ಪ್ಯಾರಿಸ್: ಕ್ರೀಡಾ ಜಗತ್ತಿನ ಅತ್ಯಂತ ದೊಡ್ಡ ಹಬ್ಬ ಒಲಿಂಪಿಕ್ಸ್ ಕ್ರೀಡಾಕೂಟ ಇಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್’ನಲ್ಲಿ ಆರಂಭವಾಗಲಿದೆ. ಇಂದು ರಾತ್ರಿ 11 ಗಂಟೆಗೆ ಪ್ಯಾರಿಸ್ ಒಲಿಂಪಿಕ್ಸ್ 2024 (Paris Olympics 2024) ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದ್ದು, ಆಗಸ್ಟ್ 11ಕ್ಕೆ ಅಂತ್ಯವಾಗಲಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ವಿಶೇಷತೆ ಏನೆಂದರೆ ಕ್ರೀಡಾಪಟುಗಳ ಪಥ ಸಂಚಲನ ಕ್ರೀಡಾಂಗಣದ ಬದಲಾಗಿ ನದಿಯಲ್ಲಿ ನಡೆಯಲಿದೆ. ಫ್ರಾನ್ಸ್’ನ ಸೀನೆ (Rive seine) ನದಿಯಲ್ಲಿ ವಿವಿಧ ರಾಷ್ಟ್ರಗಳ 10,500 ಕ್ರೀಡಾಪಟುಗಳು 100ಕ್ಕೂ ಹೆಚ್ಚು ದೋಣಿಗಳ ಮೂಲಕ ಪಥ ಸಂಚಲನ ನಡೆಸಲಿದ್ದಾರೆ.

ಆಸ್ಟರ್’ಲಿಟ್ಜ್ ಸೇತುವೆಯಿಂದ ಆರಂಭವಾಗಲಿರುವ ಕ್ರೀಡಾಪಟುಗಳ ಪಥಸಂಚಲನ 6.7 ಕಿ.ಮೀ ದೂರ ಸಾಗಿ ಬರಲಿದೆ. ಪಥ ಸಂಚಲನದಲ್ಲಿ ಭಾರತ ತಂಡದ ಪರವಾಗಿ ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮತ್ತು ಐದು ಬಾರಿಯ ಒಲಿಂಪಿಯನ್, ಹಿರಿಯ ಟೇಬಲ್ ಟೆನಿಸ್ ತಾರೆ ಅಚಂತ ಶರತ್ ಕಮಲ್ ತ್ರಿವರ್ಣ ಧ್ವಜ ಹಿಡಿದು ಪಥ ಸಂಚಲನದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ : KL Rahul: ತಾಲೀಮು ಶುರು ಮಾಡಿದ ಕೆ.ಎಲ್ ರಾಹುಲ್, ಲಂಕಾ ವಿರುದ್ಧ ಆರ್ಭಟಿಸಲು ರಾಹುಲ್ ರೆಡಿ
ನದಿಯ ಮೂಲಕ ಸಾಗಿ ಬರಲಿರುವ ಕ್ರೀಡಾಪಟುಗಳ ಈ ಆಕರ್ಷಕ ಪಥಸಂಚಲನವನ್ನು ನದಿ ದಂಡೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರಿಗೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಒಟ್ಟು 32 ಕ್ರೀಡೆಗಳಲ್ಲಿ ಜಗತ್ತಿನ ನಾನಾ ಭಾಗದಿಂದ ಬಂದಿರುವ ಕ್ರೀಡಾಪಟುಗಳು ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಖ್ಯಾತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮೇಲೆ ಮತ್ತೆ ನಿರೀಕ್ಷೆಗಳು ಗರಿಗೆದರಿದ್ದು, ಪ್ಯಾರಿಸ್ ಒಲಿಂಪಿಕ್ಸ್’ನಲ್ಲೂ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಭಾರತದ ಒಟ್ಟು 117 ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ವಿವಿಧ ವಿಭಾಗಗಳಲ್ಲಿ ಪದಕಕ್ಕಾಗಿ ಹೋರಾಡಲಿದ್ದಾರೆ. ಕರ್ನಾಟಕದಿಂದ ಒಟ್ಟು ಒಂಬತ್ತು ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾಗವಹಿಸುತ್ತಿದ್ದು, ರಾಜ್ಯ ಸರ್ಕಾರ ಈಗಾಗಲೇ ತಲಾ 5 ಲಕ್ಷ ರೂ.ಗಳ ಪೋತ್ಸಾಹಧನ ನೀಡಿದೆ.
ಇದನ್ನೂ ಓದಿ : Women’s Asia Cup 2024 : ಮಹಿಳಾ ಏಷ್ಯಾ ಕಪ್: ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ಪ್ಯಾರಿಸ್ ಒಲಿಂಪಿಕ್ಸ್’ (Paris Olympics 2024 ) ನಲ್ಲಿ ಭಾಗವಹಿಸಲಿರುವ ಕರ್ನಾಟಕದ ಕ್ರೀಡಾಪಟುಗಳು
1. ಅಶ್ವಿನ್ ಪೊನ್ನಪ್ಪ (34 ವರ್ಷ, ಬ್ಯಾಡ್ಮಿಂಟನ್)
2. ರೋಹನ್ ಬೋಪಣ್ಣ (44 ವರ್ಷ, ಟೆನಿಸ್)
3. ಅದಿತಿ ಅಶೋಕ್ (26 ವರ್ಷ, ಗಾಲ್ಫ್)
4. ಎಂ.ಆರ್ ಪೂವಮ್ಮ (34 ವರ್ಷ, ಮಿಕ್ಸೆಡ್ ರಿಲೇ)
5. ಅರ್ಚನಾ ಕಾಮಲ್ (ಟೇಬಲ್ ಟೆನಿಸ್)
6. ನಿಶಾಂತ್ ದೇವ್ (ಬಾಕ್ಸಿಂಗ್)
7. ಧಿನಿಧಿ ದೇಸಿಂಗು (14 ವರ್ಷ, ಮಹಿಳಾ ಫ್ರೀಸ್ಟೈಲ್ ಈಜು)
8. ಶ್ರೀಹರಿ ನಟರಾಜ್ (23 ವರ್ಷ, ಈಜು)
9. ಮಿಜೋ ಚಾಕೋ (ಮಿಕ್ಸೆಡ್ ರಿಲೇ)
ಇದನ್ನೂ ಓದಿ : ಮಹಾರಾಜ ಟ್ರೋಫಿ ಟಿ20 ಟೂರ್ನಿ: ಯಾವ ಆಟಗಾರ, ಯಾವ ತಂಡಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ
117: ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾಗವಹಿಸಲಿರುವ ಭಾರತದ ಒಟ್ಟು ಕ್ರೀಡಾಪಟುಗಳು
70: ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾಗವಹಿಸಲಿರುವ ಭಾರತದ ಪುರುಷ ಕ್ರೀಡಾಪಟುಗಳು
47: ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾಗವಹಿಸಲಿರುವ ಭಾರತದ ಮಹಿಳಾ ಕ್ರೀಡಾಪಟುಗಳು
72: ಒಲಿಂಪಿಕ್ಸ್’ನಲ್ಲಿ ಮೊದಲ ಬಾರಿ ಭಾಗವಹಿಸಲಿರುವ ಭಾರತದ ಕ್ರೀಡಾಪಟುಗಳು
35: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇದುವರೆಗೆ ಗೆದ್ದಿರುವ ಪದಕಗಳ ಒಟ್ಟು ಸಂಖ್ಯೆ (10 ಚಿನ್ನ, 9 ಬೆಳ್ಳಿ, 16 ಕಂಚು)
ಭಾರತ ಪರ ಒಲಿಂಪಿಕ್ಸ್’ನಲ್ಲಿ ಮೊದಲ ಪದಕ ಗೆದ್ದವರು: ನಾರ್ಮನ್ ಪ್ರಿಚರ್ಡ್ (Norman Pritchard) (1900ರಲ್ಲಿ 2 ಬೆಳ್ಳಿ ಪದಕ)
ಪ್ಯಾರಿಸ್ ಒಲಿಂಪಿಕ್ಸ್ 2024
ಭಾರತದಲ್ಲಿ ನೇರಪ್ರಸಾರ: ಸ್ಪೋರ್ಟ್ಸ್ 18 ನೆಟ್ವರ್ಕ್
ಭಾರತದಲ್ಲಿ ಲೈವ್ ಸ್ಟ್ರೀಮಿಂಗ್: ಜಿಯೊ ಸಿನಿಮಾ
Paris Olympics 2024 from today: How many contestants from India? Where is the live stream ? Here is the complete information of sports festival