ಚೆನ್ನೈ: (Ravindra Jadeja to Quit CSK ) ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನದ್ದು 10 ವರ್ಷಗಳ ಸುದೀರ್ಘ ಬಾಂಧವ್ಯ. 2013ರಿಂದ ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾ ಬಂದಿರುವ ರವೀಂದ್ರ ಜಡೇಜಾ, ಮುಂದಿನ ವರ್ಷ ಹೊಸ ಫ್ರಾಂಚೈಸಿ ಪರ ಆಡುವ ಸಾಧ್ಯತೆಗಳಿವೆ.
ಹಾಗಾದ್ರೆ ರವೀಂದ್ರ ಜಡೇದಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ತೊರೆಯುವುದು ಗ್ಯಾರಂಟಿನಾ? ಹೌದು ಎನ್ನುತ್ತಿದೆ 2 ದಿನಗಳ ಹಿಂದೆ ನಡೆದಿರುವ ಅದೊಂದು ಬೆಳವಣಿಗೆ. 2022ರ ಫೆಬ್ರವರಿ 4ರಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರವೀಂದ್ರ ಜಡೇಜಾ ಬಗ್ಗೆ ಒಂದು ಟ್ವೀಟ್ ಮಾಡಿತ್ತು. CSK ಫ್ರಾಂಚೈಸಿ ಜೊತೆ ಜಡೇಜಾ 10 ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ “ಚೆನ್ನೈ ಜೊತೆ ಸೂಪರ್ ಜಡ್ಡು 10 ವರ್ಷ” ಎಂದು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಜಡೇಜಾ, “ಮುಂದಿನ 10 ವರ್ಷಗಳ ಪರ CSk ಪರ ಆಡಲಿದ್ದೇನೆ” ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟನ್ನು ಈಗ ರವೀಂದ್ರ ಜಡೇಜಾ ಡಿಲೀಟ್ ಮಾಡಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಇದು ಜಡೇಜಾ CSK ತೊರೆಯುವ ಮುನ್ಸೂಚನೆ ಎನ್ನಲಾಗುತ್ತಿದೆ.
ಐಪಿಎಲ್-2022ರಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಜಡೇಜಾ ನಾಯಕತ್ವದಲ್ಲಿ CSK ತಂಡ ಸತತ ಪಂದ್ಯಗಳಲ್ಲಿ ಸೋಲು ಅನುಭವಿಸಿದಾಗ ಟೂರ್ನಿಯ ಮಧ್ಯದಲ್ಲೇ ಜಡೇಜಾ ನಾಯಕತ್ವ ತೊರೆದಿದ್ದರು. ನಂತರ ಲೆಜೆಂಡ್ರಿ ಕ್ಯಾಪ್ಟನ್ ಎಂ.ಎಸ್ ಧೋನಿ ಮತ್ತು CSK ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡದ್ದರು. ಇದಾದ ನಂತರ ಟೂರ್ನಿಯ ಕೊನೆ ಕೊನೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡುವ ಬಳಗದಲ್ಲಿ ರವೀಂದ್ರ ಜಡೇಜಾ ಕಾಣಿಸಿಕೊಂಡಿರಲಿಲ್ಲ. ಇದು ಸಹಜವಾಗಿಯೇ ಜಡೇಜಾ ಮತ್ತು CSK ಫ್ರಾಂಚೈಸಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು. ಮತ್ತೊಂದು ಕುತೂಹಲಕಾರಿ ಸಂಗತಿ ಏನೆಂದರೆ, ಎಂ.ಎಸ್ ಧೋನಿ ಅವರ ಫೇವರಿಟ್ ಆಟಗಾರನಾಗಿದ್ದ ಜಡೇಜಾ, ಜುಲೈ 7ರಂದು ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯವನ್ನೇ ಹೇಳಿಲ್ಲ. ಇದೂ ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.
Ravindra Jadeja to Quit CSK Chennai Super Kings Indian Premier League