ಸೋಮವಾರ, ಏಪ್ರಿಲ್ 28, 2025
HomeSportsCricketKL Rahul meets friends : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಹಳೇ ಗೆಳೆಯರನ್ನು ಭೇಟಿ ಮಾಡಿದ...

KL Rahul meets friends : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಹಳೇ ಗೆಳೆಯರನ್ನು ಭೇಟಿ ಮಾಡಿದ ರಾಹುಲ್

- Advertisement -

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದು (National Cricket Academy – NCA) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಬಲ ತೊಡೆಯ ಸ್ನಾಯು ಸೆಳೆತಕ್ಕೆ ಶಸ್ತ್ರಚಿಕಿತ್ಸೆಗೊಳಗಾದ ನಂತರ ಚೇತರಿಸಿಕೊಳ್ಳುತ್ತಿರುವ (KL Rahul meets friends) ರಾಹುಲ್ ಕಳೆದ 15 ದಿನಗಳಿಂದ ಎನ್‌ಸಿಎನಲ್ಲಿ ಟೀಮ್ ಇಂಡಿಯಾ ಕಂಬ್ಯಾಕ್ ಕಸರತ್ತು ನಡೆಸುತ್ತಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಾಹುಲ್, ತಮ್ಮ ಕರ್ನಾಟಕ ತಂಡದ ಸಹಪಾಠಿಗಳಾದ ಮಯಾಂಕ್ ಅಗರ್ವಾಲ್ ಮತ್ತು ಆರ್.ಸಮರ್ಥ್ ಅವರನ್ನು ಭೇಟಿ ಮಾಡಿದ್ದಾರೆ.

ಮಯಾಂಕ್ ಮತ್ತು ಸಮರ್ಥ್ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ NCAನಲ್ಲಿ ಅಭ್ಯಾಸ ನಡೆಸಲು ಆಗಮಿಸಿದ ವೇಳೆ ರಾಹುಲ್ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದ್ದಾರೆ. ಐಪಿಎಲ್ ವೇಳೆ ಬಲ ತೊಡೆಯ ಭಾಗದಲ್ಲಿ ಸ್ನಾಯು ಸೆಳೆತಕ್ಕೊಳಗಾಗಿದ್ದ ರಾಹುಲ್, ನಂತರ ಐಪಿಎಲ್ ಟೂರ್ನಿಯನ್ನು ಅರ್ಧದಲ್ಲೇ ತ್ಯಜಿಸಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

“ರಾಹುಲ್ ಅವರ ಚೇತರಿಕೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇನ್ನು ಒಂದು ತಿಂಗಳು ಅಥವಾ ಒಂದೂವರೆ ತಿಂಗಳಲ್ಲಿ ರಾಹುಲ್ ಫಿಟ್ ಆಗುವ ಸಾಧ್ಯತೆಯಿದೆ. ಸರ್ಜರಿ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವುದು ಸುಲಭವಲ್ಲ. ವಿಶ್ವಕಪ್ ಟೂರ್ನಿಗೆ (ICC World Cup 2023) ರಾಹುಲ್ ತುಂಬಾ ಇಂಪಾರ್ಟೆಂಟ್ ಆಟಗಾರ. ವಿಶ್ವಕಪ್‌ಗೂ ಮುನ್ನ ರಾಹುಲ್ ಕೆಲ ಏಕದಿನ ಪಂದ್ಯಗಳನ್ನು ಆಡಬೇಕೆಂಬುದು ನಮ್ಮ ಬಯಕೆ. ಅದಕ್ಕೆ ಏಷ್ಯಾ ಕಪ್ ಉತ್ತಮ ವೇದಿಕೆ. ಆದರೆ ಅದಕ್ಕೂ ಮೊದಲೇ ರಾಹುಲ್ ಫಿಟ್ ಆಗದೆ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೇ ಅವರನ್ನು ಆಡಿಸುವ ಯೋಚನೆಯಲ್ಲಿದ್ದೇವೆ” ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 31 ವರ್ಷದ ಕೆ.ಎಲ್ ರಾಹುಲ್ ಕಳೆದ ಭಾನುವಾರವಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ದಕ್ಷಿಣ ವಲಯ ತಂಡದಲ್ಲಿ ನಾಲ್ವರು ಕನ್ನಡಿಗರು :
ಬುಧವಾರ (ಜುಲೈ 5) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡ, ಉತ್ತರ ವಲಯ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Rajeshwari Gayakwad: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್

ಇದನ್ನೂ ಓದಿ : India tour of West Indies : ಕೆರಿಬಿಯನ್ ಚಾಲೆಂಜ್’ಗೆ ಇಂದಿನಿಂದ ಟೀಮ್ ಇಂಡಿಯಾ ಸಮರಾಭ್ಯಾಸ ಶುರು, ನಾಳೆ ತಂಡ ಸೇರಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ

ದಕ್ಷಿಣ ವಲಯ ತಂಡವನ್ನು ಆಂಧ್ರದ ಹನುಮ ವಿಹಾರಿ (Hanuma Vihari) ಮುನ್ನಡೆಸಲಿದ್ದು, ಕರ್ನಾಟಕದ ಬಲಗೈ ಓಪನರ್ ಮಯಾಂಕ್ ಅಗರ್ವಾಲ್ (Mayank Agarwal) ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರಾಜ್ಯದ ಮತ್ತೊಬ್ಬ ಭರವಸೆಯ ಬ್ಯಾಟ್ಸ್‌ಮನ್ ಆರ್.ಸಮರ್ಥ್, ಯುವ ಬಲಗೈ ವೇಗದ ಬೌಲರ್‌ಗಳಾದ ವೈಶಾಖ್ ವಿಜಯ್ ಕುಮಾರ್ ಮತ್ತು ವಿದ್ವತ್ ಕಾವೇರಪ್ಪ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

KL Rahul meets old friends: Rahul met old friends at the National Cricket Academy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular