ಸೋಮವಾರ, ಏಪ್ರಿಲ್ 28, 2025
HomeSportsPro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

- Advertisement -

ಪುಣೆ : (Pro Kabaddi League)ಆರನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್-9 ಟೂರ್ನಿಯ ತನ್ನ 12ನೇ ಲೀಗ್ ಪಂದ್ಯದಲ್ಲಿ ಬುಧವಾರ ಹರ್ಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಬುಧವಾರ ನಡೆಯುವ ಮೊದಲ ಪಂದ್ಯವನ್ನು ಗೆದ್ದರೆ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ಅಗ್ರಸ್ಥಾನಕ್ಕೇರಲಿದೆ. ಆಡಿರುವ 11 ಪಂದ್ಯಗಳಿಂದ 6 ಗೆಲುವು, 4 ಸೋಲು, ಹಾಗೂ ಒಂದು ಟೈನೊಂದಿಗೆ 36 ಅಂಕ ಕಲೆ ಹಾಕಿರುವ ಬುಲ್ಸ್ ಬಳಗ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಗೆದ್ದರೆ 41 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಆದರೆ ದಿನದ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ತಮಿಳ್ ತಲೈವಾಸ್ ವಿರುದ್ಧ ಗೆದ್ದರೆ ಪಲ್ಟನ್ ಪಡೆ ಅಗ್ರಸ್ಥಾನದಲ್ಲಿ ಮುಂದುವರಿಯಲಿದೆ.

ಇನ್ನು ಮಂಗಳವಾರ ನಡೆದ ಬೆಂಗಾಲ್ ವಾರಿಯರ್ಸ್ ಮತ್ತು ಯು.ಪಿ ಯೋಧಾ ನಡುವಿನ ಮೊದಲ ಪಂದ್ಯ(Pro Kabaddi League) ರೋಚಕ ಟೈನಲ್ಲಿ ಅಂತ್ಯಗೊಂಡಿತು. ಪ್ರದೀಪ್ ನರ್ವಾಲ್ Vs ಮಣಿಂದರ್ ಸಿಂಗ್ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ 18 ರೇಡ್ ಪಾಯಿಂಟ್ಸ್ ಗಳಿಸಿ ಮಿಂಚಿದ್ರೆ, ಯು.ಪಿ ಯೋಧಾ ಪಡೆಯ ಸ್ಟಾರ್ ರೇಡರ್ ಪ್ರದೀಪ್ ನರ್ವಾಲ್ 11 ರೇಡ್ ಪಾಯಿಂಟ್ಸ್ ಕಲೆ ಹಾಕಿದರು.

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಇದನ್ನೂ ಓದಿ : Sachin Tendulkar in Goa: ಗೋವಾ ಕಡಲ ಕಿನಾರೆಯಲ್ಲಿ ಬೆಳ್ಳಂ ಬೆಳಗ್ಗೆ ಮೀನು ಹಿಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್

ದಿನದ 2ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ 40-33ರ ಅಂತರದಲ್ಲಿ ಗೆದ್ದ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ನಿರಂತರ ಆರು ಸೋಲುಗಳ ನಂತರ ಲೀಗ್’ನಲ್ಲಿ ಮೊದಲ ಗೆಲುವು ದಾಖಲಿಸಿತು. ಮೊದಲ ಐದು ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ದಬಾಂಗ್ ಡೆಲ್ಲಿ ಕೆ.ಸಿ ಕಳೆದ ಆರು ಪಂದ್ಯಗಳಲ್ಲಿ ಸೋತು ಭಾರೀ ಅವಮಾನಕ್ಕೀಡಾಗಿತ್ತು. ಆದರೆ ತೆಲುಗು ಟೈಟನ್ಸ್ ಬಳಗವನ್ನು ಸೋಲಿಸುವ ಮೂಲಕ ಹಾಲಿ ಚಾಂಪಿಯನ್ನರು ಮತ್ತೆ ಗೆಲುವಿನ ಹಾದಿಗೆ ಮರಳಿದ್ದಾರೆ.

ಇದನ್ನೂ ಓದಿ : Mayank to Captain Karnataka : ಕರ್ನಾಟಕ ತಂಡಕ್ಕೆ ಮಯಾಂಕ್ ನಾಯಕ, ಕರುಣ್ ನಾಯರ್‌ಗಿಲ್ಲ ಸ್ಥಾನ

Pro Kabaddi League : ಪ್ರೊ ಕಬಡ್ಡಿ ಲೀಗ್-9: ಬುಧವಾರದ ಪಂದ್ಯಗಳು

  1. ಬೆಂಗಳೂರು ಬುಲ್ಸ್ Vs ಹರ್ಯಾಣ ಸ್ಟೀಲರ್ಸ್
  2. ತಮಿಳ್ ತಲೈವಾಸ್ Vs ಪುಣೇರಿ ಪಲ್ಟನ್

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

(Pro Kabaddi League) Sixth edition champions Bangalore Bulls will face Haryana Steelers in their 12th league match of the Pro Kabaddi League-9 tournament on Wednesday. Bengaluru Bulls will top the points table if they win the first match on Wednesday at Chhatrapati Shivaji Sports Complex in Balewadi, Pune.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular