ಬೆಂಗಳೂರು: ಶನಿವಾರ ಕರುನಾಡ ರಾಜಕುಮಾರ ಡಾ.ಪುನೀತ್ ರಾಜ್’ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ. ಇಡೀ ಕರ್ನಾಟಕವೇ ಅಪ್ಪುಗಾಗಿ ಕಂಬನಿ ಮಿಡಿದ ಹೊತ್ತಲ್ಲಿ, ಬೆಂಗಳೂರು ಬುಲ್ಸ್ ತಂಡ (Pro Kabaddi League)ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪಂದ್ಯ ಗೆದ್ದು, ಆ ಗೆಲುವನ್ನು ಅಭಿಮಾನದ ಅರಸನಿಗೆ ಅರ್ಪಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls), ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ (Dabang Delhi K.C) ವಿರುದ್ಧ 47-43 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಪಂದ್ಯ ಗೆದ್ದ ನಂತರ ಆ ಗೆಲುವನ್ನು ಪುನೀತ್ ರಾಜ್’ಕುಮಾರ್ ಅವರಿಗೆ ಅರ್ಪಿಸಿ ಕರುನಾಡ ರಾಜಕುಮಾರನಿಗೆ ಬುಲ್ಸ್ ಪಡೆ ಗೌರವ ಸಲ್ಲಿಸಿತು. ಅಂದು, ಇಂದು, ಎಂದೆಂದೂ, ನಮ್ಮ ಹೃದಯಕ್ಕೆ ನೀನೇ ಅರಸು” ಎಂದು ಟ್ವೀಟ್ ಮಾಡಿರುವ ಬೆಂಗಳೂರು ಬುಲ್ಸ್, ಪುನೀತ್ ರಾಜ್’ಕುಮಾರ್ ಅವರ ನಗುವಿನ ಚಿತ್ರವೊಂದನ್ನು ಪೋಸ್ಟ್ ಮಾಡಿದೆ.
ಅಂದು, ಇಂದು, ಎಂದೆಂದೂ, ನಮ್ಮ ಹೃದಯಕ್ಕೆ ನೀನೆ ಅರಸು 💞
— Bengaluru Bulls (@BengaluruBulls) October 29, 2022
This one's for you, Appu ⚡❤️#AppuLivesOn pic.twitter.com/H6AEw4o9zo
ದಬಾಂಗ್ ಡೆಲ್ಲಿ ವಿರುದ್ಧ ಬೆಂಗಳೂರು ಬುಲ್ಸ್ 4 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಲೀಗ್’ನಲ್ಲಿ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕೊನೇ ಕ್ಷಣದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಬುಲ್ಸ್ ಪಡೆಯನ್ನು ಯುವ ರೇಡರ್ ಭರತ್ ಅಮೋಘ ಸೂಪರ್ ರೇಡ್’ನೊಂದಿಗೆ ಗೆಲುವಿನ ದಡ ಸೇರಿಸಿದರು. ಪಂದ್ಯ ಮುಕ್ತಾಯಕ್ಕೆ ಕೇವಲ ಒಂದು ನಿಮಿಷ ಬಾಕಿ ಇದ್ದಾಗ ಡೆಲ್ಲಿ ಅಂಗಣದೊಳಗೆ ಗೂಳಿಯಂತೆ ನುಗ್ಗಿದ ಭರತ್, ಅಂಗಣದಲ್ಲಿದ್ದ ಮೂವರೂ ಆಟಗಾರರನ್ನು ಔಟ್ ಮಾಡ 3+2 ಪಾಯಿಂಟ್’ಗಳೊಂದಿಗೆ ಬುಲ್ಸ್ ಬಳಗಕ್ಕೆ ರೋಚಕ ಗೆಲುವು ತಂದುಕೊಟ್ಟರು. ಅಮೋಘ ಆಟವಾಡಿದ ಭರತ್ ಒಟ್ಟು 20 ಅಂಕಗಳನ್ನು ಕಲೆ ಹಾಕಿದ್ರೆ, ರೈಡ್ ಕಾರ್ನರ್ ಡಿಫೆಂಡರ್ ಸೌರಭ್ ನಂದಲ್ 6 ಟ್ಯಾಕಲ್ ಪಾಯಿಂಟ್’ಗಳನ್ನು ಗಳಿಸಿ ಬುಲ್ಸ್ ಗೆಲುವಿಗೆ ಕಾರಣರಾದರು. ದಬಾಂಗ್ ಡೆಲ್ಲಿ ಪರ ನಾಯಕ ನವೀನ್ ಕುಮಾರ್ 16 ಅಂಕ ಗಳಿಸಿದರು.
ದಬಾಂಗ್ ಡೆಲ್ಲಿ ವಿರುದ್ಧದ ಗೆಲುವಿನೊಂದಿಗೆ ಬುಲ್ಸ್ ಪಡೆ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಒಟ್ಟು 29 ಅಂಕಗಳೊಂದಿಗೆ ಟೇಬಲ್ ಟಾಪರ್ ಆಗಿ ಹೊರ ಹೊಮ್ಮಿದೆ. ಡೆಲ್ಲಿ 28 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಲೀಗ್-9: ಭಾನುವಾರದ ಪಂದ್ಯಗಳು
- ಬೆಂಗಳೂರು ಬುಲ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್
- ತಮಿಳ್ ತಲೈವಾಸ್ Vs ದಬಾಂಗ್ ಡೆಲ್ಲಿ ಕೆ.ಸಿ
ಇದನ್ನೂ ಓದಿ : Pro kabaddi league: ಫಸ್ಟ್ ಹಾಫ್ 11-24, ಸೆಕೆಂಡ್ ಹಾಫ್ 42-32; ಮುಂಬಾಗೆ ಗುದ್ದಿದ ಗೂಳಿ
ಇದನ್ನೂ ಓದಿ : Pro Kabaddi League: ಕೆಂಪುಗೂಳಿಗಳಿಗೆ ಇಂದು ಡೆಲ್ಲಿ ಚಾಲೆಂಜ್, ಪುಣೆಯಲ್ಲಿ ಹಾಲಿ Vs ಮಾಜಿ ಚಾಂಪಿಯನ್ಸ್ ಕಾಳಗ
ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
Pro Kabaddi League : Bengaluru Bulls dedicates the victory to Appu Puneet Rajkumar