ಬೆಂಗಳೂರು : ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಸಿದ್ದತೆಯನ್ನು(RCB in IPL 2022) ನಡೆಸುತ್ತಿದೆ. ಈಗಾಗಲೇ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವಲ್ಲೇ ಆರ್‌ಸಿಬಿಗೆ ವೆಸ್ಟ್ ಇಂಡೀಸ್‌ನ ಈ ಆಟಗಾರನೇ ನಾಯಕನಾಗ್ತಾನೆ ಅನ್ನೋ ಮಾತು ಕೇಳಿಬರುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರಂತಹ ದಿಗ್ಗಜರನ್ನು ಉಳಿಸಿಕೊಂಡಿದೆ. ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ದೇವದತ್ ಪಡಿಕ್ಕಲ್ ಮುಂತಾದ ಅನೇಕ ಸ್ಟಾರ್ ಆಟಗಾರರು ಫ್ರಾಂಚೈಸಿಯಿಂದ ಬಿಡುಗಡೆಗೊಳಿಸಿದೆ. ತಂಡದ ನಾಯಕ ವಿರಾಟ್ ಕೊಯ್ಲಿ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಹೊಸ ನಾಯಕನ ಬಗ್ಗೆ ಚರ್ಚೆ ಶುರುವಾಗಿದೆ. ತಂಡದಲ್ಲಿ ಉಳಿದುಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್ ಹೆಸರಗಳು ಬಲವಾಗಿ ಕೇಳಿಬರುತ್ತಿದೆ. ಅಲ್ಲದೇ ಕನ್ನಡಿಗ ಮನೀಷ್ ಪಾಂಡೆ ಹೆಸರು ಕೂಡ ಮುಂಚೂಣಿಯಲ್ಲಿದೆ.
ಈ ನಡುವಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಆಗಿರುವ ಆಕಾಶ್ ಚೋಪ್ರಾ RCB ನಾಯಕತ್ವಕ್ಕೆ ಕುತೂಹಲಕಾರಿಯಾಗಿರುವ ಆಟಗಾರನ ಹೆಸರನ್ನು ಸೂಚಿಸಿದ್ದಾರೆ. ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ, “ಆರ್‌ಸಿಬಿಗೆ, ವೆಸ್ಟ್ ಇಂಡೀಸ್ ಮಾಜಿ ನಾಯಕ ಜೇಸನ್ ಹೋಲ್ಡರ್ ಕೂಡ ನಾಯಕತ್ವಕ್ಕೆ ಆಯ್ಕೆಯಾಗಿದ್ದಾರೆ. ಅವರು ಹೊಸ ನಾಯಕನನ್ನು ಖರೀದಿಸಬೇಕಾಗಿದೆ ಮತ್ತು ಅದು ಹೋಲ್ಡರ್ ಆಗಿರಬಹುದು. ಅಲ್ಲಿನ ಪಿಚ್ ಮತ್ತು ಇತರ ವಿಷಯಗಳ ಬಗ್ಗೆ ನಾನು ಯೋಚಿಸಿದಾಗ, ಹೋಲ್ಡರ್ ಮೌಲ್ಯಯುತ ಆಟಗಾರನಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಅವರು ಎಲ್ಲಾ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದಾರೆ.
ಐಪಿಎಲ್ 2022 ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಇದೀಗ ಹೊಸದಾಗಿ ಸೇರ್ಪಡೆಯಾಗಿವೆ. ಮೆಗಾ ಹರಾಜಿನಲ್ಲಿ ತಂಡಗಳ ಖರೀದಿಗೂ ಅವಕಾಶವಿದೆ. ಹೀಗಾಗಿ ಬಲಿಷ್ಠ ನಾಯಕನನ್ನು ಆಯ್ಕೆ ಮಾಡಲು ತಂಡಗಳಿಗೆ ಅವಕಾಶವಿದೆ. ಲಕ್ನೋ ಹಾಗೂ ಅಹಮದಾಬಾದ್ ತಂಡಗಳಿಗೆ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್ ಹೆಸರು ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಆರ್. ಅಶ್ವಿನ್ ಹಾಗೂ ಇಶಾನ್ ಕಿಶನ್ ಅವರು ನಾಯಕತ್ವಕ್ಕೆ ಆಯ್ಕೆಯಾಗುವುದಿಲ್ಲ ಎಂದಿದ್ದಾರೆ.
ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮೊದಲೇ ನಾಯಕನಾಗಿದ್ದ ವಿರಾಟ್ ಕೊಯ್ಲಿ ಆರ್‌ಸಿಬಿ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಯಾರು ನಾಯಕನಾಗ್ತಾರೆ ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿತ್ತು. ಕಳೆದ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಹೇಳಿಕೊಳ್ಳುವ ಸಾಧನೆಯನ್ನು ಮಾಡಿಲ್ಲ. ಇನ್ನೊಂದೆಡೆಯಲ್ಲಿ ಎಬಿಡಿ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಜೊತೆಗೆ ವಿರಾಟ್ ಕೊಯ್ಲಿ ಮತ್ತೆ ಆರ್‌ಸಿಬಿ ತಂಡದಲ್ಲಿಯೇ ಉಳಿದು ಕೊಂಡಿದ್ದಾರೆ. ಟೀಂ ಇಂಡಿಯಾದ ಚುಟುಕು ಕ್ರಿಕೆಟ್ ನಾಯಕತ್ವಕ್ಕೂ ಕೊಯ್ಲಿ ರಾಜೀನಾಮೆ ನೀಡಿದ್ದು, ರೋಹಿತ್ ಶರ್ಮಾ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನೆಡೆಸುತ್ತಿದ್ದಾರೆ.
ಇದನ್ನೂ ಓದಿ : IPL 2022 Lucknow Team : ಲಕ್ನೋ ತಂಡಕ್ಕೆ ಕೆ.ಎಲ್. ರಾಹುಲ್ ನಾಯಕ : ಸಾಥ್ ಕೊಡ್ತಾರೆ ವಾರ್ನರ್, ರಶೀದ್ ಖಾನ್
ಇದನ್ನೂ ಓದಿ : AB De Villiers : RCB ತಂಡಕ್ಕೆ ಮರಳಿದ್ದಾರೆ ಎಬಿ ಡಿವಿಲಿಯರ್ಸ್
ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್‌ನಲ್ಲಿ ಅಜಾಜ್ ಪಟೇಲ್ ವಿಶ್ವದಾಖಲೆ : ಕುಂಬ್ಳೆ, ಜಿಮ್ ಲೇಕರ್ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್ ಸ್ಪಿನ್ನರ್
(RCB in IPL 2022: West Indies player will Lead Royal Challengers Bangalore)