ಲಂಡನ್ ಟೀಂ ಇಂಡಿಯಾ ಮಹಿಳಾ ಆಲ್‌ರೌಂಡರ್ ಹರ್ಲೀನ್ ಡಿಯೋಲ್ ಇಂಗ್ಲೆಂಡ್ ತಂಡ ವಿರುದ್ದ ನಡೆದ ಮೊದಲ ಟಿ20 ಪಂದ್ಯದಲ್ಲಿಅದ್ಬುತ ಕ್ಯಾಚ್ ಹಿಡಿದಿದ್ದಾರೆ. ಈ ಕ್ಯಾಚ್ ಸಾಮಾಜಿಕ ಜಾಲತಾಣ ದಲ್ಲಿ ಸಖತ್ ವೈರಲ್ ಆಗಿದ್ದು, ಕ್ಯಾಚ್ ನೋಡಿದ ಕ್ರಿಕೆಟ್ ದಿಗ್ಗಜರು ಇದೀಗ ಫಿದಾ ಆಗಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮಹಿಳಾ ಆಟಗಾರ್ತಿಯರು ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಟಿ20 ಪಂದ್ಯದ ವೇಳೆಯಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5ನೇ ಓವರ್ ನಲ್ಲಿ ಎಮಿ ಜೋನ್ಸ್ ಬಾರಿಸಿದ ಹೊಡೆತವನ್ನು ಲಾಂಗ್ ಆಫ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್ ಕ್ಷಣ ಮಾತ್ರದಲ್ಲಿ ಜಿಂಕೆಯಂತೆ ನೆಗೆದು ಸ್ಟನ್ನಿಂಗ್ ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ ನೆರೆದಿದ್ದ ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿತ್ತು.

ಹರ್ಲೀನ್ ಡಿಯೋಲ್ ಕ್ಯಾಚ್ ಹಿಡಿಯುತ್ತಿದ್ದಂತೆಯೇ ಟೀಂ ಇಂಡಿಯಾ ಆಟಗಾರ್ತಿಯರು ಅರೆಕ್ಷಣ ದಂಗಾಗಿ ಹೋಗಿದ್ದಾರೆ. ಅಲ್ಲದೇ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಬೌಂಡರಿ ಲೈನ್ ನಿಂದ ಹೊರಗಿದ್ದ ಆಟಗಾರ್ತಿಯರು ಕೂಡ ಮೈದಾನದೊಳಗೆ ಬಂದು ಸಂಭ್ರಮಾಚರಣೆಯನ್ನು ಮಾಡಿದ್ದರು.

ಇದೀಗ ಹರ್ಲೀನ್ ಡಿಯೋಲ್ ಹಿಡಿದ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಖತ್ ಸದ್ದು ಮಾಡ್ತಿದೆ. ಇದೀಗ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಕ್ಯಾಚ್ ನೋಡಿ ಖುಷಿ ಪಟ್ಟಿದ್ದಾರೆ. ಅಲ್ಲದೇ ಡಿಯೋಲ್ ಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೇ ಲಿಟಲ್ ಮಾಸ್ಟರ್ ಸಚಿತ್ ತೆಂಡೂಲ್ಕರ್, ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಉದ್ಯಮಿ ಆನಂದ ಮಹೇಂದ್ರ ಸೇರಿದಂತೆ ಹಲವರು ಡಿಯೋಲ್ ಸಾಧನೆಯನ್ನು ಕೊಂಡಾಡಿದ್ದಾರೆ.