ಟ್ರಿನಿಡಾಡ್ (ವೆಸ್ಟ್ ಇಂಡಿಸ್): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್, ನ್ಯೂಜಿಲೆಂಡ್’ನ ವೇಗದ ಬೌಲರ್ ಲ್ಯೂಕಿ ಫರ್ಗ್ಯುಸನ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರೂ ಮಾಡಲಾಗದ ದಾಖಲೆ ಬರೆದಿದ್ದಾರೆ. ನಾಲ್ಕು ಓವರ್’ಗಳಲ್ಲಿ ನಾಲ್ಕನ್ನೂ ಮೇಡನ್ ಮಾಡುವ ಮೂಲಕ ಲ್ಯೂಕಿ ಫರ್ಗ್ಯುಸನ್ (Lockie Ferguson) ವಿನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟ್ರಿನಿಡಾಡ್’ನ ಬ್ರಯಾನ್ ಲಾರಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ಪಪುವಾ ನ್ಯೂಗಿನಿ ವಿರುದ್ಧದ ಪಂದ್ಯದಲ್ಲಿ ಫರ್ಗ್ಯುಸನ್ ಈ ವಿಶ್ವದಾಖಲೆ ನಿರ್ಮಿಸಿದರು.

https://x.com/blackcaps/status/1802744707656663432?s=46
PNG ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿದ ಫರ್ಗ್ಯುಸನ್ ಒಂದೇ ಒಂದು ರನ್ ನೀಡದೆ 3 ವಿಕೆಟ್ ಉರುಳಿಸಿದರು. ಫರ್ಗ್ಯುಸನ್ ತಾವು ಎಸೆತ 24 ಎಸೆತಗಳಲ್ಲಿ ಒಂದೂ ವೈಡ್ ಅಥವಾ ನೋಬಾಲ್ ಎಸೆಯದಿದ್ದದ್ದು ವಿಶೇಷ. ಪಪುವಾ ನ್ಯೂಗಿನಿ ವಿರುದ್ಧದ ಪಂದ್ಯದಲ್ಲಿ ಲ್ಯೂಕಿ ಫರ್ಗ್ಯುಸನ್ ಬೌಲಿಂಗ್: 4-4-0-3
ಇದನ್ನೂ ಓದಿ : Gautam Gambhir India Coach: ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್, ತಿಂಗಳ ಅಂತ್ಯದಲ್ಲಿ ಘೋಷಣೆ !
https://x.com/blackcaps/status/1802744707656663432?s=46

ಲ್ಯೂಕಿ ಫರ್ಗ್ಯುಸನ್ ಎಸೆದ ಪ್ರತೀ ಎಸೆತದ ವಿವರ:
W,0,0,0,0,0,0,0,0,0,0,0,0,W,0,0,0,0,0,W,0,0,0,0.
ಇದನ್ನೂ ಓದಿ : CCPL 2024 : ಕನ್ನಡಿಗ ಮುಕುಂದ್ ಗೌಡ ಮಾರ್ಗದರ್ಶನದ ರಾಯ್ಪುರ ರೈನೋಸ್ ಚೊಚ್ಚಲ ಚಾಂಪಿಯನ್
ಫರ್ಗ್ಯುಸನ್ ಅವರ ಭರ್ಜರಿ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಪಪುವಾ ನ್ಯೂಗಿನಿ ವಿರುದ್ಧ 7 ವಿಕೆಟ್’ಗಳ ಸುಲಭ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ PNG ತಂಡ 19.4 ಓವರ್’ಗಳಲ್ಲಿ 78 ರನ್’ಗಳಿಗೆ ಆಲೌಟಾದರೆ, ಸುಲಭ ಗುರು ಬೆನ್ನಟ್ಟಿದ ಕಿವೀಸ್ ಪಡೆ 12.2 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿ ಜಯಭೇರಿ ಬಾರಿಸಿತು. ಇದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಿ ಗುಂಪಿನಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿದ ಕೇನ್ ವಿಲಿಯಮ್ಸನ್ ಬಳಗ ಲೀಗ್ ಹಂತದಲ್ಲೇ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತು. ಸಿ ಗುಂಪಿನಿಂದ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿವೆ.
ಇದನ್ನೂ ಓದಿ : USA Cricket Team : ಟಿ20 ವಿಶ್ವಕಪ್’ನಿಂದ ಪಾಕ್ ಔಟ್, ಸೂಪರ್-8 ತಲುಪಿ ಇತಿಹಾಸ ನಿರ್ಮಿಸಿದ ಅಮೆರಿಕ
Lockie Ferguson world record : 4 over, 4 maiden; The RCB star set the ICC T20 world cup 2024