ಬೆಂಗಳೂರು : (RP Singh Son Harry Singh) ಟೀಮ್ ಇಂಡಿಯಾದ ಮಾಜಿ ಎಡಗೈ ವೇಗದ ಬೌಲರ್ ಆರ್.ಪಿ ಸಿಂಗ್ ಅವರ ಪುತ್ರ ಹ್ಯಾರಿ ಸಿಂಗ್ ಇಂಗ್ಲೆಂಡ್ ಅಂಡರ್-19 ತಂಡದ ಪರ ಆಡುತ್ತಿದ್ದಾನೆ. ಹೌದು ರುದ್ರಪ್ರತಾಪ್ ಸಿಂಗ್ ಸೀನಿಯರ್ ಅವರ ಪುತ್ರ ಹ್ಯಾರಿ ಸಿಂಗ್ (Harry Singh) ಶ್ರೀಲಂಕಾ ವಿರುದ್ಧದ 19ರ ವಯೋಮಿತಿಯ ಟೂರ್ನಿಗೆ ಇಂಗ್ಲೆಂಡ್ U-19 ತಂಡಕ್ಕೆ ಆಯ್ಕೆಯಾಗಿದ್ದಾನೆ.
ಆರ್.ಪಿ ಸಿಂಗ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ತಮ್ಮ ಮೊನಚಾದ ಎಡಗೈ ಸ್ವಿಂಗ್ ಬೌಲಿಂಗ್ ದಾಳಿಯಿಂದ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದ ಆಟಗಾರ. 2007 ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ. ಆರ್.ಪಿ ಸಿಂಗ್ ಭಾರತ ತಂಡದ ಪರ 14 ಟೆಸ್ಟ್, 58 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ಇಂಗ್ಲೆಂಡ್ ಅಂಡರ್-19 ತಂಡದ ಪರ ಆಡುತ್ತಿರುವ ಹ್ಯಾರಿ ಸಿಂಗ್, ಈ ಆರ್.ಪಿ ಸಿಂಗ್ ಅವರ ಪುತ್ರನಲ್ಲ… ಹ್ಯಾರಿ ಸಿಂಗ್ ಅವರ ತಂದೆಯ ಹೆಸರು ಆರ್.ಪಿ ಸಿಂಗ್ ಸೀನಿಯರ್. ಕಾಕತಾಳೀಯವೆಂದರೆ ಆರ್.ಪಿ ಸಿಂಗ್ ಅವರಂತೆ ಆರ್.ಪಿ ಸಿಂಗ್ ಸೀನಿಯರ್ ಅವರ ತವರು ರಾಜ್ಯವೂ ಉತ್ತರ ಪ್ರದೇಶ.
ಲಕ್ನೋದವರಾದ ಆರ್.ಪಿ ಸಿಂಗ್ ಸೀನಿಯರ್ 1986ರಲ್ಲಿ ಭಾರತ ಪರ ಎರಡು ಏಕದಿನ ಪಂದ್ಯಗಳನ್ನಾಡಿದ್ದರು. 90ರ ದಶಕದಲ್ಲಿ ಇಂಗ್ಲೆಂಡ್’ಗೆ ತೆರಳಿ ಅಲ್ಲೇ ಸೆಟ್ಲ್ ಆಗಿ ಲ್ಯಾಂಕಾಶೈರ್ ಕೌಂಟಿ ಕ್ಲಬ್ ಮತ್ತು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್’ನಲ್ಲಿ ಕೋಚಿಂಗ್ ಆರಂಭಿಸಿದ್ದರು. ಲ್ಯಾಂಕಾಶೈರ್ ತಂಡದ ಓಪನರ್ ಆಗಿರುವ ಆರ್.ಪಿ ಸಿಂಗ್ ಸೀನಿಯರ್ ಪುತ್ರ ಹ್ಯಾರಿ ಸಿಂಗ್, ಈಗ ಇಂಗ್ಲೆಂಡ್ U-19 ತಂಡಕ್ಕೆ ಆಯ್ಕೆಯಾಗಿದ್ದಾನೆ.
RP Singh Son Harry Singh Playing for England U-19