RCB play off chance : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಐಪಿಎಲ್-2024 (IPL 2024) ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲಿದೆಯೇ ಇಲ್ಲವೇ ಎಂಬುದು ಇಂದು ನಿರ್ಧಾರವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 13 ಪಂದ್ಯಗಳಿಂದ 12 ಅಂಕ ಕಲೆ ಹಾಕಿದ್ದು, ಪ್ಲೇ ಆಫ್(IPL 2024 Plyoff) ಕನಸನ್ನು ಜೀವಂತವಾಗಿ ಇಡಬೇಕಾದರೆ ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಉತ್ತಮ ರನ್’ರೇಟ್’ನೊಂದಿಗೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಚೆನ್ನೈ ವಿರುದ್ಧದ (RCB vs CSK) ಪಂದ್ಯದಲ್ಲಿ ಗೆದ್ದರೂ ಆರ್’ಸಿಬಿಯ ಪ್ಲೇ ಆಫ್ ಭವಿಷ್ಯ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜಯಂಟ್ಸ್ (Lucknow Super Giants) ತಂಡದ ಮೇಲೆ ನಿಂತಿದೆ. ಆರ್’ಸಿಬಿ ಪ್ಲೇ ಆಫ್ ಪ್ರವೇಶಿಸ ಬೇಕಾದರೆ ಲಕ್ನೋ ತಂಡ ತನ್ನ ಎರಡು ಲೀಗ್ ಪಂದ್ಯಗಳಲ್ಲಿ ಒಂದನ್ನು ಸೋಲಲೇಬೇಕಿದೆ. ಲಕ್ನೋ ಸೂಪರ್ ಜಯಂಟ್ಸ್ ತಂಡ ಆಡಿರುವ 12 ಪಂದ್ಯಗಳಿಂದ 12 ಪಾಯಿಂಟ್ಸ್ ಕಲೆ ಹಾಕಿದ್ದು, ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ ಆರ್’ಸಿಬಿ ಪ್ಲೇ ಆಫ್ ರೇಸ್’ನಿಂದ ಬಹುತೇಕ ಹೊರ ಬೀಳಲಿದೆ.
ಇಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್ ಜಯಂಟ್ಸ್ ತಂಡ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ (DC vs LSG) ತಂಡವನ್ನು ಎದುರಿಸಲಿದೆ. ಡೆೆಲ್ಲಿ ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರ ಬಿದ್ದಿದ್ದು, ಲಕ್ನೋ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯವನ್ನು ಲಕ್ನೋ ಗೆದ್ದರೆ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

ಇದನ್ನೂ ಓದಿ : RCB Big Offer To KL Rahul: ಎಲ್ಲಾ ನಿನ್ನವರೇ.. ಇಲ್ಲಿ ಯಾರೂ ನಿನ್ನನ್ನು ಬೈಯುವವರಿಲ್ಲ.. ರಾಹುಲ್’ಗೆ ಹೀಗೊಂದು RCB ಆಫರ್..!
ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ 19 ಅಂಕಗಳೊಂದಿಗೆ ಮೊದಲ ತಂಡವಾಗಿ ಪ್ಲೇ ಆಫ್’ಗೆ ಲಗ್ಗೆ ಇಟ್ಟಿದೆ. ರಾಜಸ್ಥಾನ ರಾಯಲ್ಸ್ 16 ಅಂಕಗಳೊಂದಿಗೆ ಬಹುತೇಕ ಪ್ಲೇ ಆಫ್ ಹಾಗಿಯಲ್ಲಿದೆ. 12 ಪಂದ್ಯಗಳಿಂದ 14 ಅಂಕ ಗಳಿಸಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಪ್ಲೇ ಆಫ್’ನಲ್ಲಿ ಕಾಣಿಸಿಕೊಳ್ಳಲಿದೆ. ಉಳಿದಿರುವ ಒಂದು ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜಯಂಟ್ಸ್ ತಂಡಗಳ ಮಧ್ಯೆ ಭಾರೀ ಸ್ಪರ್ಧೆ ಏರ್ಪಟ್ಟಿದೆ.
ಇದನ್ನೂ ಓದಿ : Rohit Sharma Out Of Mumbai Indians: ಮುಂಬೈ ತಂಡದಿಂದ ರೋಹಿತ್ ಶರ್ಮಾಗೆ ಗೇಟ್ ಪಾಸ್ ಪಕ್ಕಾ? ಸೆಹ್ವಾಗ್ ಕೊಟ್ಟರಲ್ಲ “ದೊಡ್ಡ” ಸಂದೇಶ !
RCB play off chance in the hands of KL Rahul Royal Challengers fate is decided today LSG vs DC Match