ಲಂಡನ್ : ಪ್ರವಾಸಿ ಭಾರತ ತಂಡದ ವಿರುದ್ದ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಸಜ್ಜಾಗುತ್ತಿದೆ. ಈ ನಡುವಲ್ಲೇ ಗಾಯದ ಸಮಸ್ಯೆಯಿಂದಾಗಿ ತಂಡ ಖ್ಯಾತ ವೇಗಿ ಮಾರ್ಕ್‌ವುಡ್ ತಂಡದಿಂದ ಹೊರಬಿದ್ದಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಗಾಯದ ಸಮಸ್ಯೆ
ಎರಡನೇ ಟೆಸ್ಟ್ ಪಂದ್ಯದ ವೇಳೆಯಲ್ಲಿ ಗಾಯಗೊಂಡಿದ್ದ ಮಾರ್ಕ್‌ವುಡ್ ಮೂರನೇ ಪಂದ್ಯಕ್ಕೆ ಚೇತರಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ECB) ವೈದ್ಯಕೀಯ ತಂಡದ ಸಂಪೂರ್ಣ ಫಿಟ್ನೆಸ್ ಪರೀಕ್ಷೆಯ ನಂತರ ಮಾರ್ಕ್ ವುಡ್ ಮೂರನೇ ಟೈನಿಂದ ಹೊರಗುಳಿದಿದ್ದಾರೆ ಎಂದು ದೃಢಪಡಿಸಿದೆ.
ಅಲ್ಲದೇ ಮಾರ್ಕ್‌ವುಡ್ ಬದಲಿಗೆ ಯಾವೊಬ್ಬ ಆಟಗಾರರನ್ನು ಸೇರ್ಪಡೆಗೊಳಿಸುವುದು ಕಷ್ಟ. ಅಲ್ಲದೇ ಸ್ಟುವರ್ಟ್ ಬ್ರಾಡ್ ಗಾಯದ ಬೆನ್ನಲ್ಲೇ ತಂಡ ಸೇರಿಕೊಂಡಿದ್ದ ವೇಗದ ಬೌಲರ್ ಸಾಕಿಬ್ ಮಹಮೂದ್ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡೋದು ಖಚಿತ. ಚಾಂಪಿಯನ್‌ಶಿಪ್‌ನಲ್ಲಿ ಲಂಕಶೈರ್‌ಗಾಗಿ ಮಹಮೂದ್ 21 ವಿಕೆಟ್‌ಗಳನ್ನು ಪಡೆದು 23 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅತ್ಯುತ್ತಮ ಬೌಲರ್ ಆಗಿದ್ದರು. ಪಾಕಿಸ್ತಾನದ ವಿರುದ್ಧ ಜುಲೈನಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ, ಅವರು ಒಂಬತ್ತು ವಿಕೆಟ್ ಪಡೆದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಸಮಬಲ ಸಾಧಿಸಿದ್ದ ಇಂಗ್ಲೆಂಡ್, ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 152 ರನ್ನುಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗುತ್ತಿವೆ.