ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜು (IPL 2022 Mega Auction Update) ಇಂದು (ಫೆಬ್ರವರಿ 12 ) ಮತ್ತುನಾಳೆ (ಫೆಬ್ರವರಿ 13 )ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಲು ಈಗಾಗಲೇ ಸಿದ್ದತೆಯನ್ನು ಮಾಡಿಕೊಂಡಿದೆ. ಐಪಿಎಲ್ ಮಹಾ ಹರಾಜಿಗೆ ಸಂಬಂಧಿಸಿದಂತೆ, ಸಮಯ, ಆಟಗಾರರ ವಿವರ ಸೇರಿದಂತೆ ಪ್ರಸಾರದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಲಿರುವ 10 ಫ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಎರಡು ದಿನಗಳ ಕಾಲ ನಡೆಯುವ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗಿಯಾಗಲಿವೆ.
ಎಲ್ಲಾ ತಂಡಗಳು ಈಗಾಗಲೇ ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿವೆ. ಅದ್ರಲ್ಲೂ ಬಹುತೇಕ ಆಟಗಾರರು ತಮ್ಮ ಮೂಲ ಬೆಲೆಯನ್ನೇ ಎರಡು ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಐಪಿಎಲ್ ಮಹಾ ಹರಾಜು ನಡೆಯುತ್ತಿದ್ದು, ಆಟಗಾರರು ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡುತ್ತಿದೆ. ಅದ್ರಲ್ಲೂ ಕೆಲವು ಯುವ ಆಟಗಾರರು ಕೋಟ್ಯಾಂತರ ರೂಪಾಯಿಗೆ ಹರಾಜು ಆಗುವ ಸಾಧ್ಯತೆಯಿದೆ. ಈಗಾಗಲೇ 33 ಆಟಗಾರರನ್ನು ಈಗಾಗಲೇ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಂಡಿವೆ. ಉಳಿದಂತೆ 590 ಕ್ರಿಕೆಟಿಗರನ್ನು ಶಾರ್ಟ್ ಲಿಸ್ಟ್ ಮಾಡಿಕೊಳ್ಳಲಾಗಿದೆ. ಈ ಪೈಕಿ 217 ಆಟಗಾರರನ್ನು ಖರೀದಿಸಲು ಅವಕಾಶವಿದೆ.
IPL 2022 ಮೆಗಾ ಹರಾಜು ಲೈವ್ ಸ್ಟ್ರೀಮಿಂಗ್ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
IPL 2022 ಹರಾಜು ಯಾವಾಗ ನಡೆಯುತ್ತದೆ?
ಐಪಿಎಲ್ 2022 ರ ಹರಾಜು ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ.
IPL 2022 ಹರಾಜು ಎಲ್ಲಿ ನಡೆಯುತ್ತದೆ?
ಐಪಿಎಲ್ 2022 ರ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ.
IPL 2022 ಮೆಗಾ ಹರಾಜು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
IPL 2022 ಹರಾಜಿನ ನೇರ ಪ್ರಸಾರವು ಫೆಬ್ರವರಿ 12 ರಂದು (ಶನಿವಾರ) 11 am (IST) ರಿಂದ ಪ್ರಾರಂಭವಾಗುತ್ತದೆ. ಇದು ಫೆಬ್ರವರಿ 13 ರಂದು (ಭಾನುವಾರ) ಅದೇ ಸಮಯದಲ್ಲಿ ಪ್ರಾರಂಭವಾಗುತ್ತದೆ.
ಟಿವಿಯಲ್ಲಿ IPL 2022 ಹರಾಜಿನ ಲೈವ್ ಸ್ಟ್ರೀಮಿಂಗ್ ಅನ್ನು ಹೇಗೆ ಮತ್ತು ಎಲ್ಲಿ ವೀಕ್ಷಿಸಬೇಕು?
ಐಪಿಎಲ್ 2022 ಹರಾಜು ಫೆಬ್ರವರಿ 12 ಮತ್ತು 13 ರಂದು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ಆಗಲಿದೆ.
IPL 2022 ಹರಾಜಿನಲ್ಲಿ ಎಷ್ಟು ತಂಡಗಳು ಭಾಗವಹಿಸುತ್ತವೆ ?
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೇರ್ಪಡೆಯೊಂದಿಗೆ ಐಪಿಎಲ್‌ನಲ್ಲಿ ಒಟ್ಟು ತಂಡಗಳ ಸಂಖ್ಯೆ 10 ಕ್ಕೆ ತಲುಪಿದೆ. ಎಲ್ಲಾ 10 ತಂಡಗಳು ಐಪಿಎಲ್ ಹರಾಜಿನಲ್ಲಿ ಭಾಗವಹಿಸಲಿವೆ.
IPL 2022 ಹರಾಜಿಗಾಗಿ ಎಷ್ಟು ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ?
ಐಪಿಎಲ್ 2022 ರ ಹರಾಜಿನಲ್ಲಿ 590 ಕ್ರಿಕೆಟಿಗರು 228 ಕ್ಯಾಪ್ಡ್, 355 ಅನ್‌ಕ್ಯಾಪ್ಡ್ 7 ಸಹವರ್ತಿ ರಾಷ್ಟ್ರಗಳಿಂದ ಸುತ್ತಿಗೆಗೆ ಹೋಗುತ್ತಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಬಿಸಿಸಿಐ ಅಧ್ಯಕ್ಷರಿಗೆ ಚಿಕಿತ್ಸೆ: ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ
ಇದನ್ನೂ ಓದಿ : ಕೆರಿಬಿಯನ್ನರ ವಿರುದ್ಧ ಭಾರತಕ್ಕೆ 96 ರನ್‌ಗಳ ಜಯಭೇರಿ; ಸರಣಿ ಕೈವಶ
( IPL 2022 Mega Auction Update: Timing, live streaming and players details )