ಸೋಮವಾರ, ಏಪ್ರಿಲ್ 28, 2025
HomeSportsCricketKL Rahul Comeback update : ಏಷ್ಯಾ ಕಪ್‌ನಲ್ಲೇ ಟೀಮ್ ಇಂಡಿಯಾಗೆ ರಾಹುಲ್ ಕಂಬ್ಯಾಕ್, ಎನ್‌ಸಿಎನಲ್ಲಿ...

KL Rahul Comeback update : ಏಷ್ಯಾ ಕಪ್‌ನಲ್ಲೇ ಟೀಮ್ ಇಂಡಿಯಾಗೆ ರಾಹುಲ್ ಕಂಬ್ಯಾಕ್, ಎನ್‌ಸಿಎನಲ್ಲಿ ಕನ್ನಡಿಗನ ಭರ್ಜರಿ ತಾಲೀಮು

- Advertisement -

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಮುಂಬರುವ ಏಷ್ಯಾ ಕಪ್ ಟೂರ್ನಿಯ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ (KL Rahul Comeback update) ಮಾಡಲಿದ್ದಾರೆ. ಬಲತೊಡೆಯ ಸ್ನಾಯು ಸೆಳೆತಕ್ಕೆ ಶಸ್ತ್ರಚಿಕಿತ್ಸೆಗೊಳಗಾಗಿ ಇದೀಗ ಚೇತರಿಸಿಕೊಂಡಿರುವ ಕೆ.ಎಲ್ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಕಠಿಣ ತಾಲೀಮು ನಡೆಸುತ್ತಿದ್ದಾರೆ. ಪ್ರತೀ ದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸುತ್ತಿರುವ ರಾಹುಲ್ ಟೀಮ್ ಇಂಡಿಯಾ ಕಂಬ್ಯಾಕ್‌ಗೆ ಸಜ್ಜಾಗುತ್ತಿದ್ದಾರೆ.

https://twitter.com/kunaalyaadav/status/1686646894196625408?s=20

ಮೂಲಗಳ ಪ್ರಕಾರ ರಾಹುಲ್ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಟೀಮ್ ಇಂಡಿಯಾ ಏಕದಿನ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ಥಂಭವಾಗಿರುವ ಕೆ.ಎಲ್ ರಾಹುಲ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿರುವ ರಾಹುಲ್, ಮಧ್ಯಮ ಕ್ರಮಾಂಕದ ಆಧಾರಸ್ಥಂಭವೂ ಆಗಿದ್ದಾರೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 23ರವರೆಗೆ ಭಾರತದ
ಆತಿಥ್ಯದಲ್ಲೇ ನಡೆಯಲಿದೆ.

ವಿಶ್ವಕಪ್‌ಗೂ ಮುನ್ನ ರಾಹುಲ್ ಅವರಿಗೆ ಕೆಲ ಅಭ್ಯಾಸ ಪಂದ್ಯಗಳ ಅವಶ್ಯಕತೆಯಿರುವ ಕಾರಣ ಏಷ್ಯಾಕಪ್ ಟೂರ್ನಿ ಮತ್ತು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಏಷ್ಯಾ ಕಪ್ ಟೂರ್ನಿ (Asia Cup 2023) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 22ರಿಂದ 27ವರೆಗೆ ನಡೆಯಲಿದೆ. ಇದನ್ನೂ ಓದಿ : India playing 200th t20 : ಇಂದಿನಿಂದ ಭಾರತ vs ವಿಂಡೀಸ್ ಟಿ20 ಸರಣಿ, ಟೀಮ್ ಇಂಡಿಯಾಗೆ 200 ಟಿ20 ಪಂದ್ಯ

ಟೀಮ್ ಇಂಡಿಯಾದಿಂದ ರಾಹುಲ್ ಅವರಿಗೆ ಸುದೀರ್ಘ ಬ್ರೇಕ್ ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಡುವಿನ ವೇಳೆಯನ್ನು ರಾಹುಲ್ ತಮ್ಮ ಸ್ನೇಹಿತರೊಂದಿಗೆ ಕಳೆಯುತ್ತಿದ್ದಾರೆ. ಕಳೆದ ಭಾನುವಾರವಷ್ಟೇ ರಾಹುಲ್ ತಮ್ಮ ಗೆಳೆಯರೊಂದಿಗೆ ಬನ್ನೇರುಘಟ್ಟ ಬಳಿಯಿರುವ Area83 resortಗೆ ಭೇಟಿ ನೀಡಿದ್ದರು. ಅಲ್ಲಿ ರಾಹುಲ್ ಮತ್ತು ಸ್ನೇಹಿತರು, ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. ಗನ್ ಶೂಟಿಂಗ್, ಬೋಟಿಂಗ್, ಗೋ-ಕಾರ್ಟಿಂಗ್ ಮತ್ತು ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದರು. ಆ ವೀಡಿಯೊವನ್ನು ರಾಹುಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

KL Rahul Comeback update: Rahul comeback for Team India in Asia Cup, Kannadigan’s great training in NCA

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular