ಥಾಣೆ : ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (Indian Street Premier League 2025) ಅಮಿತಾಬ್ ಬಚ್ಚನ್ ಮಾಲೀಕತ್ವದ ಮಾಝಿ ಮುಂಬೈ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಫಾಲ್ಕನ್ ರೈಸಸ್ ಹೈದ್ರಾಬಾದ್ ತಂಡವನ್ನು 5 ವಿಕೆಟ್ ಅಂತರದಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ಥಾಣೆಯ ದಾದೋಜಿ ಕೊಂಡದೇವ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಫಾಲ್ಕನ್ ರೈಸಸ್ ಹೈದ್ರಾಬಾದ್ ತಂಡಕ್ಕೆ ಆರಂಭಿಕ ಆಟಗಾರರನೇ ಕೈ ಕೊಟ್ಟಿದ್ರು. ಭರವಸೆಯ ಆಟಗಾರ ಪ್ರಥಮೇಶ್ ಮ್ಹಾತ್ರೆ (Prathmesh Mhatre) 4 ಎಸೆತಗಳನ್ನು ಎದುರಿಸಿ ಕೇವಲ 4 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರೆ, ಖ್ಯಾತ ಆಟಗಾರ ಕೃಷ್ಣ ಸತ್ಪುತೆ (Krishna Satpute) ಕೇವಲ 1 ರನ್ ಗೆ ವಿಕೆಟ್‌ಗೆ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ರು.
Also Read : ISPL 2025 : ಐಎಸ್‌ಪಿಎಲ್ 2026 ರ ಆವೃತ್ತಿಗೆ ಎರಡು ಹೊಸ ತಂಡ : ಇಂದು ಮೊದಲ ಕ್ವಾಲಿಫೈಯರ್ ಪಂದ್ಯ

ನಂತರ ಕ್ರೀಸ್‌ಗೆ ಬಂದ ಆಕಾಶ್ ಜಾಂಗಿಡ್ (Aakash Jangid) 17 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 23 ರನ್ ಬಾರಿಸಿದ್ರು. ಆದರೆ ಮತ್ತೊಂದೆಡೆ ಯಾವೊಬ್ಬ ಆಟಗಾರರು ಕೂಡ ಕ್ರೀಸ್‌ಗೆ ಅಂಟಿಕೊಂಡು ಆಡಲು ವಿಫಲರಾದ್ರು. ಕನ್ನಡಿಗ ರಾಜೇಶ್ ಪೂಜಾರಿ (ರಾಜಾ ಸಾಲಿಗ್ರಾಮ) ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ್ರು.
ಫಾಲ್ಕನ್ ರೈಸಸ್ ಹೈದ್ರಾಬಾದ್ ತಂಡ ಅಂತಿಮವಾಗಿ 9.4 ಓವರ್‌ಗಳಲ್ಲಿ 70ರನ್‌ಗಳಿಗೆ ಆಲೌಟ್ ಆಯಿತು. ಮಾಝಿ ಮುಂಬೈ (Majhi Mumbai) ತಂಡದ ಪರ ಅಭಿಷೇಕ್ ಕುಮಾರ್ ದಲ್ಹೋರ್ (Abhishek Kumar Dalhor) 13 ರನ್ ನೀಡಿ 3 ವಿಕೆಟ್ ಪಡೆದುಕೊಂಡ್ರೆ, ರಾಜೇಂದ್ರ ಸಿಂಗ್ 9 ರನ್‌ಗೆ 2 ವಿಕೆಟ್, ರಜತ್ ಮುಂಡೆ 14 ರನ್ ನೀಡಿ 2 ವಿಕೆಟ್ ಹಾಗೂ ಅಂಕುರ್ ಸಿಂಗ್ 1 ರನ್ ನೀಡಿ 2 ವಿಕೆಟ್ ಪಡೆದುಕೊಂಡಿದ್ದಾರೆ.
Also Read : Rohit Sharma Retirement : ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನಿವೃತ್ತಿ ? ಹೇಳಿದ್ದೇನು ಹಿಟ್‌ಮ್ಯಾನ್
ಫಾಲ್ಕನ್ ರೈಸಸ್ ಹೈದ್ರಾಬಾದ್ ತಂಡ ನೀಡಿದ್ದ ಸವಾಲು ಬೆನ್ನ್ತಲು ಹೊರಟ ಮಾಝಿ ಮುಂಬೈ ತಂಡಕ್ಕೆ ಆರಂಭಿಕ ಆಟಗಾರರು ಉತ್ತಮ ಆರಂಭ ನೀಡಲು ವಿಫಲರಾದ್ರು. ರಜತ್‌ಮುಂಡೆ 10ರನ್ ಬಾರಿಸಿದ್ರೆ, ಮೊಹಮ್ಮದ್ ನದೀಮ್ 5 ರನ್ ಗೆ ವಿಕೆಟ್ ಒಪ್ಪಿಸಿದ್ರು. ಆದರೆ ನಂತರ ಜೊತೆಯಾದ ಯೋಗೇಶ್ ಪೆಂಕರ್ (Yogesh Penkar) 16 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿದ್ರೆ, ಮಹೇಂದ್ರ ಚಂದನ್ ( Mahendra Chandan ) 9 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 19 ರನ್ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದ್ರು.

ಮಾಝಿ ಮುಂಬೈ ತಂಡ ಅಂತಿಮವಾಗಿ 8.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 73 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಫಾಲ್ಕನ್ ರೈಸಸ್ ಹೈದ್ರಾಬಾದ್ ತಂಡದ ಪರ ವಿಶ್ವಜಿತ್ 22 ರನ್ ನೀಡಿ 2 ವಿಕೆಟ್ ಪಡೆದುಕೊಂಡ್ರೆ, ಮನ್ಸೂರ್ ಪ್ರವೀಣ್ ಕುಮಾರ್‌ಹಾಗೂ ಇರ್ಫಾನ್ ಉಮೀರ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
ಮಾಝಿ ಮುಂಬೈ ತಂಡ ಫೈನಲ್ ಪ್ರವೇಶಿಸಿದ್ರೆ, ಸೋತ ಫಾಲ್ಕನ್ ರೈಸಸ್ ಹೈದ್ರಾಬಾದ್ ತಂಡ ಎರಡನೇ ಕ್ವಾಲಿಫೈಯರ್ ಅವಕಾಶ ಪಡೆದುಕೊಂಡಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಶ್ರೀನಗರ್ ಕೆ ವೀರ್ ತಂಡವನ್ನು ಬೆಂಗಳೂರು ಸ್ಟ್ರೈಕರ್ಸ್ ತಂಡ (Srinagar Ke Veer vs Bangalore Strikers, Eliminato) ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಫಾಲ್ಕನ್ ರೈಸಸ್ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ.
ISPL 2025 Qualifier 1 Majhi Mumbai enter to ISPL final