ಬೆಂಗಳೂರು : ಕರ್ನಾಟಕ ಕ್ರಿಕೆಟ್ ತಂಡ ಮಾಜಿ ಆಟಗಾರ ವಿಜಯ್ ಕೃಷ್ಣ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಬಹು ಅಂಗಾಂಗ ವೈಫಲ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಅವರಿಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ವಿಜಯ ಕೃಷ್ಣ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಹ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಹೃದಯಾಘಾತದಿಂದ ಅವರು ಇಂದು ಮುಂಜಾನೆ 5.30ರ ಸುಮಾರಿ ಸಾವನ್ನಪ್ಪಿದ್ದಾರೆ.
ಎಡಗೈ ಆಟಗಾರರಾಗಿದ್ದ ಬಿ.ವಿಜಯಕೃಷ್ಣ 1968-69ನೇ ಸಾಲಿನಲ್ಲಿ ಮೊದಲ ಬಾರಿ ರಣಜಿ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಹೈದ್ರಾಬಾದ್ ವಿರುದ್ದ ಮೊದಲ ಪಂದ್ಯದಲ್ಲಿಯೇ 3 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದರು. ಸುಮಾರು 15 ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ವಿಜಯ ಕೃಷ್ಣ ಅವರು 80 ಪಂದ್ಯಗಳ ಮೂಲಕ 2000ಕ್ಕೂ ಅಧಿಕ ರನ್ ಬಾರಿಸಿದ್ದಾರೆ.
ಲೆಫ್ಟ್ ಆರ್ಮ್ ಬೌಲರ್ ಆಗಿರೂ ಗುರುತಿಸಿಕೊಂಡಿರುವ ವಿಜಯ ಕೃಷ್ಣನ್ ಅವರು 194 ವಿಕೆಟ್ ಪಡೆದು ಸಾಧನೆ ಮಾಡದ್ದಾರೆ. ಕಾರ್ ಶೆಡ್ ನಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದ ವಿಜಯ್ ಕೃಷ್ಣ ಅವರು ರಣಜಿ ಪಂದ್ಯಗಳ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ಬರೆದಿದ್ದಾರೆ.