ಚೆನ್ನೈ: ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ (IPL MS Dhoni goodbye ) ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿ ದ್ದಾರೆ. ‘’2023ರ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿಯವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರಲಿ ದ್ದಾರೆ’’ ಎಂದು ಸಿಎಸ್’ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಮಾಹಿತಿ ನೀಡಿದ್ದಾರೆ.
2023ರ ಐಪಿಎಲ್ ಎಂ.ಎಸ್ ಧೋನಿಯವರ ಪಾಲಿಗೆ ಕೊನೆಯ ಐಪಿಎಲ್ ಟೂರ್ನಿಯಾಗುವ ಸಾಧ್ಯತೆಯಿದೆ. 40 ವರ್ಷ ವಯಸ್ಸಿನ ಧೋನಿ ಮುಂದಿನ ವರ್ಷ ಐಪಿಎಲ್’ಗ್ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗ್ತಿದೆ. 2020ರಲ್ಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದಾಗ ಅದೇ ವರ್ಷ ಐಪಿಎಲ್’ಗೂ ಗುಡ್ ಬೈ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ತಮ್ಮನ್ನು ಇಷ್ಟು ವರ್ಷ ಬೆಂಬಲಿಸುತ್ತಾ ಬಂದಿರುವ ತಮ್ಮ ಅಭಿಮಾನಿಗಳ ಮುಂದೆಯೇ ಅದರಲ್ಲೂ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ವಿದಾಯ ಹೇಳುವುದು ನನ್ನ ಕರ್ತವ್ಯ ಎಂದಿದ್ದರು.
ಕಳೆದ ವರ್ಷ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತೊರೆದು ಆಟಗಾರನಾಗಿ ಮುಂದುವರಿಯುವ ನಿರ್ಧಾರ ಮಾಡಿದ್ದರು. ಹೀಗಾಗಿ ಆಲ್ರೌಂಡರ್ ರವೀಂದ್ರ ಜಡೇಜಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ಜಡೇಜ ನಾಯಕತ್ವದಲ್ಲಿ ಸಿಎಸ್’ಕೆ ತಂಡ ಸತತ ಸೋಲುಗಳನ್ನು ಅನುಭವಿಸಿದ ಕಾರಣ ನಾಯಕತ್ವಕ್ಕೆ ಜಡೇಜ ರಾಜೀನಾಮೆ ನೀಡಿದ್ದರು. ಈ ಕಾರಣದಿಂದ ಧೋನಿ ಮತ್ತೆ ಸಿಎಸ್’ಕೆ ನಾಯಕತ್ವ ವಹಿಸಿಕೊಂಡಿದ್ದರು.
2008ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಎಂ.ಎಸ್ ಧೋನಿ ಐಪಿಎಲ್ ನಾಲ್ಕು ಬಾಕಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ಬಾರಿ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ.
ಇದನ್ನೂ ಓದಿ : Prithvi Shaw replaced Rahul : “ರಾಹುಲ್ ಜಾಗದಲ್ಲಿ ಪೃಥ್ವಿ ಶಾ ಆಡಿಸಿ” ಎಂದ ಕ್ರಿಕೆಟಿಗ ದೊಡ್ಡ ಗಣೇಶ್‌ಗೆ ಕನ್ನಡಿಗರ ತಪರಾಕಿ
Next year IPL MS Dhoni goodbye Chennai team will be led by MS Dhoni for the last time