ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ (Paris Olympics) ಭಾರತಾಂಬೆಯ ಕೊರಳಿಗೆ ಮೊದಲ ಪದಕ ತೊಡಿಸಿರುವ ಶೂಟರ್ ಮನು ಭಾಕರ್ ಈಗ ಇಡೀ ದೇಶದ ಕಣ್ಮಣಿ. ಫ್ರಾನ್ಸ್ ರಾಜಧಾನಿ ಪ್ಯಾರಿಸ್’ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹರ್ಯಾಣದ ಯುವ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಗುರಿ ಇಟ್ಟಿದ್ದರು. ಈ ಮೂಲಕ ಒಲಿಂಪಿಕ್ಸ್’ನಲ್ಲಿ ಪದಕ ಗೆದ್ದ ಭಾರತದ ಮೊಟ್ಟ ಮೊದಲ ಮಹಿಳಾ ಶೂಟರ್ ಎಂಬ ದಾಖಲೆ ಬರೆದಿದ್ದರು.

ಹರ್ಯಾಣದ ಜಜ್ಜರ್’ನ ಗೋರಿಯಾದವರಾದ 22 ವರ್ಷದ ಮನು ಭಾಕರ್ ಮರ್ಚೆಂಟ್ ನೇವಿಯಲ್ಲಿ ಚೀಫ್ ಇಂಜಿನಿಯರ್ ಆಗಿದ್ದ ರಾಮ್ ಕಿಶನ್ ಭಾಕರ್ ಎಂಬವರ ಮಗಳು. ಈಕೆಯ ಕ್ರೀಡಾ ಪ್ರಯಾಣ ನಿಜಕ್ಕೂ ಸ್ಫೂರ್ತಿಯುತ. 14ನೇ ವರ್ಷದವರೆಗೆ ಶೂಟಿಂಗ್ ಬಗ್ಗೆ ಆಸಕ್ತಿ ತೋರದ ಮನು ಭಾಕರ್ ಮಾರ್ಷಲ್ ಆರ್ಟ್ಸ್, ಕರಾಟೆ, ಟೆನಿಸ್ ಸಹಿತ ಬೇರೆ ಬೇರೆ ಕ್ರೀಡೆಗಳಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 60ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಳು.

ಆದರೆ 15ನೇ ವಯಸ್ಸಿನಲ್ಲಿ ಶೂಟಿಂಗ್ ಕಡೆ ಆಸಕ್ತಿ ತೋರಿದ ಮನು ಭಾಕರ್ 2018ರಲ್ಲಿ ಕಾಮನ್ ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕ ಗೆದ್ದಿದ್ದಳು. ಆಗ ಮನು ಭಾಕರ್ ವಯಸ್ಸು ಕೇವಲ 16. ಅಲ್ಲಿಂದ ಮನು ಭಾಕರ್ ಹಿಂದಿರುಗಿ ನೋಡಿದ್ದೇ ಇಲ್ಲ. ಈಗ ಮನು ಭಾಕರ್ ವಯಸ್ಸು 22.. ಇಪ್ಪತ್ತೆರಡನೇ ವಯಸ್ಸಿನಲ್ಲಿ ಈಕೆ ಮಾಡಿರುವ ಸಾಧನೆ ನಿಜಕ್ಕೂ ಬೆರಗು ಹುಟ್ಟಿಸುತ್ತದೆ. ವಿಶ್ವಕಪ್, ವಿಶ್ವ ಚಾಂಪಿಯನ್’ಷಿಪ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಸಹಿತ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಒಟ್ಟು 17 ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾಳೆ.
ಇದನ್ನೂ ಓದಿ : ಮಹಿಳಾ ಏಷ್ಯಾ ಕಪ್: ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತ ಭಾರತ; ಶ್ರೀಲಂಕಾ ಚಾಂಪಿಯನ್
2020ರ ಟೋಕಿಯೊ ಒಲಿಂಪಿಕ್ಸ್’ನಲ್ಲೇ ಮನು ಭಾಕರ್ ಪದಕದ ಭರವಸೆ ಮೂಡಿಸಿದ್ದ ಶೂಟರ್. ಆದರೆ ಅರ್ಹತಾ ಸುತ್ತಿನಲ್ಲಿ ಪಿಸ್ತೂಲ್ ಕೈಕೊಟ್ಟಿದ್ದರಿಂದ ಫೈನಲ್’ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಈದರೆ ಪಟ್ಟು ಬಿಡದೆ ಅಭ್ಯಾಸ ನಡೆಸಿದ ಹರ್ಯಾಣ ಶೂಟರ್ ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : ಫೀಲ್ಡರ್ ಬೌಂಡರಿ ತಡೆದರೂ ಐದು ರನ್ ಒಡಿದ ಬ್ಯಾಟ್ಸ್‌ಮನ್, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ
ಮನು ಭಾಕರ್ ಸಾಧನೆ:
ಒಲಿಂಪಿಕ್ಸ್: 1 ಕಂಚಿನ ಪದಕ
ವಿಶ್ವಕಪ್: 9 ಚಿನ್ನ, 2 ಬೆಳ್ಳಿ
ವಿಶ್ವಚಾಂಪಿಯನ್’ಷಿಪ್: 1 ಚಿನ್ನ, 1 ಬೆಳ್ಳಿ
ಯೂತ್ ಒಲಿಂಪಿಕ್ಸ್: 1 ಚಿನ್ನ, 1 ಬೆಳ್ಳಿ
ಕಾಮನ್’ವೆಲ್ತ್ ಗೇಮ್ಸ್: 1 ಚಿನ್ನ
ಜ್ಯೂನಿಯರ್ ವಿಶ್ವ ಚಾಂಪಿಯನ್’ಷಿಪ್: 4 ಚಿನ್ನ, 1 ಕಂಚು
ಏಷ್ಯನ್ ಚಾಂಪಿಯನ್’ಷಿಪ್: 2 ಚಿನ್ನ
ಏಷ್ಯನ್ ಗೇಮ್ಸ್: 1 ಚಿನ್ನ
ಇದನ್ನೂ ಓದಿ : MS Dhoni IPL 2025 : ಐಪಿಎಲ್-2025ರಲ್ಲಿ ಆಡಲಿದ್ದಾರೆ ‘ತಲಾ’ ಧೋನಿ, ಆದರೆ ಕಂಡಿಷನ್ ಅಪ್ಲೈ
Manu Bhaker Paris Olympics 2024 : 22 years old, 17 golds India’s golden girl shooter Manu Bhaker won bronze at the Olympics