ಮಂಗಳವಾರ, ಏಪ್ರಿಲ್ 29, 2025
HomeSportsIPL 2022 TEAM CAPTAIN : ಕರ್ನಾಟಕದ ಈ ಮೂವರು ಐಪಿಎಲ್‌ ತಂಡಗಳ ನಾಯಕರಾಗೋದು ಖಚಿತ

IPL 2022 TEAM CAPTAIN : ಕರ್ನಾಟಕದ ಈ ಮೂವರು ಐಪಿಎಲ್‌ ತಂಡಗಳ ನಾಯಕರಾಗೋದು ಖಚಿತ

- Advertisement -

ಐಪಿಎಲ್‌ 2022 ಕ್ಕಾಗಿ ಭರ್ಜರಿ ಸಿದ್ದತೆ ಜೋರಾಗಿ ನಡೆಯುತ್ತಿದೆ. ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್‌ ತಂಡಗಳು ಬಲಿಷ್ಠ ಆಟಗಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿವೆ. ಕಳೆದ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಆಟಗಾರರು ರಿಟೈನ್‌ ಆಗಿದ್ದಾರೆ. ಬಹುತೇಕ ತಂಡಗಳು ಈ ಬಾರಿ ಹೊಸ ನಾಯಕನ (IPL 2022 TEAM CAPTAIN) ನೇತೃತ್ವದಲ್ಲಿ ಕಣಕ್ಕೆ ಇಳಿಯಲಿವೆ. ಅದ್ರಲ್ಲೂ ಕರ್ನಾಟಕ ಮೂವರು ಆಟಗಾರರಿಗೆ ಈ ಬಾರಿ ಅದೃಷ್ಟ ಖುಲಾಯಿಸೋದು ಖಚಿತ. ಕೆ.ಎಲ್.‌ ರಾಹುಲ್‌ ( KL Rahul ), ಮಯಾಂಕ್‌ ಅಗರ್ವಾಲ್‌ ( Mayank Agarwal ), ಮನೀಷ್‌ ಪಾಂಡೆ ( Manish Pandey ) ಐಪಿಎಲ್‌ ತಂಡಗಳ ನಾಯಕರಾಗೋದು ಖಚಿತ

ಕೆ.ಎಲ್.ರಾಹುಲ್ ( KL Rahul )

 IPL 2022 TEAM CAPTAIN : KL Rahul, Mayank Agarwal, Manish Pandey sure to be IPL captains
ಕೆ.ಎಲ್.ರಾಹುಲ್

ಟಿ೨೦, ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳಲ್ಲಿ ಈಗಾಗಲೇ ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆಯ ಆಟಗಾರ ಅಂತಾ ಗುರುತಿಸಿಕೊಂಡಿರುವ ಕೆ.ಎಲ್.ರಾಹುಲ್‌ ಐಪಿಎಲ್‌ನಲ್ಲಿ ಈಗಾಗಲೇ ರನ್‌ ಹೊಳೆಯನ್ನೇ ಹರಿಸಿದ್ದಾರೆ. ಇದುವರಗೆ ಒಟ್ಟು 40 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕೆ.ಎಲ್.ರಾಹುಲ್‌ ಇದುವರೆಗೆ ಒಟ್ಟು 55 ಅಂತರಾಷ್ಟ್ರೀಯ ಟಿ೨೦ ಪಂದ್ಯಗಳನ್ನು ಆಡಿದ್ದು, ಈ ಪೈಕಿ 52 ಇನ್ನಿಂಗ್ಸ್‌ ಮೂಲಕ 40.69 ಸರಾಸರಿಯಲ್ಲಿ 1831 ರನ್‌ ಗಳಿಸಿದ್ದಾರೆ. 2 ಶತಕ ಹಾಗೂ 16 ಅರ್ಧ ಶತಕ ಬಾರಿಸಿದ್ದು, ಅತ್ಯಧಿಕ 110 ರನ್‌ ಸಂಪಾದಿಸಿದ್ದಾರೆ. ಇನ್ನು ಐಪಿಎಲ್‌ ಟೂರ್ನಿಯಲ್ಲಿ ರಾಹುಲ್‌ ಕಳೆದ ಮೂರು ಸೀಸನ್‌ಗಳಲ್ಲಿಯೂ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಒಟ್ಟು 94 ಐಪಿಎಲ್‌ ಪಂದ್ಯಗಳನ್ನು ಆಡಿದ್ದು, 85 ಇನ್ನಿಂಗ್ಸ್‌ ಮೂಲಕ 47.43 ಸರಾಸರಿಯಲ್ಲಿ 3273 ರನ್‌ ಸಂಪಾದಿಸಿದ್ದಾರೆ. 2 ಶತಕ 27 ಅರ್ಧ ಶತಕ ಬಾರಿಸಿದ್ದು, ಅತ್ಯಧಿಕ 132 ರನ್‌ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಐಪಿಎಲ್‌ನಲ್ಲಿ ಈಗಾಗಲೇ ಆರ್‌ಸಿಬಿ, ಸನ್‌ರೈಸಸ್‌ ಹೈದ್ರಾಬಾದ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಅದ್ರಲ್ಲೂ ಎರಡು ವರ್ಷಗಳ ಕಾಲ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕರಾಗಿದ್ದ ರಾಹುಲ್‌ ಈ ಬಾರಿ ತಂಡದಿಂದ ಹೊರ ನಡೆದಿದ್ದಾರೆ. ಇದೀಗ ರಾಹುಲ್‌ ಹೊಸ ತಂಡ ಲಕ್ನೋ ಪರ ಕಾಣಿಸಿಕೊಳ್ಳುವುದು ಖಚಿತ. ಈ ಬಾರಿ ಬರೋಬ್ಬರಿ ೨೦ ಕೋಟಿ ಸಂಭಾವನೆಯನ್ನು ಪಡೆಯುವುದರ ಜೊತೆಗೆ ಲಕ್ನೋ ತಂಡ ನಾಯಕರಾಗಲಿದ್ದಾರೆ.

 IPL 2022 TEAM CAPTAIN : KL Rahul, Mayank Agarwal, Manish Pandey sure to be IPL captains
ಮನೀಷ್‌ ಪಾಂಡೆ

ಮನೀಷ್‌ ಪಾಂಡೆ ‌(Manish Pandey )

ಮನೀಷ್‌ ಪಾಂಡೆ ಸದ್ಯ ಕರ್ನಾಟಕ ಕ್ರಿಕೆಟ್‌ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ದೇಶೀಯ ಟೂರ್ನಿಯಲ್ಲಿ ಬ್ಯಾಟಿಂಗ್‌ ಮೂಲಕ ಮಿಂಚು ಹರಿಸುತ್ತಿರುವ ಮನೀಷ್‌ ಪಾಂಡೆ ಭಾರತ ತಂಡದ ಆಟಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ ಪಂದ್ಯಾವಳಿಯಲ್ಲಿಯೇ ಮೊದಲ ಶತಕ ಸಿಡಿಸಿದ ಖ್ಯಾತಿಯೂ ಮನೀಷ್‌ ಪಾಂಡೆಗೆ ಇದೆ. ಭಾರತ ತಂಡದ ಪರವಾಗಿ ಒಟ್ಟು 29 ಏಕದಿನ ಪಂದ್ಯಗಳನ್ನು ಆಡಿರುವ ಮನೀಶ್‌ ಪಾಂಡೆ 24 ಇನ್ನಿಂಗ್ಸ್‌ಗಳ ಮೂಲಕ 33.29 ಸರಾಸರಿಯಲ್ಲಿ 677 ರನ್‌ ಗಳಿಸಿದ್ದಾರೆ. ಒಂದು ಶತಕ ಹಾಗೂ ಎರಡು ಅರ್ಧ ಶತಕ ಬಾರಿಸಿದ್ದಾರೆ. ಇನ್ನು 39 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಮನೀಷ್‌ ಪಾಂಡೆ 33 ಇನ್ನಿಂಗ್ಸ್‌ ಮೂಲಕ 44.31ರ ಸರಾಸರಿಯಲ್ಲಿ 709 ರನ್‌ ಬಾರಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕ ಗಳಿಸಿದ್ದಾರೆ. ಐಪಿಎಲ್‌ ಪಂದ್ಯಾವಳಿಯಲ್ಲಿ ಪಾಂಡೆ ಅಮೋಘ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ಒಟ್ಟು 154 ಐಪಿಎಲ್‌ ಪಂದ್ಯಗಳನ್ನು ಆಡಿರುವ ಮನೀಷ್‌ ಪಾಂಡೆ 143 ಇನ್ನಿಂಗ್ಸ್‌ಗಳ ಮೂಲಕ 30.60 ಸರಾಸರಿಯೊಂದಿಗೆ 356 ರನ್‌ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 21 ಅರ್ಧ ಶತಕ ಒಳಗೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಪುಣೆ ವಾರಿಯರ್ಸ್‌, ಮುಂಬೈ ಇಂಡಿಯನ್ಸ್‌, ಸನ್‌ ರೈಸಸ್‌ ಹೈದ್ರಾಬಾದ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಬಾರಿ ಮನೀಷ್‌ ಪಾಂಡೆ ಮೆಗಾ ಬಿಡ್ಡಿಂಗ್‌ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆಗುವ ಸಾಧ್ಯತೆಯಿದೆ. ಅಲ್ಲದೇ ಮನೀಷ್‌ ಪಾಂಡೆ ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆರ್ ಸಿಬಿ ಈಗಾಗಲೇ ಮನೀಷ್‌ ಪಾಂಡೆ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸಿ ನಾಯಕತ್ವ ನೀಡುವ ಲೆಕ್ಕಾಚಾರದಲ್ಲಿ.

ಮಯಾಂಕ್‌ ಅಗರ್‌ ವಾಲ್‌ (Mayank Agarwal)

 IPL 2022 TEAM CAPTAIN : KL Rahul, Mayank Agarwal, Manish Pandey sure to be IPL captains
ಕನ್ನಡಿಗರಾದ ಕೆ.ಎಲ್.ರಾಹುಲ್‌ ಹಾಗೂ ಮಯಾಂಕ್‌ ಅಗರ್ವಾಲ್‌

ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ಟೀಂ ಇಂಡಿಯಾದ ಟೆಸ್ಟ್‌ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಎರಡು ದ್ವಿಶತಕ ಹಾಗೂ ನಾಲ್ಕು ಶತಕ ಗಳಿಸುವ ಮೂಲಕ ಭರವಸೆಯನ್ನು ಮೂಡಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಹೇಳಿಕೊಳ್ಳುವ ಸಾಧನೆಯನ್ನು ಮಯಾಂಕ್‌ ಮಾಡದೇ ಇದ್ದರೂ ಕೂಡ ಐಪಿಎಲ್‌ ಪಂದ್ಯಾವಳಿಗಳಲ್ಲಿ ರನ್‌ ಹೊಳೆಯನ್ನೇ ಹರಿಸಿದ್ದಾರೆ. ಕಳೆದ ಬಾರಿ ಕೆ.ಎಲ್. ರಾಹುಲ್‌ ಜೊತೆಗೆ ಪಂಜಾಬ್‌ ಕಿಂಗ್ಸ್‌ ತಂಡದ ಪರ ಆರಂಭಿಕನಾಗಿ ಕಣಕ್ಕೆ ಇಳಿಯುತ್ತಿದ್ದ ಮಯಾಂಕ್‌ ದಾಖಲೆಯ ಜೊತೆಯಾಟವನ್ನು ನೀಡಿದ್ದಾರೆ. ಇದುವರೆಗೆ ಒಟ್ಟು 100 ಐಪಿಎಲ್‌ ಪಂದ್ಯಗಳನ್ನು ಆಡಿರುವ ಮಯಾಂಕ್‌ ಅಗರ್‌ವಾಲ್‌ 65 ಇನ್ನಿಂಗ್ಸ್‌ ಮೂಲಕ 23.46 ರ ಸರಾಸರಿಯೊಂದಿಗೆ 2,135 ರನ್‌ ಬಾರಿಸಿದ್ದಾರೆ. ಅಲ್ಲದೇ 1 ಶತಕ ಹಾಗೂ 11 ಅರ್ಧ ಶತಕ ಬಾರಿಸಿದ್ದಾರೆ. ಐಪಿಎಲ್‌ ಪಂದ್ಯಾವಳಿಯಲ್ಲಿನ ಉತ್ತಮ ಪ್ರದರ್ಶನದಿಂದಲೇ ಪಂಜಾಬ್‌ ಕಿಂಗ್ಸ್‌ ತಂಡ 14 ಕೋಟಿ ರೂಪಾಯಿಯನ್ನು ಕೊಟ್ಟು ತಂಡದಲ್ಲಿ ಉಳಿಸಿಕೊಂಡಿದೆ. ರಾಹುಲ್‌ ಅನುಪಸ್ಥಿತಿಯಲ್ಲಿ ಮಯಾಂಕ್‌ ಅಗರ್‌ವಾಲ್‌ ನೇತೃತ್ವದಲ್ಲಿಯೇ ತಂಡವನ್ನು ಕಟ್ಟುವ ಕುರಿತು ಪಂಜಾಬ್‌ ಕಿಂಗ್ಸ್‌ ತಂಡ ಘೋಷಣೆಯನ್ನು ಮಾಡಿದೆ. ಹೀಗಾಗಿ ಮಯಾಂಕ್‌ ಅಗರ್‌ವಾಲ್‌ ಪಂಜಾಬ್‌ ಕಿಂಗ್ಸ್‌ ನಾಯಕನಾಗುವುದು ಖಚಿತ.

ಇದನ್ನೂ ಓದಿ : ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್‌, ರಶೀದ್‌ ಖಾನ್‌ ಮತ್ತು ಚಾಹಲ್‌ ಆಯ್ಕೆ

ಇದನ್ನೂ ಓದಿ : Ruturaj Gaikwad CSK Captain : ಧೋನಿ ಅಲ್ಲ ರುತುರಾಜ್ ಗಾಯಕ್ವಾಡ್ CSK ನಾಯಕ !

ಇದನ್ನೂ ಓದಿ : ಫಾಫ್ ಡು ಪ್ಲೆಸಿಸ್ ಮತ್ತು ಇನ್ನೂ 3 ದೊಡ್ಡ ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಮರಳಿದ್ದಾರೆ

( IPL 2022 TEAM CAPTAIN : KL Rahul, Mayank Agarwal, Manish Pandey sure to be IPL captains )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular