MS Dhoni – Ravindra Jadeja : ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂ.ಎಸ್ ಧೋನಿ, ಥಲಾ ಹುಟ್ಟುಹಬ್ಬದ ದಿನವೇ ಸೀಕ್ರೆಟ್ ಬಿಚ್ಚಿಟ್ಟ ಜಡೇಜ

ಬೆಂಗಳೂರು : MS Dhoni – Ravindra Jadeja : ಭಾರತ ಕ್ರಿಕೆಟ್ ತಂಡದ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡುವ ಸಾಧ್ಯತೆಯಿದೆ. ಧೋನಿ ಅವರು ಮುಂದಿನ ಐಪಿಎಲ್‌ನಲ್ಲಿ ಆಡುವ ಕುರಿತಾಗಿ ಅವರ ಹುಟ್ಟುಹಬ್ಬದ ದಿನವೇ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರವೀಂದ್ರ ಜಡೇಜ (Ravindra Jadeja) ಮಹತ್ವದ ಸುಳಿವು ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತಂಡ ಧೋನಿ ಸಾರಥ್ಯದಲ್ಲಿ ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಟೂರ್ನಿಯ ಬೆನ್ನಲ್ಲೇ ಧೋನಿ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇನ್ನೂ ನಿವೃತ್ತಿಯ ಗುಟ್ಟು ಬಿಟ್ಟುಕೊಡದ ಧೋನಿ, ಮುಂದಿನ ಆರು ತಿಂಗಳಲ್ಲಿ ಈ ಬಗ್ಗೆ ನಿರ್ಧರಿಸುವುದಾಗಿ ಐಪಿಎಲ್ ಫೈನಲ್ ಗೆದ್ದ ಬೆನ್ನಲ್ಲೇ ಹೇಳಿದ್ದರು. ಆದರೆ ಧೋನಿ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ ಬಗ್ಗೆ ರವೀಂದ್ರ ಜಡೇಜ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : MS Dhoni birthday: ಹ್ಯಾಪಿ ಬರ್ತ್ ಡೇ ಎಂ.ಎಸ್ ಧೋನಿ, “ಥಲಾ” ಕಟೌಟ್’ಗೆ ಹಾಲಿನ ಅಭಿಷೇಕ

ಇದನ್ನೂ ಓದಿ : ICC World Cup 2023: ನವೆಂಬರ್ 11ಕ್ಕೆ ಬೆಂಗಳೂರಿನಲ್ಲಿ ಟೀಮ್ ಇಂಡಿಯಾಗೆ ನೆದರ್ಲೆಂಡ್ಸ್ ಎದುರಾಳಿ

ಟ್ವೀಟ್ ಮೂಲಕ ಧೋನಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಜಡೇಜ, ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡುವ ಕುರಿತಾಗಿ ಮಹತ್ವದ ಸುಳಿವು ನೀಡಿದ್ದಾರೆ. “2009ರಿಂದ ಈವರೆಗೂ ಮತ್ತು ಎಂದೆಂದಿಗೂ ನನ್ನ ಪಾಲಿನ ಮಾರ್ಗದರ್ಶಕ. ಮಹಿ ಭಾಯ್, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮನ್ನು ಆದಷ್ಟು ಬೇಗ ಹಳದಿ ಜರ್ಸಿಯಲ್ಲಿ ನೋಡುತ್ತೇನೆ” ಎಂದು ರವೀಂದ್ರ ಜಡೇಜ ಟ್ವೀಟ್ ಮಾಡಿದ್ದಾರೆ.

ಧೋನಿ ಮತ್ತು ರವೀಂದ್ರ ಜಡೇಜ ಸುದೀರ್ಘ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಜಡೇಜ ಅವರ ಕ್ರಿಕೆಟ್ ಯಶಸ್ಸಿನಲ್ಲಿ ಧೋನಿ ಅವರ ಪಾತ್ರ ಮಹತ್ವದ್ದಾಗಿತ್ತು, ಧೋನಿ ಅವರನ್ನು ರವೀಂದ್ರ ಜಡೇಜ ತಮ್ಮ ಮಾರ್ಗದರ್ಶಕನೆಂದೇ ನಂಬಿದ್ದಾರೆ. 2023ರ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲಲು ಕೊನೆಯ 2 ಎಸೆತಗಳಲ್ಲಿ 10 ರನ್‌ಗಳು ಬೇಕಿದ್ದಾಗ, ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದ ರವೀಂದ್ರ ಜಡೇಜ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅತ್ಯಂತ ರೋಚಕ ಗೆಲುವು ತಂದುಕೊಟ್ಟಿದ್ದರು.

MS Dhoni – Ravindra Jadeja : Jadeja gives hint ON MS Dhoni’s IPL future

Comments are closed.