ಟೋಕಿಯೋ : ಭಾರತ ಖ್ಯಾತ ಅಥ್ಲೆಟ್ ಕಮಲಪ್ರೀತ್ ಕೌರ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶ ಪಡೆದಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಂತಿಮ ಹಂತಕ್ಕೆ ಪ್ರವೇಶಿಸಿದ್ದು, ಪದಕ ನಿರೀಕ್ಷೆ ಹುಟ್ಟಿಸಿದ್ದಾರೆ.

ಅಗಸ್ಟ್ ೨ರಂದು ಡಿಸ್ಕಸ್ ಥ್ರೋ ಫೈನಲ್ ಸುತ್ತು ನಡೆಯಲಿದೆ. ಅಹರ್ತಾ ಸುತ್ತಿನಲ್ಲಿ ಕಮಲ್ ಪ್ರೀತ್ ಕೌರ್ ಅವರು ೬೪ ಮೀಟರ್ ದೂರ ಸಾಧನೆಯೊಂದಿಗೆ ಫೈನಲ್ ಪ್ರವೇಶ ಪಡೆದು ಕೊಂಡಿದ್ದಾರೆ. ಸತತ ಎರಡು ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದ ಸಾಂಡ್ರಾ ಪೆರ್ಕೋವಿಕ್ ಅವರು ೬೩.೭೫ ಮೀಟರ್ ಸಾಧನೆಯನ್ನು ತೋರಿದ್ದರು. ಆದ್ರೆ ಕಮಲ್ ಪ್ರೀತ್ ಕೌರ್ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿರುವ ಕಮಲ್ ಪ್ರೀತ್ ಕೌರ್ ಫೈನಲ್‌ನಲ್ಲಿಯೂ ಅದೇ ಪ್ರದರ್ಶನವನ್ನು ಮುಂದುವರಿಸಿದ್ರೆ ಭಾರತಕ್ಕೆ ಈ ಬಾರಿ ಪದಕ ಒಲಿಯುವುದು ಖಚಿತ. ಬಾಕ್ಸಿಂಗ್, ಬ್ಯಾಡ್ಮಿಂಟನ್‌ನಲ್ಲಿಯೂ ಭಾರತ ಪದಕದ ನಿರೀಕ್ಷೆಯಲ್ಲಿದೆ.