RCB vs PBKS IPL Final 2025 : ಇಂಡಿಯನ್ ಪ್ರೀಮಿಯರ್ ಲೀಗ್ 2025 ಫೈನಲ್ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ಚೊಚ್ಚಲ ಕಿರೀಟಕ್ಕಾಗಿ ಎರಡೂ ತಂಡಗಳ ನಡುವಿನ ಹೋರಾಟ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳಲ್ಲಿ ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಇರ್ತಾರೆ, ಪಿಚ್ ರಿಪೋರ್ಟ್ ಏನ್ ಹೇಳುತ್ತೆ ? ಯಾರಿಗೆ ಗೆಲ್ಲುವ ಅವಕಾಶ ಹೆಚ್ಚಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಐಪಿಎಲ್ ಇತಿಹಾಸದ 18 ವರ್ಷಗಳಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇದೇ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಸನಿಹದಲ್ಲಿವೆ. ವಿರಾಟ್ ಕೊಯ್ಲಿ, ಜೋಶ್ ಹ್ಯಾಜಲ್‌ವುಡ್ ಅವರಂತಹ ಬಲಾಢ್ಯ ಆಟಗಾರರನ್ನು ಹೊಂದಿದ್ದು ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದೆ. ಮತ್ತೊಂದೆಡೆಯಲ್ಲಿ ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ತಂಡ ಯುವ ಆಟಗಾರರಿಂದ ಕೂಡಿದ್ದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
IPL 2025 Final : ಪಂದ್ಯದ ವಿವರಗಳು
ತಂಡಗಳು : ರಾಯಲ್ ಚಾಲೆಂಜರ್ಸ್ ಬೆಂಗಳೂರು – ಪಂಜಾಬ್ ಕಿಂಗ್ಸ್
ದಿನಾಂಕ : ಜೂನ್ 3, 2025
ಸಮಯ : 7:30 ರಾತ್ರಿ (ಟಾಸ್ 7:00 ರಾತ್ರಿ)
ಸ್ಥಳ : ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಹಾಟ್‌ಸ್ಟಾರ್
IPL 2025 Final : ಹೇಗಿದೆ ಅಹಮದಾಬಾದ್ ಪಿಚ್ ರಿಪೋರ್ಟ್ ?
ಐಪಿಎಲ್ ಫೈನಲ್ ಪಂದ್ಯ ನಡೆಯಲಿರುವ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟಿಂಗ್ ಯೋಗ್ಯವಾಗಿರುವ ಪಿಚ್ ಹೊಂದಿದೆ. ಹಿಂದೆ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದು, ರನ್ ಹೊಳೆಯೇ ಹರಿದಿತ್ತು. ಇದೀಗ ಫೈನಲ್ ಪಂದ್ಯದಲ್ಲಿಯೂ ಮೊದಲು ಬ್ಯಾಟಿಂಗ್ ನಡೆಸುವ ತಂಡ 220+ ರನ್ ಗಳಿಸುವ ಸಾಧ್ಯತೆ ಎನ್ನುತ್ತಿದೆ ಕ್ರಿಕೆಟ್ ಪಂಡಿತ ಲೆಕ್ಕಾಚಾರ. ಬೌನ್ಸರ್‌ಗಳಿಗೆ ಪಿಚ್ ಹೆಚ್ಚು ಸಹಕಾರಿಯಾಗಲಿದೆ.
ಐಪಿಎಲ್ ಫೈನಲ್ ಪಂದ್ಯ : ಯಾರೆಲ್ಲಾ ಆಡ್ತಾರೆ ?
ರಾಯಲ್ ಚಾಲೆಂಜರ್ಸ್ ಸಂಭಾವ್ಯ ತಂಡ :
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಾಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ
ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ :
ಪ್ರಭ್ಸಿಮ್ರಾನ್ ಸಿಂಗ್, ಪ್ರಿಯಾನ್ಶ್ ಆರ್ಯ, ಜೋಶ್ ಇಂಗ್ಲಿಸ್ (ವಾರ), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಾಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜೈ, ಕೈಲ್ ಜೇಮಿಸನ್, ಅರ್ಶ್ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್/ಯುಜ್ವೇಂದ್ರ ಚಾಹಲ್, ವಿಜಯಕುಮಾರ್ ವೈಶಾಕ್
Also Read : KL Rahul : ಐಪಿಎಲ್‌ನಲ್ಲಿ ಶತಕ : 2026 ಟಿ20 ವಿಶ್ವಕಪ್ ಆಡ್ತಾರೆ ಕೆಎಲ್ ರಾಹುಲ್
ಐಪಿಎಲ್ 2025 ಫೈನಲ್ ಪಂದ್ಯ ಪ್ರಮುಖ ಅಂಕಿಅಂಶಗಳು :
- ಶ್ರೇಯಸ್ ಅಯ್ಯರ್ vs ಹ್ಯಾಜಲ್‌ವುಡ್: 22 ಎಸೆತಗಳಲ್ಲಿ 11 ರನ್‌ಗಳು, 4 ಬಾರಿ ಔಟ್.
- ಮಯಾಂಕ್ ಅಗರ್ವಾಲ್ vs ಚಾಹಲ್ : 152.7 ರ ರನ್ ರೇಟ್ ಹೊಂದಿದ್ದಾರೆ. ಆದರೆ 11 ಇನ್ನಿಂಗ್ಸ್‌ಗಳಲ್ಲಿ 7 ಬಾರಿ ಔಟ್.
- ಅಹಮದಾಬಾದ್‌ನಲ್ಲಿ ಕೊಹ್ಲಿ: 12 ಇನ್ನಿಂಗ್ಸ್‌ಗಳಲ್ಲಿ 137.86 ಎಸ್‌ಆರ್‌ನಲ್ಲಿ 477 ರನ್‌ಗಳು; 5 ಅರ್ಧಶತಕಗಳು.
- ಅಹಮದಾಬಾದ್‌ನಲ್ಲಿ ಭುವನೇಶ್ವರ್: 10 ಇನ್ನಿಂಗ್ಸ್‌ಗಳಲ್ಲಿ 14 ವಿಕೆಟ್‌ಗಳು; ಆರ್ಥಿಕತೆ 7.02.
- ಅರ್ಶ್‌ದೀಪ್ ಕಳಪೆ ಸಾಧನೆ : ಕಳೆದ 5 ಪಂದ್ಯಗಳಲ್ಲಿ 4 ರಲ್ಲಿ ವಿಕೆಟ್ ಪಡೆದಿದ್ದು, ಆರ್‌ಸಿಬಿ ವಿರುದ್ಧ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ.
ರಾಯಲ್ ಚಾಲೆಂಜರ್ಸ್ vs ಪಂಜಾಬ್ ಕಿಂಗ್ಸ್: ಯಾರು ಬಲಿಷ್ಠ ?
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇದುವರೆಗೂ ಟ್ರೋಫಿ ಗೆಲ್ಲದೇ ಇದ್ದರೂ ಕೂಡ ಎರಡೂ ಬಲಿಷ್ಠ ತಂಡಗಳು. ಆದರೆ ಎರಡೂ ತಂಡಗಳ ಪೈಕಿ ಯಾವುದು ಬಲಿಷ್ಠ ತಂಡ ಎಂದು ನೋಡೋದಾದ್ರೆ ಎರಡೂ ತಂಡಗಳು ಸಮಬಲದ ಪೈಪೋಟಿ ನೀಡಿವೆ.
Aslo Read : PBKS vs MI Punjab : ಐಪಿಎಲ್ 2025 ಫೈನಲ್ ಖುಷಿಯಲ್ಲಿದ್ದ ಶ್ರೇಯಸ್ ಅಯ್ಯರ್, ಪಂಜಾಬ್ ತಂಡಕ್ಕೆ ಬಿಸಿಸಿಐ ಶಾಕ್
ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಒಟ್ಟು 36 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಎರಡೂ ತಂಡಗಳು ತಲಾ 18 ಪಂದ್ಯಗಳಲ್ಲಿ ಗೆಲುವು ಕಂಡಿವೆ. ಅಲ್ಲದೇ 18 ಪಂದ್ಯಗಳಲ್ಲಿ ಸೋಲುಂಡಿವೆ. ಆರ್‌ಸಿಬಿ ತಂಡ ಪಂಜಾಬ್ ವಿರುದ್ದ ಅತೀ ಹೆಚ್ಚು 241ರನ್ ಗಳಿಸಿದ್ರೆ, ಪಂಜಾಬ್ ಕಿಂಗ್ಸ್ ತಂಡ 232 ರನ್‌ಗಳಿಸಿದೆ. ಎರಡೂ ತಂಡಗಳಿಗೆ ಹೋಲಿಸಿದ್ರೆ ಆರ್‌ಸಿಬಿ ಅತೀ ಕಡಿಮೆ ರನ್‌ಗೆ ಆಲೌಟಾಗಿತ್ತು. ಆರ್‌ಸಿಬಿ ಅತೀ ಕಡಿಮೆ 84 ರನ್ ಗಳಿಸಿದ್ರೆ, ಪಂಜಾಬ್ 88 ರನ್‌ಗಳಿಸಿದೆ.
IPL 2025 Final: Royal Challengers Bangalore vs Punjab Kings Who will win the IPL title?