(IPL Auction Day 2 Live Updates In Kannada: ಐಪಿಎಲ್ ಹರಾಜು ಪ್ರಕ್ರಿಯೆಯ ಎರಡನೆ ದಿನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಒಟ್ಟು 7 ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅವರಲ್ಲಿ ಓರ್ವ ಆಟಗಾರ ಕನ್ನಡಿಗ. ಕೊನೆಗೂ ಓರ್ವ ಕರ್ನಾಟಕದ ಆಟಗಾರರನ್ನಾದರೂ ಆರ್‌ಸಿಬಿ ತನ್ನದಾಗಿಸಿಕೊಂಡಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದ- ಕನ್ನಡದ ಯುವ, ಪ್ರತಿಭಾನ್ವಿತ ಆಟಗಾರ ಅನೀಶ್ವರ್ ಗೌತಮ್ (Aneeshwar Gautam) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಬಳಗಕ್ಕೆ (IPL Auction 2022 Day 2 Highlights) ಸೇರಿಸಿಕೊಂಡಿದೆ.
ಈ ಮುನ್ನ 19 ವರ್ಷದೊಳಗಿನ ಭಾರತದ ಕ್ರಿಕೆಟ್ ತಂಡವನ್ನು ಅನೀಶ್ವರ್ ಗೌತಮ್ ಅವರು ಪ್ರತಿನಿಧಿಸಿದ್ದರು. ಜೊತೆಗೆ ಕರ್ನಾಟಕ ತಂಡದ ಪರವಾಗಿ ಅಮೋಘ ಪ್ರದರ್ಶನ ನೀಡಿ (Aneeshwar Gautam Profile Biography and Stats ಮನ್ನಣೆ ಗಳಿಸಿದ್ದರು. ಅವರನ್ನು ಆರ್‌ಸಿಬಿ 20 ಲಕ್ಷಕ್ಕೆ ತನ್ನ ಮಡಿಲಿಗೆ ಹಾಕಿಕೊಂಡಿದ್ದು ಕನ್ನಡಿಗ ಆಟಗಾರನಿಗೆ ಕೊನೆಗೂ ಅವಕಾಶ ನೀಡಿದಂತಾಗಿದೆ.
ಸ್ವಾಗತ, Aneeshwar! 🙏🏻
— Royal Challengers Bangalore (@RCBTweets) February 13, 2022
Secured one for the FUTURE! 💪🏻#PlayBold #WeAreChallengers #IPLMegaAuction #IPL2022 #IPLAuction
ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯ ಎರಡನೆ ದಿನವಾದ ಇಂದು (ಫೆಬ್ರವರಿ 13) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಇಬ್ಬರು ಆಟಗಾರರನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ನಿನ್ನೆ ಅಂದರೆ ಮೊದಲ ದಿನದಲ್ಲಿ ಒಟ್ಟು 8 ಆಟಗಾರರನ್ನು ಖರೀದಿಸಿದ್ದ ಆರ್‌ಸಿಬಿ ಇಂದು ಅಂದರೆ 2ನೇ ದಿನ (IPL Auction Day 2 Updates) ಆಲ್ರೌಂಡರ್ ಮಹಿಪಾಲ್ ಲೋಮ್ರರ್ ಅವರನ್ನು 95 ಲಕ್ಷಕ್ಕೆ ತನ್ನದಾಗಿಸಿಕೊಂಡಿತು. ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಶೆರ್ಫಾನ್ ರುದರ್ಫೋರ್ಡ್ ಅವರನ್ನು 1 ಕೋಟಿ ನೀಡಿ ತನ್ನ ಪಾಳಯಕ್ಕೆ ಸೇರಿಸಿಕೊಂಡಿದೆ. ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ 8 ಆಟಗಾರರಿಗೆ 47 ಕೋಟಿ 75 ಲಕ್ಷದಷ್ಟು ದೊಡ್ಡ ಹಣವನ್ನು ಖರ್ಚು ಮಾಡಿದ್ದ ಆರ್‌ಸಿಬಿ ಖರೀದಿಸಿತ್ತು.
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 2
(IPL Auction 2022 Day 2 Highlights Aneeshwar Gautam sold to RCB)