ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಐಪಿಎಲ್‌ಗೆ ಸಿದ್ದತೆಯನ್ನು ನಡೆಸುತ್ತಿದೆ. ಪ್ರಮುಖವಾಗಿ ಮುಂದಿನ ಋತುವಲ್ಲಿ ಆರ್‌ಸಿಬಿ ತಂಡವನ್ನು ಕನ್ನಡಿಗ ಮುನ್ನೆಡೆಸುವುದು ಬಹುತೇಕ ಫಿಕ್ಸ್. ಅಲ್ಲದೇ ಆರ್‌ಸಿಬಿ ಯಾವ ಆಟಗಾರರನ್ನು ಈ ಬಾರಿ ಉಳಿಸಿಕೊಳ್ಳಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

IPL ಫ್ರಾಂಚೈಸಿಗಳು IPL 2025 ಮೆಗಾ ಹರಾಜಿಗೆ ಸಿದ್ದತೆ ನಡೆಸಿದೆ. ಈಗಾಗಲೇ ತಂಡಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಿದ್ದ ಪಡಿಸಿಕೊಳ್ಳುತ್ತಿದೆ. ಮೆಗಾ ಹರಾಜಿನ ದಿನಾಂಕ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿವೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಬಿಡುಗಡೆ ಹೊಂದಿರುವ ರಾಹುಲ್ ಈ ಬಾರಿ ತವರು ತಂಡವನ್ನು ಸೇರಿಕೊಳ್ಳುವುದು ಖಚಿತ.
ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ಆರು ಮಂದಿ ಆಟಗಾರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಸ್ಟಾರ್ ಆಟಗಾರರನ್ನು ತಂಡಗಳು ಉಳಿಸಿಕೊಳ್ಳಳು ಮುಂದಾಗಿವೆ. ಆದರೆ ಕಳೆದ ಬಾರಿಯ ಐಪಿಎಲ್ ನಿರ್ವಹಣೆಯ ಹಿನ್ನೆಲೆಯಲ್ಲಿ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಮೆಂಟರ್ ಜಹೀರ್ ಖಾನ್ ಅವರು ಕೆಎಲ್ ರಾಹುಲ್ ಅವರನ್ನು ಲಕ್ನೋ ತಂಡದಲ್ಲಿ ಉಳಿಸಿಕೊಳ್ಳಲು ಅಸಕ್ತಿ ತೋರಿಸಿಲ್ಲ. ಹೀಗಾಗಿಯೇ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಸಿದ್ದವಾಗಿವೆ.
ಇದನ್ನು ಓದಿ : ಆರ್‌ಸಿಬಿ ಮುಂದಿನ ನಾಯಕ ಯಾರು ? ವಿರಾಟ್ ಕೊಹ್ಲಿ Vs ಕೆಎಲ್ ರಾಹುಲ್ ನಡುವೆ ಬಿಗ್‌ಫೈಟ್

ಇನ್ನು ಆರ್‌ಸಿಬಿ ತಂಡ ಈಗಾಗಲೇ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಳ್ಳುವುದು ಖಚಿತ. ಮುಂದಿನ ಋತುವಿನಲ್ಲಿ ಯುವ ಆಟಗಾರ ಯಶ್ ದಯಾಳ್ ಕೂಡ ಫ್ರಾಂಚೈಸಿಗಾಗಿ ಆಡುವ ನಿರೀಕ್ಷೆಯಿದೆ. ಇನ್ನು RCB KL ರಾಹುಲ್ ಅವರನ್ನು ಬಿಡ್ ಮಾಡುತ್ತದೆ. ಒಂದೊಮ್ಮೆ ಕೆಎಲ್ ರಾಹುಲ್ ಆರ್‌ಸಿಬಿ ತಂಡವನ್ನು ಸೇರ್ಪಡೆ ಆದ್ರೆ ಅವರೇ ಬೆಂಗಳೂರು ತಂಡದ ನಾಯಕರಾಗುವುದು ಖಚಿತ.
ಇನ್ನೊಂದೆಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಬ್ ಪಂತ್ ಅವರಿಗೆ ಕೋಕ್ ಕೊಡಲು ರೆಡಿಯಾಗಿದೆ. ಅಲ್ಲದೇ ಮುಂಬೈ ತಂಡದಿಂದಲೂ ಇಶಾನ್ ಕಿಶನ್ ದೂರವಾಗುವ ಸಾಧ್ಯತೆಯಿದೆ. ಹೀಗಾಗಿ ಈ ಇಬ್ಬರು ಆಟಗಾರರ ಖರೀದಿಗೆ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಗೆ ಮುಂದಾಗಿದೆ.
ಇದನ್ನು ಓದಿ : ಎಂಎಸ್ ಧೋನಿ ಐಪಿಎಲ್‌ಗೆ ನಿವೃತ್ತಿ? ಲೆಜೆಂಡ್ಸ್ ಲೀಗ್ ಸುಳಿವುಕೊಟ್ಟ ಸುರೇಶ್ ರೈನಾ
ಈಗಾಗಲೇ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ಗೆ 40 ವರ್ಷ ವಯಸ್ಸಾಗಿರುವುದರಿಂದ ಆರ್‌ಸಿಬಿ ನಾಯಕನ ಹುಡುಕಾಟದಲ್ಲಿದೆ ಮತ್ತು ದೀರ್ಘಕಾಲದವರೆಗೆ ಮುಂದುವರಿಯುವ ನಾಯಕನನ್ನು ಮ್ಯಾನೇಜ್‌ಮೆಂಟ್ ಬಯಸಿದೆ. ರಾಹುಲ್ ಈಗಾಗಲೇ 2013-2016ರ ಅವಧಿಯಲ್ಲಿ ತಂಡಕ್ಕಾಗಿ ಆಡಿದ್ದು, 19 ಪಂದ್ಯಗಳಲ್ಲಿ 37.90 ಸರಾಸರಿಯಲ್ಲಿ 417 ರನ್ ಮತ್ತು 145.29 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದ್ದಾರೆ.
IPL 2025 retention list KL Rahul enter RCB for IPL 2025