ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬೆನ್ನಲ್ಲೇ ಇದೀಗ ಆರ್‌ಸಿಬಿ ಹೊಸ ನಾಯಕನನ್ನು ನೇಮಕ ಮಾಡಿದೆ. ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಫಾಫ್ ಡು ಪ್ಲೆಸಿಸ್ ( Faf du Plessis) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಟಾ ಐಪಿಎಲ್ 2022 (TATA IPL 2022)ಗೆ ತಂಡದ ನಾಯಕನನ್ನಾಗಿ ( RCB captain ) ನೇಮಕ ಮಾಡಿದೆ.
ಸುದೀರ್ಘ ಅವಧಿಯ ವರೆಗೆ ಆರ್‌ಸಿಬಿ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಕಳೆದ ಬಾರಿಯ ಐಪಿಎಲ್ ವೇಳೆಯಲ್ಲಿಯೇ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಅಲ್ಲದೇ ಮೆಗಾ ಹರಾಜಿಗೂ ಮೊದಲು ಆಸ್ಟ್ರೇಲಿಯಾದ ಖ್ಯಾತ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮದ್ ಸಿರಾಜ್ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿತ್ತು. ಅಲ್ಲದೇ ಮ್ಯಾಕ್ಸ್‌ವೆಲ್ ಅವರನ್ನು ತಂಡದ ನಾಯಕನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಆರಂಭಿಕ ಪಂದ್ಯಗಳಿಂದ ಮ್ಯಾಕ್ಸ್‌ವೆಲ್ ಹೊರಗುಳಿಯುವ ಹಿನ್ನೆಲೆಯಲ್ಲಿ ಪರ್ಯಾಯ ನಾಯಕನಿಗಾಗಿ ಹುಡುಕಾಟವನ್ನು ನಡೆಸಿತ್ತು.
ಮೆಗಾ ಹರಾಜಿನಲ್ಲಿ ಡುಪ್ಲೆಸಿಸ್ ಅವರನ್ನು ಖರೀದಿಸಿದ ನಂತರದಲ್ಲಿ ಅವರನ್ನೇ ನಾಯಕನನ್ನಾಗಿ ನೇಮಿಸಲಾಗುತ್ತದೆ ಎನ್ನಲಾಗಿತ್ತು. ಇನ್ನೊಂದೆಡೆ ವಿರಾಟ್ ಕೊಹ್ಲಿ ಮತ್ತೆ ನಾಯಕ ನಾಗಲಿ ಅನ್ನೋ ಮಾತುಗಳು ಕೇಳಿಬಂದಿದ್ದವು. ಕೊನೆಗೂ ಆರ್‌ಸಿಬಿ ಇದೀಗ ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡಿದೆ. ಕಳೆದ ಬಾರಿ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದ ಡು ಪ್ಲೆಸಿಸ್ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 100 ಪಂದ್ಯಗಳನ್ನು ಆಡಿದ್ದು, 2935 ರನ್ ಗಳಿಸಿದ್ದಾರೆ. ಅದ್ರಲ್ಲೂ ಐಪಿಎಲ್ 2021 ಅಭಿಯಾನದಲ್ಲಿ 16 ಪಂದ್ಯಗಳಲ್ಲಿ 633 ರನ್ ಗಳಿಸುವ ಮೂಲಕ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
𝗥𝗖𝗕 𝗨𝗡𝗕𝗢𝗫
— Royal Challengers Bangalore (@RCBTweets) March 7, 2022
1️⃣2️⃣th March 2️⃣0️⃣2️⃣2️⃣ #ForOur12thMan
Watch this space for more. 😎#PlayBold #UnboxTheBold #WeAreChallengers pic.twitter.com/nXjycELqgc
IPL 2022 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ:
ಉಳಿಸಿಕೊಂಡಿರುವವರು: ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ), ಮೊಹಮ್ಮದ್ ಸಿರಾಜ್ (7 ಕೋಟಿ). ಆರ್‌ಸಿಬಿ ಹರಾಜಿನಲ್ಲಿ ಖರೀದಿಸಿದವರು: ಮಹಿಪಾಲ್ ಲೊಮ್ರೊರ್ (95 ಲಕ್ಷ), ಫಿನ್ ಅಲೆನ್ (80 ಲಕ್ಷ), ಶೆರ್ಫೇನ್ ರುದರ್‌ಫೋರ್ಡ್ (1ಕೋಟಿ ), ಜೇಸನ್ ಬೆಹ್ರೆನ್‌ಡಾರ್ಫ್ (75 ಲಕ್ಷ ), ಸುಯಶ್ ಪ್ರಭುದೇಸಾಯಿ (30 ಲಕ್ಷ), ಚಾಮಾ ಮಿಲಿಂದ್ (25 ಲಕ್ಷ), ಅನೀಶ್ವರ್ ಗೌತಮ್ (20 ಲಕ್ಷ. ), ಕರ್ಣ್ ಶರ್ಮಾ (50 ಲಕ್ಷ), ಡೇವಿಡ್ ವಿಲ್ಲಿ (2 ಕೋಟಿ), ಸಿದ್ಧಾರ್ಥ್ ಕೌಲ್ (75 ಲಕ್ಷ), ಲುವ್ನಿತ್ ಸಿಸೋಡಿಯಾ (20 ಲಕ್ಷ), ಫಾಫ್ ಡು ಪ್ಲೆಸಿಸ್ (7 ಕೋಟಿ), ಹರ್ಷಲ್ ಪಟೇಲ್ (10.75 ಕೋಟಿ), ವನಿಂದು ಹಸರಂಗ (10.75 ಕೋಟಿ ), ದಿನೇಶ್ ಕಾರ್ತಿಕ್ (5.5 ಕೋಟಿ), ಜೋಶ್ ಹೇಜಲ್‌ವುಡ್ (7.75 ಕೋಟಿ), ಶಹಬಾಜ್ ಅಹಮದ್ (2.4 ಕೋಟಿ), ಅನುಜ್ ರಾವತ್ (3.4 ಕೋಟಿ), ಆಕಾಶ್ ದೀಪ್ (20 ಲಕ್ಷ).
( RCB officially announced Faf du Plessis as new captain for Tata IPL 2022)