ಇಂಡಿಯನ್ ಪ್ರೀಮಿಯರ್ ಲೀಗ್ ( IPL 2022) ಹಲವು ವರ್ಷಗಳ ಬಳಿಕ ಇದೀಗ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಯಾವ ಆಟಗಾರ ಯಾವ ತಂಡ ಪಾಲಾಗುತ್ತಾರೆ ಅನ್ನೋ ಕುತೂಹಲ ಗರಿಗೆದರಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಕೂಡ ಮೆಗಾ ಹರಾಜಿನ ಗಾಗಿ (ipl 2022 mega auction rcb) ಕಾಯುತ್ತಿದ್ದಾರೆ. ಅದ್ರಲ್ಲೂ ಪ್ರತಿ ತಂಡವು ಅತ್ಯುತ್ತಮ ನಾಯಕನನ್ನು ಪ್ರಯತ್ನಿಸುತ್ತಿದೆ. ಇದೀಗ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಯ್ಲಿ ನಾಯಕತ್ವ ತ್ಯೆಜಿಸಿದ ಬೆನ್ನಲ್ಲೇ ಆರ್‌ಸಿಬಿಯ ಮುಂದಿನ ನಾಯಕ (ipl 2022 rcb captain)ಯಾರು ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಇದೀಗ ವಿರಾಟ್ ಕೊಯ್ಲಿ ನಂತರದಲ್ಲಿ ಐಪಿಎಲ್ 2022ಕ್ಕೆ ಕನ್ನಡಿಗ ಮನೀಶ್ ಪಾಂಡೆ ಅವರನ್ನು ಆರ್‌ಸಿಬಿ ನಾಯಕರನ್ನಾಗಿ (RCB IPL 2022) ಆಯ್ಕೆ ಎಂಬ ಮಾತು ಇದೀಗ ಆರ್‌ಸಿಬಿ ಅಂಗಳದಿಂದ ಕೇಲಿಬಂದಿದೆ.
ವಿರಾಟ್ ಕೊಯ್ಲಿ ಈಗಾಗಲೇ ತಂಡದಲ್ಲಿ ಉಳಿದುಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡವನ್ನು ವಿರಾಟ್ ಕೊಯ್ಲಿ ಮುನ್ನಡೆಸಿದ್ದಾರೆ. ನಾಯಕತ್ವದ ಕೆಳಗಿಳಿಯುವ ಹೊತ್ತಲ್ಲೇ ನಾನು ತಂಡದಲ್ಲಿ ಮುಂದುವರಿಯುವುದಾಗಿ ಹೇಳಿದ್ದರು. ಅಂತೆಯೇ ನಡೆದುಕೊಳ್ಳುತ್ತಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಪ್ರಥಮ ಶತಕ ಸಿಡಿಸಿರುವ ಕನ್ನಡಿಗ ಮನೀಶ್ ಪಾಂಡೆ ಈ ಬಾರಿ ತವರು ತಂಡವನ್ನು ಸೇರುವುದು ಬಹುತೇಕ ಖಚಿತ. ಈಗಾಗಲೇ ದೇಶೀಯ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿರುವ ಮನೀಶ್ ಪಾಂಡೆ ಈ ಬಾರಿ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.
ವರದಿಯ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮನೀಶ್ ಪಾಂಡೆಯನ್ನು ಬಿಡ್ ಮಾಡಲು ಯೋಜಿಸುತ್ತಿದೆ. ಕರ್ನಾಟಕದ ಆಟಗಾರನನ್ನು 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬರೋಬ್ಬರಿ 11 ಕೋಟಿಗೆ ಖರೀದಿಸಿತು. ಮನೀಶ್ ಪಾಂಡೆ ಅದ್ಬುತ ಫಾರ್ಮ್‌ನಲ್ಲಿದ್ದ ಸಂದರ್ಭದಲ್ಲಿಯೂ ಸನ್‌ರೈಸಸ್ ಹೈದ್ರಾಬಾದ್ ತಂಡ ಆಡುವ ಬಳಗದಿಂದ ಅವರನ್ನು ಕೈಬಿಟ್ಟಿತ್ತು.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ( SMAT 2021) ಮನೀಶ್ ಪಾಂಡೆ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಆಟಗಾರರ ಕೊರತೆಯ ನಡುವಲ್ಲೇ ಕರ್ನಾಟಕ ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ದಿದ್ದರು. ಹಲವು ವರ್ಷಗಳ ಕಾಲ ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸಿರುವ ಅನುಭವವನ್ನು ಹೊಂದಿದ್ದಾರೆ. ಜೊತೆಗೆ ಮನೀಶ್ ಪಾಂಡೆ ಐಪಿಎಲ್‌ನ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಪಾಂಡೆ ಕಳೆದ ಋತುವಿನಲ್ಲಿ ಫಾರ್ಮ್ ಕಳೆದುಕೊಂಡಿದ್ದರು. ಆದರೆ ದೇಶೀಯ ಪಂದ್ಯಗಳಲ್ಲಿ ಪಾಂಡೆ ಬ್ಯಾಟಿಂಗ್ ಪರಾಕ್ರಮ ಮೆರೆಯುತ್ತಿದ್ದಾರೆ. ಹೀಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಮನೀಶ್ ಪಾಂಡೆ ಹೆಸರು ಕಾಣಿಸಿಕೊಳ್ಳುವುದು ಖಚಿತವಾಗಿದೆ. ಈ ಹಿಂದೆ ಸನ್‌ರೈಸಸ್ ಹೈದ್ರಾಬಾದ್ ತಂಡವನ್ನು ನಾಯಕನ ಅನುಪಸ್ಥಿತಿಯಲ್ಲಿ ಮನೀಶ್ ಪಾಂಡೆ ಮುನ್ನಡೆಸಿದ್ದರು.
ಮನೀಶ್ ಪಾಂಡೆ ನೇತೃತ್ವದಲ್ಲಿ ಕರ್ನಾಟಕದ ತಂಡ ಸೈಯದ್ ಮುಷ್ತಾಕ್ ಟೂರ್ನಮೆಂಟ್ ನಲ್ಲಿ ಫೈನಲ್ ಪ್ರವೇಶಿಸಿದೆ. ಅಲ್ಲದೇ ಟೂರ್ನಿಯಲ್ಲಿಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಯನ್ನು ಮನೀಷ್ ಪಾಂಡೆ ಪಡೆದುಕೊಂಡಿದ್ದಾರೆ. ಪಾಂಡೆ ಒಟ್ಟು 9 ಪಂದ್ಯಗಳಲ್ಲಿ 272 ರನ್ ಗಳಿಸಿದ್ದರು. ಇನ್ನಿಂಗ್ಸ್ 3 ಅರ್ಧಶತಕಗಳು ಒಳಗೊಂಡಿದೆ. ನಾಯಕನಾಗಿ ಪಾಂಡೆ ಅದ್ಬುತ ಪ್ರದರ್ಶನ ನೀಡಿರುವುದು ಆರ್‌ಸಿಬಿ ಕಣ್ಣು ಕುಕ್ಕಿದೆ. ಇದೇ ಕಾರಣಕ್ಕೆ ಮನೀಶ್ ಪಾಂಡೆಯನ್ನು ಸೆಳೆಯಲು ಆರ್‌ಸಿಬಿ ಲೆಕ್ಕಾಚಾರ ಹಾಕಿಕೊಂಡಿದೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ ಸಾಕಷ್ಟು ಜಗಳವಾಡುತ್ತಾರೆ : ಕೊಹ್ಲಿ ವರ್ತನೆ ಬಗ್ಗೆ ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ
ಇದನ್ನೂ ಓದಿ : Lucknow IPL 2022 : ಲಖನೌ ತಂಡಕ್ಕೆ ಆಂಡಿ ಫ್ಲವರ್ ಕೋಚ್, ಗೌತಮ್ ಗಂಭೀರ್ ಮೆಂಟರ್, ಕೆಎಲ್ ರಾಹುಲ್ ನಾಯಕ
ಇದನ್ನೂ ಓದಿ : Vijay Hazare Trophy 2021 : ಪಾಂಡೆ, ಸಿದ್ದಾರ್ಥ್, ಸಮರ್ಥ ಆರ್ಭಟ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ
( RCB choose Manish Pandey as captain for IPL 2022 mega auction)