ಮಂಗಳವಾರ, ಏಪ್ರಿಲ್ 29, 2025
HomeSportsNew Zealand vs England : ಟಿ20 ವಿಶ್ವಕಪ್‌ ಫೈನಲ್‌ಗೇರಿದ ನ್ಯೂಜಿಲೆಂಡ್‌ : ಮುಗ್ಗರಿಸಿದ ಇಂಗ್ಲೆಂಡ್‌

New Zealand vs England : ಟಿ20 ವಿಶ್ವಕಪ್‌ ಫೈನಲ್‌ಗೇರಿದ ನ್ಯೂಜಿಲೆಂಡ್‌ : ಮುಗ್ಗರಿಸಿದ ಇಂಗ್ಲೆಂಡ್‌

- Advertisement -

ದುಬೈ : T20 World CUPನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಡೇರಿಲ್‌ ಮಿಚೆಲ್‌ ಆರ್ಭಟಕ್ಕೆ ಇಂಗ್ಲೆಂಡ್‌ ತಂಡ ತತ್ತರಿಸಿದೆ. ಮೊದಲ ಸೆಮಿ ಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ ಭರ್ಜರಿ ಜಯದೊಂದಿಗೆ ನ್ಯೂಜಿಲೆಂಡ್‌ ತಂಡ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದೆ.

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ತಂಡಕ್ಕೆ ನ್ಯೂಜಿಲೆಂಡ್‌ ಬೌಲರ್‌ಗಳು ಮಾರಕವಾಗಿ ಪರಿಣಮಿಸಿದ್ದಾರೆ. ಜೋಸ್‌ ಬಟ್ಲರ್‌ ಹಾಗೂ ಜಾನಿ ಬ್ರೆಸ್ಟೋ ಉತ್ತಮ ಆರಂಭವೊದಗಿಸಿದ್ರು. ಆದರೆ ಜಾನಿ ಬ್ರೆಸ್ಟೋ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಬಂದ ಡೇವಿಡ್‌ ಮಲನ್‌ ಒಂದಿಷ್ಟು ಹೊತ್ತು ಆರ್ಭಟಿಸಿದ್ದಾರೆ. ಬಟ್ಲರ್‌ 29, ಡೇವಿಡ್‌ ಮಲನ್‌ ೪೧ರನ್‌ಗಳಿಸಿ ಔಟಾದ್ರು. ನಂತರ ಲಿವಿಂಗ್‌ ಸ್ಟೋನ್‌ ಜೊತೆಯಾದ ಮೊಯಿನ್‌ ಆಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಮೊಯಿನ್‌ ಆಲಿ ಕೇವಲ 37 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ 51ರನ್‌ ಗಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿದೆ.

ಇಂಗ್ಲೆಂಡ್‌ ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್‌ ತಂಡಕ್ಕೆ ಕ್ರಿಸ್‌ ವೋಕ್ಸ್‌ ಆರಂಭಿಕ ಆಘಾತ ನೀಡಿದ್ರು. ಭರವಸೆಯ ಆಟಗಾರ ಮಾರ್ಟಿನ್‌ ಗುಫ್ಟಿಲ್‌ 4 ರನ್‌ ಗಳಿಸಿ ಔಟಾದ್ರು. ನಂತರ ಬಂದ ನಾಯಕ ಕೇನ್‌ ವಿಲಿಯಂಸನ್‌ ಆಟ ಕೂಡ 5 ರನ್‌ ಗೆ ಸೀಮಿತವಾಯ್ತು.

ಆದರೆ ಒಂದೆಡೆಯಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿದ ಡ್ಯಾರ್ಲಿ ಮಿಚೆಲ್‌ ಕೇವಲ 47 ಎಸೆತಗಳಲ್ಲಿ 32 ರನ್‌ ಸಿಡಿಸಿದ್ರೆ, ಡೇವೊನ್‌ ಕಾನ್ವೆ 46ರನ್‌ ಸಿಡಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಜೇಮ್ಸ್‌ ನಿಶಮ್‌ ಹಾಗೂ ಮಿಚೆನ್‌ ಭರ್ಜರಿ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್‌ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿದೆ. ಈ ಮೂಲಕ ನ್ಯೂಜಿಲೆಂಡ್‌ ತಂಡ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದೆ.

ಇದನ್ನೂ ಓದಿ : ರಾಹುಲ್‌ ಅಬ್ಬರದ ಅರ್ಧ ಶತಕ : ವಿಶ್ವಕಪ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಕನ್ನಡಿಗ

ಇದನ್ನೂ ಓದಿ : IND Vs NZ T20 : ನ್ಯೂಜಿಲೆಂಡ್‌ ಸರಣಿಗೆ ಟಿಂ ಇಂಡಿಯಾ ಆಯ್ಕೆ : ರೋಹಿತ್‌ ಶರ್ಮಾ ನಾಯಕ, ರಾಹುಲ್‌ ಉಪ ನಾಯಕ

(New Zealand Vs England Match NZ Reach T20 World Cup Final)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular