ಇಂಡಿಯನ್ ಪ್ರೀಮಿಯರ್ ಲೀಗ್ (Indian Premier Leauge -IPL 2025) ನಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ಈ ನಡುವಲ್ಲೇ ಕೆಎಲ್ ರಾಹುಲ್ 2026 ಟಿ20 ವಿಶ್ವಕಪ್ ಆಡುವುದು ಖಚಿತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಕೆಎಲ್ ರಾಹುಲ್ ಹಲವರ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅದ್ಬುತ ಶತಕ ಸಿಡಿಸಿರುವ ರಾಹುಲ್ ಎಲ್ಲಾ ಕ್ರಮಾಂಕದಲ್ಲಿಯೂ ಬ್ಯಾಟಿಂಗ್‌ಗೆ ಸಿದ್ದ ಎಂದಿದ್ದಾರೆ. ಮುಂದಿನ ಅಗಸ್ಟ್ ತಿಂಗಳಲ್ಲಿ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಭಾರತ ಟಿ20 ಸರಣಿಗೆ ರಾಹುಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡುವ ಸಾಧ್ಯತೆಯಿದೆ.
2026ರಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಟಿ20 ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅನುಭವಿ ಆಟಗಾರರ ಕೊರತೆ ಭಾರತ ತಂಡದಲ್ಲಿ ಎದ್ದು ಕಾಣುತ್ತಿದೆ. ಜೊತೆಗೆ ಅನುಭವಿ ವಿಕೆಟ್ ಕೀಪರ್ ಅಗತ್ಯವಿದ್ದು, ಮುಂಬರುವ ವಿಶ್ವಕಪ್‌ಗೆ ಕೆಎಲ್ ರಾಹುಲ್ ಭಾರತ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 33 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಕೆಎಲ್ ರಾಹುಲ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 65 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 112* ರನ್ ಗಳಿಸಿದರು. ಡೆಲ್ಲಿ ತಂಡ ಸೋಲನ್ನು ಕಂಡರೂ ಕೂಡ ರಾಹುಲ್ ಬ್ಯಾಟಿಂಗ್ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು.
ಈ ಬಾರಿಯ ಐಪಿಎಲ್ ಋತುವಿನಲ್ಲಿ ಕೆಎಲ್ ರಾಹುಲ್ ಒಟ್ಟು 11 ಪಂದ್ಯಗಳಲ್ಲಿ 33 ಎಸೆತಗಳನ್ನು ಎದುರಿಸಿ 148.04 ರ ಆರೋಗ್ಯಕರ ಸ್ಟ್ರೈಕ್ ರೇಟ್‌ನಲ್ಲಿ 493 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕ ಮತ್ತು ಒಂದು ಶತಕ ಒಳಗೊಂಡಿದೆ. ಟಿ20 ಕ್ರಿಕೆಟ್‌ನಲ್ಲಿ 8,000ರನ್ ಗಳಿಸಿದ ಅತ್ಯಂತ ವೇಗದ ಭಾರತೀಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು.
Also Read : IPL 2025 : ಐಪಿಎಲ್ ನಿಂದ ಬಿಸಿಸಿಐ ಎಷ್ಟು ಆದಾಯ ತೆರಿಗೆ ಪಾವತಿಸುತ್ತೆ ಗೊತ್ತಾ ?
KL Rahul – IPL 2025 ರಲ್ಲಿ KL ರಾಹುಲ್ ಸಾಧನೆ (ಮೇ 20 ರಂತೆ)
ಇನ್ನಿಂಗ್ಸ್: 11
ರನ್ಗಳು: 493
ಸರಾಸರಿ: 61.63
ಸ್ಟ್ರೈಕ್ ರೇಟ್: 148.05
ಭಾರತ ತಂಡದಲ್ಲಿ ಸದ್ಯ ಟಿ20 ತಂಡದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಂಜು ಸ್ಯಾಮ್ಸನ್ ಕೂಡ ಆರಂಭಿಕರ ಸ್ಥಾನಕ್ಕೆ ಪೈಪೋಟಿ ಒಡ್ಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಕೂಡ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ಒಂದೊಮ್ಮೆ ಕೆಎಲ್ ರಾಹುಲ್ ಟಿ20 ತಂಡಕ್ಕೆ ಆಯ್ಕೆಯಾದ್ರೆ ಯಾರ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಇನ್ನೊಂದಡೆಯಲ್ಲಿ ರಾಹುಲ್ ಒಂದನೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆಯಿದೆ.
ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ ..?
2022 ರ ನವೆಂಬರ್‌ನಲ್ಲಿ ಕೆಎಲ್ ರಾಹುಲ್ ಕೊನೆಯದಾಗಿ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ T20I ಆಡಿದ್ದರು. ಕೇವಲ 5 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದರು. ಈ ಸರಣಿಯಲ್ಲಿ ರಾಹುಲ್ (21.33 ಸರಾಸರಿ ಮತ್ತು 120.75 ಸ್ಟ್ರೈಕ್ ರೇಟ್‌ನಲ್ಲಿ 128 ರನ್‌ಗಳು) ಅವರ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಅಂದಿನಿಂದ ಇಂದಿನವರೆಗೂ ರಾಹುಲ್ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ.
Also Read : ISPL 2025 : ಐಎಸ್‌ಪಿಎಲ್ 2026 ರ ಆವೃತ್ತಿಗೆ ಎರಡು ಹೊಸ ತಂಡ : ಇಂದು ಮೊದಲ ಕ್ವಾಲಿಫೈಯರ್ ಪಂದ್ಯ
ಆದರೆ ಈ ಬಾರಿಯ ಐಪಿಎಲ್ ರಾಹುಲ್ ಅವರಿಗೆ ಹೊಸ ಅವಕಾಶವನ್ನು ತೆರೆದು ಬಿಟ್ಟಿದೆ. ICC ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವು ಪಂದ್ಯಾವಳಿಗಳಲ್ಲಿಯೂ ರಾಹುಲ್ ಅದ್ಬುತ ಆಟ ಪ್ರದರ್ಶಿಸಿದ್ದಾರೆ. ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯರು. ಬ್ಯಾಟಿಂಗ್ ಜೊತೆಗೆ ಕೀಪಿಂಗ್ ಮಾಡುತ್ತಿರೋದು ರಾಹುಲ್‌ಗೆ ಪ್ಲಸ್ ಪಾಯಿಂಟ್. ಮತ್ತೊಂದೆಡೆಯಲ್ಲಿ ಕೆಎಲ್ ರಾಹುಲ್ ಅವರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ನೇಮಕ ಮಾಡುವಂತೆ ಒತ್ತಾಯ ಕೇಳಿಬಂದಿದೆ.
KL Rahul Century in IPL 2025 KL Rahul to play in T20 World Cup 2026 in Kannada News