹೊರತಾಗಿ ಬೌಲಿಂಗ್ ಮತ್ತು ತಂಡದ ತಂತ್ರವನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2022 Retained Players : ಯಾರು ಇನ್, ಯಾರು ಔಟ್ : ಇಲ್ಲಿದೇ ರಿಟೈನ್ಡ್ ಆಟಗಾರರ ಕಂಪ್ಲೀಟ್ ಡಿಟೈಲ್ಸ್
ಇದನ್ನೂ ಓದಿ : RCB New Captain : ಕೆ.ಎಲ್.ರಾಹುಲ್, ಪಡಿಕ್ಕಲ್ ಅಲ್ಲ : ಆರ್‌ಸಿಬಿ ನಾಯಕನಾಗ್ತಾನೆ ಈ ಕನ್ನಡಿಗ
( IPL 2022 Lucknow Team: KL Rahul Captain, Warner and Rashid Khan enter)