ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ (KL rahul) ಅವರಿಗೆ ಜರ್ಮನಿಯಲ್ಲಿ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಗೆ ಜರ್ಮನಿಯಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಚೇತರಿಕೆಯ ಪ್ರಯಾಣ ಶುರುವಾಗಿದೆ (KL Rahul Health Report )ಎಂದು ಸ್ವತಃ ರಾಹುಲ್ ಅವರೇ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಬೇಕಿದ್ದ ರಾಹುಲ್, ತೊಡೆಸಂಧು (Groin Injury) ಗಾಯದ ಕಾರಣ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದರು. ರಾಹುಲ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದಿದ್ದ ರಾಹುಲ್, ನಂತರ ಗಾಯದ ಕಾರಣ ಇಂಗ್ಲೆಂಡ್ ಸರಣಿಗೂ ಅಲಭ್ಯರಾಗಿದ್ದರು. ಇದೀಗ ಜರ್ಮನಿಯಲ್ಲಿ ರಾಹುಲ್ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಪ್ರೇಯಸಿ ಆಥಿಯಾ ಶೆಟ್ಟಿ (Athiya Shetty) ರಾಹುಲ್ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ.
ಇನ್ನು ಕೆಲ ದಿನ ರಾಹುಲ್ ಮತ್ತು ಆಥಿಯಾ ಶೆಟ್ಟಿ ಜರ್ಮನಿಯಲ್ಲೇ ಇರಲಿದ್ದು, ನಂತರ ಮುಂಬೈಗೆ ವಾಪಸಾಗಲಿದ್ದಾರೆ. ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಾಹುಲ್ ಪುನಶ್ಚೇತನ ಶಿಬಿರಕ್ಕೆ ಹಾಜರಾಗಲಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಮೈದಾನಕ್ಕಿಳಿಯಲು ಕನಿಷ್ಠ ಆರು ವಾರಗಳ ಅವಶ್ಯಕತೆಯಿದೆ.
ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ಹಸಿದ ಭಿಕ್ಷುಕನಿಗೆ ಆಹಾರ ನೀಡಿ ಮಾನವೀಯತೆ ಮೆರೆದ ರಿಷಬ್ ಪಂತ್
ಇದನ್ನೂ ಓದಿ : ಇಂದಿನಿಂದ ಇಂಡಿಯಾ Vs ಇಂಗ್ಲೆಂಡ್ 5ನೇ ಟೆಸ್ಟ್: ಇಲ್ಲಿದೆ ಟೀಮ್ ಇಂಡಿಯಾದ ಸಂಭಾವ್ಯ Playing XI
ಇದನ್ನೂ ಓದಿ : ಪಾಂಡ್ಯ ಅಣ್ಣನೊಂದಿಗೆ ಕಿರಿಕ್.. ಸ್ವಂತ ರಾಜ್ಯಕ್ಕೆ ಗುಡ್‌ಬೈ.. ಟೀಮ್ ಇಂಡಿಯಾಗೆ ಎಂಟ್ರಿ.. ಟಿ20 ಸೆಂಚುರಿ.. ಇದು ಹೂಡ ಸಕ್ಸಸ್ ಸ್ಟೋರಿ
ಇದನ್ನೂ ಓದಿ : Eoin Morgan : ಇಂಗ್ಲಿಷ್ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಐರಿಷ್ ಆಟಗಾರ ; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ದಿಗ್ಗಜನ ವಿದಾಯ
ಇದನ್ನೂ ಓದಿ : ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್… ಹೊಸ ಟಿ20 ಲೀಗ್‌ನ ಹೆಸರೇನು ಗೊತ್ತಾ ?
KL Rahul Health Report Groin Injury Surgery success Athiya Shetty Caring for Rahul