Lionel Messi: ಫುಟ್ಬಾಲ್ ಲೋಕದ ದಿಗ್ಗಜ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೈನಾ ತಂಡವು ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮೂರನೇ ಬಾರಿಗೆ ಮುಡಿಗೇರಿಸಿಕೊಳ್ಳುವ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಫಿಫಾ ವರ್ಲ್ಡ್ ಕಪ್ ಪಂದ್ಯದ ಬಳಿಕ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ಲಿಯೋನೆಲ್ ಮೆಸ್ಸಿ ತಳ್ಳಿ ಹಾಕಿದ್ದು ಫುಟ್ಬಾಲ್ ಆಟದಲ್ಲಿ ತಾನು ಮುಂದುವರಿಯುತ್ತೇನೆಂದು ಹೇಳಿದ್ದು ಅಭಿಮಾನಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಇನ್ನು ಫಿಫಾ ವಿಶ್ವಕಪ್ ಪಂದ್ಯವನ್ನು ಗೆದ್ದ ಬಳಿಕ ಕಪ್ನ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಲಿಯೋನೆಲ್ ಮೆಸ್ಸಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಲಿಯೋನೆಲ್ ಮೆಸ್ಸಿ ಫಿಫಾ ವರ್ಲ್ಡ್ ಕಪ್ ಟ್ರೋಫಿಯ ಜೊತೆಯಲ್ಲಿ ಮಲಗಿರೋದನ್ನು ಕಾಣಬಹುದಾಗಿದೆ.
ತಾವು ಹಂಚಿಕೊಂಡಿರುವ ಫೋಟೋಗಳಿಗೆ ಲಿಯೋನೆಲ್ ಮೆಸ್ಸಿ ಸ್ಪ್ಯಾನಿಷ್ ಭಾಷೆಯಲ್ಲಿ ಗುಡ್ ಮಾರ್ನಿಂಗ್ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಒಂದು ಫೋಟೋದಲ್ಲಿ ಟ್ರೋಫಿಯ ಜೊತೆಯಲ್ಲಿ ಮೆಸ್ಸಿ ಮಲಗಿರೋದನ್ನು ಕಾಣಬಹುದಾಗಿದೆ. ಮತ್ತೊಂದು ಫೋಟೋದಲ್ಲಿ ಅವರು ಹಾಸಿಗೆಯಲ್ಲಿ ಮಲಗಿ ಟ್ರೋಫಿಯನ್ನು ತಬ್ಬಿಕೊಂಡಿದ್ದಾರೆ. ಅಂದಹಾಗೆ ಈಗಾಗಲೇ ಅವರು ಟ್ರೋಫಿಯ ಜೊತೆಗಿನ ಸಾಕಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಸ್ಟ್ ಹಂಚಿಕೊಂಡ ಕೇವಲ ಒಂದು ಗಂಟೆಗಳ ಒಳಗಾಗಿ 2.6 ಮಿಲಿಯನ್ಗೂ ಅಧಿಕ ಲೈಕ್ಸ್ ಸಂಪಾದಿಸಿದೆ. ಇದರ ಜೊತೆಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋಗೆ ಕಮೆಂಟ್ನ ಸುರಿಮಳೆಯನ್ನೇ ಹರಿಸಿದ್ದಾರೆ. ಅನೇಕ ಜಗತ್ತಿನ ರಾಜ ನೀವು ಎಂದು ಹೇಳಿದ್ದರೆ ಇನ್ನೂ ಕೆಲವರು ಫುಟ್ಬಾಲ್ ಲೋಕದಲ್ಲಿ ನಿಮಗಿಂತ ಶ್ರೇಷ್ಠ ಆಟಗಾರ ಮತ್ತೊಬ್ಬರಿಲ್ಲ ಎಂದಿದ್ದಾರೆ.
ಇದನ್ನು ಓದಿ : Corona in China : ಚೀನಾದಲ್ಲಿ ಕೊರೊನಾ ಆರ್ಭಟ : ಶವಗಳಿಂದಾಗಿ ಸ್ಮಶಾನಗಳು ಭರ್ತಿ !
ಇದನ್ನೂ ಓದಿ : Sachin Tendulkar Fans: ವಿಮಾನವೇರಿದ ಸಚಿನ್ ತೆಂಡೂಲ್ಕರ್‌ಗೆ ಕಾದಿದ್ದು ಅಚ್ಚರಿ.. ಕಾರಣವೇನು ಗೊತ್ತೇ?
Lionel Messi sleeps embracing the World Cup trophy, shares other pics too. Instagram post goes viral