ಮಂಗಳವಾರ, ಏಪ್ರಿಲ್ 29, 2025
HomeSportsCricketಐಪಿಎಲ್‌ನಲ್ಲಿ ಗಳಿಸಿದ ಅಷ್ಟೂ ದುಡ್ಡನ್ನು ತಂದೆಗೆ ಕೊಟ್ಟ ಮುಂಬೈ ಇಂಡಿಯನ್ಸ್ ಸ್ಟಾರ್

ಐಪಿಎಲ್‌ನಲ್ಲಿ ಗಳಿಸಿದ ಅಷ್ಟೂ ದುಡ್ಡನ್ನು ತಂದೆಗೆ ಕೊಟ್ಟ ಮುಂಬೈ ಇಂಡಿಯನ್ಸ್ ಸ್ಟಾರ್

- Advertisement -

ಹೈದರಾಬಾದ್: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡ ಲೀಗ್ ಹಂತದಲ್ಲೇ ಹೊರ ಬಿದ್ದಿತ್ತು. ಆದ್ರೂ ಮುಂಬೈ ಇಂಡಿಯನ್ಸ್ ಪರ ಹೈದರಾಬಾದ್”ನ ಯುವ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ (Tilak Varma) ಉತ್ತಮ ಆಟವಾಡಿ ಗಮನ ಸೆಳೆದಿದ್ರು.

ಇದೇ ಮೊದಲ ಬಾರಿ ಐಪಿಎಲ್ ಟೂರ್ನಿಗೆ (IPL 2022) ಕಾಲಿಟ್ಟಿದ್ದ ತಿಲಕ್ ವರ್ಮಾ 14 ಪಂದ್ಯಗಳಲ್ಲಿ 397 ರನ್ ಕಲೆ ಹಾಕಿದ್ದರು. ಕಳೆದ ಬಾರಿಯ ಐಪಿಎಲ್ ಹರಾಜಿನ ವೇಳೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಿಲಕ್ ವರ್ಮಾರನ್ನು 1.7 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಟೂರ್ನಿ ಮುಗಿದ ಬೆನ್ನಲ್ಲೇ ಅಷ್ಟೂ ದುಡ್ಡನ್ನು ತಿಲಕ್ ವರ್ಮಾ ತಮ್ಮ ತಂದೆಯ ಕೈಗಿಟ್ಟಿದ್ದಾರೆ.

ಅಂದ ಹಾಗೆ 19 ವರ್ಷದ ತಿಲಕ್ ವರ್ಮಾ ತೀರಾ ಬಡ ಕುಟುಂಬದಿಂದ ಬಂದವರು. ತಿಲಕ್ ಅವರ ತಂದೆ ಹೈದರಾಬಾದ್”ನಲ್ಲಿ ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದಾರೆ. ತಿಲಕ್ ವರ್ಮಾಗೆ ಕನಿಷ್ಠ ಒಂದು ಕ್ರಿಕೆಟ್ ಶೂ ಕೊಡಿಸುವಷ್ಟೂ ಆರ್ಥಿಕ ಶಕ್ತಿ ತಂದೆಗಿರಲಿಲ್ಲ. ಈಗ ಅದೇ ತಂದೆಯ ಕೈಗೆ ಒಂದೂ ಮುಕ್ಕಾಲು ಕೋಟಿ ರೂಪಾಯಿ ಹಣವನ್ನಿಟ್ಟಿದ್ದಾರೆ ತಿಲಕ್ ವರ್ಮಾ.

ತಿಲಕ್ ವರ್ಮಾ ಅವರ ಕುಟುಂಬ ಹೈದರಾಬಾದ್”ನಲ್ಲಿ ಈಗಲೂ ಸಿಂಗಲ್ ಬೆಡ್ ರೂಮ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 1.7 ಕೋಟಿ ಮೊತ್ತಕ್ಕೆ ಖರೀದಿಸಿದಾಗ ತಿಲಕ್ ವರ್ಮಾ ಹೇಳಿದ ಮೊದಲ ಮಾತೇನು ಗೊತ್ತಾ..? “ನನ್ನ ತಂದೆ-ತಾಯಿಗೆ ಮನೆ ಕೊಡಿಸಬೇಕು”. ಇದು ತಿಲಕ್ ವರ್ಮಾ ಹೇಳಿದ ಮಾತು. ಕೊಟ್ಟ ಮಾತನ್ನು ಉಳಿಸಿಕೊಂಡಿರುವ ತಿಲಕ್ ವರ್ಮಾ ಮನೆ ಕಟ್ಟಿಸಲು ಐಪಿಎಲ್’ನಲ್ಲಿ ಗಳಿಸಿದ ಅಷ್ಟೂ ಹಣವನ್ನು ತಂದೆಗೆ ನೀಡಿದ್ದಾರೆ.

ಇದನ್ನೂ ಓದಿ : Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್

ಇದನ್ನೂ ಓದಿ : Ashwin : ತಮಿಳುನಾಡಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ ಅಶ್ವಿನ್ : ದ್ರಾವಿಡ್ ಹಾದಿಯಲ್ಲಿ ಸ್ಪಿನ್ ಮಾಂತ್ರಿಕ

‌Mumbai Indians star Tilak Varma who gave his father all the money he earned in IPL

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular