ಲೀಸೆಸ್ಟರ್ : (Rohit Sharma’s daughter) ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕೋವಿಡ್ ಪಾಸಿಟಿವ್ ಕಾರಣ ಇಂಗ್ಲೆಂಡ್’ನಲ್ಲಿ ಐಸೋಲೇಷನ್ ನಲ್ಲಿದ್ದಾರೆ. ಲೀಸೆಸ್ಟರ್”ನಲ್ಲಿ ನಡೆದ ಲೀಸೆಸ್ಟರ್’ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಶರ್ಮಾ ಕೋವಿಡ್”ಗೆ ಗುರಿಯಾಗಿದ್ದರು. ಹೀಗಾಗಿ ಅಭ್ಯಾಸ ಪಂದ್ಯದ 2ನೇ ಇನ್ನಿಂಗ್ಸ್”ನಲ್ಲಿ ರೋಹಿತ್ ಬ್ಯಾಟಿಂಗ್”ಗೆ ಇಳಿದಿರಲಿಲ್ಲ. ಸದ್ಯ ಟೀಮ್ ಇಂಡಿಯಾ ಕ್ಯಾಪ್ಟನ್, ಲೀಸೆಸ್ಟರ್”ನಲ್ಲಿ ತಂಡ ತಂಗಿದ್ದ ಹೋಟೆಲ್”ನಲ್ಲಿ ಐಸೋಲೇಷನ್”ನಲ್ಲಿದ್ದಾರೆ.
ಹಾಗಾದರೆ ರೋಹಿತ್ ಶರ್ಮಾ ಈಗ ಹೇಗಿದ್ದಾರೆ ? ರೋಹಿತ್ ಹೆಲ್ತ್ ರಿಪೋರ್ಟ್ ಏನ್ ಹೇಳ್ತಿದೆ ? ಇದು ಪ್ರತಿಯೊಬ್ಬ ರೋಹಿತ್ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಸ್ವತಃ ರೋಹಿತ್ ಶರ್ಮಾ ಅವರ 3 ವರ್ಷದ ಮಗಳು ಸಮೈರಾ ಉತ್ತರ ಕೊಟ್ಟಿದ್ದಾಳೆ.
ಲೀಸೆಸ್ಟರ್ ಹೋಟೆಲ್ ರೂಂನಿಂದ ರೋಹಿತ್ ಶರ್ಮಾ ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಹೊರ ಬರುತ್ತಿದ್ದಾಗ ಹೋಟೆಲ್ ಲಾಂಜ್’ನಲ್ಲಿದ್ದವರು ರೋಹಿತ್ ಬಗ್ಗೆ ಮಗಳನ್ನು ಪ್ರಶ್ನಿಸಿದ್ದಾರೆ. ಹಾಗಾದರೆ ರೋಹಿತ್ ಶರ್ಮಾ ಈಗ ಹೇಗಿದ್ದಾರೆ ? ರೋಹಿತ್ ಹೆಲ್ತ್ ರಿಪೋರ್ಟ್ ಏನ್ ಹೇಳ್ತಿದೆ? ಇದು ಪ್ರತಿಯೊಬ್ಬ ರೋಹಿತ್ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಸ್ವತಃ ರೋಹಿತ್ ಶರ್ಮಾ ಅವರ ಪುತ್ರಿ ಸಮೈರಾ ಉತ್ತರ ಕೊಟ್ಟಿದ್ದಾಳೆ.
ಪ್ರಶ್ನೆ: ನಿನ್ನ ತಂದೆ ಹೇಗಿದ್ದಾರೆ?
ಸಮೈರಾ ಉತ್ತರ: ತಂದೆ ರೂಮ್’ನಲ್ಲಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ರೋಹಿತ್ ಶರ್ಮಾ ಮಗಳು ಸಮೈರಾ ಈ ರೀತಿ ತಂದೆಯ ಹೆಲ್ತ್ ರಿಪೋರ್ಟ್ ರಿಪೋರ್ಟ್ ಕೊಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : Mayank Agarwal : ರೋಹಿತ್‌ಗೆ ಕೋವಿಡ್, ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಒಲಿದ ಅದೃಷ್ಟ
ಇದನ್ನೂ ಓದಿ : India vs South Africa T20 : ಜುಲೈ 1, 2, 3ರಂದು ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ಹಣ ವಾಪಸ್
ಇದನ್ನೂ ಓದಿ : India Vs England test : ಭಾರತವನ್ನು ಸೋಲಿಸುವುದು ಸುಲಭವಲ್ಲ.. ಇಂಗ್ಲೆಂಡ್ ಎಚ್ಚರಿಕೆ ಕೊಟ್ಟ ಸ್ವಂತ ಆಟಗಾರ
Rohit Sharma’s daughter who gave the Father’s Health Report as a Cute