ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ.

ಕನ್ನಡಿಗ ದೇವದತ್ ಪಡಿಕ್ಕಲ್ (63) ಮತ್ತು ನಾಯಕ ವಿರಾಟ್ ಕೊಹ್ಲಿ (ಅಜೇಯ 72) ಅವರ ಭರ್ಜರಿ ಆಟದ ನೆರವಿನಿಂದ ಬೆಂಗಳೂರು ತಂಡ 8 ವಿಕೆಟ್ ಗಳ ಗೆಲುವು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಸ್ಥಾನ್ ರಾಯಲ್ಸ್ ತಂಡಕ್ಕೆ ಯಜ್ವೇಂದ್ರ ಚಹಲ್ ಹಾಗೂ ಉದಾನಾ ಮಾರಕ ದಾಳಿ ನಡೆಸಿದ್ರು.

ಆದರೆ ಲೊಮ್ರೋರ್ 47, ರಾಹುಲ್ ತೆವಾಟಿಯಾ 24 ಹಾಗೂ ಜೋಸ್ ಬಟ್ಲರ್ 22 ರನ್ ನೆರವಿನಿಂದ ರಾಯಸ್ಥಾನ್ ರಾಯಲ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು.

ಯಜ್ವೇಂದ್ರ ಚಹಲ್ 24 ರನ್ ನೀಡಿ 3 ವಿಕೆಟ್ ಪಡೆದ್ರೆ, ಉದಾನ 41 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನ್ ತಂಡಕ್ಕೆ ಆಘಾತ ನೀಡಿದ್ರು.

ನಂತರ ಬ್ಯಾಟಿಂಗ್ ಗೆ ಇಳಿದ ರಾಯಲ್ ಬೆಂಗಳೂರು ತಂಡಕ್ಕೆ ನಾಯಕ ವಿರಾಟ್ ಕೊಯ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆರಂಭವೊದಗಿಸಿದ್ರು. ದೇವದತ್ತ ಪಡಕ್ಕಲ್ ಭರ್ಜರಿ ಅರ್ಧ ಶತಕದ ನೆರವಿನಿಂದ 63 ರನ್ ಗಳಿಸಿದ್ರೆ, ವಿರಾಟ್ ಕೊಯ್ಲಿ ಕೂಡ ಅರ್ಧಶತಕದ ಮೂಲಕ 72 ರನ್ ಕಲೆ ಹಾಕಿದ್ರು.

ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 158 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿದೆ.