ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾವಿನ ಸುದ್ದಿ ಹೊರ ಬೀಳುತ್ತಲೇ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಇದೀಗ ಪವರ್ ಸ್ಟಾರ್ ನಿಧನಕ್ಕೆ ಕ್ರಿಕೆಟಿಗ ವೀರೇಂದ್ರ ಸಹವಾಗ್ ಕಂಬನಿ ಮಿಡಿದಿದ್ದಾರೆ.
ವೀರೇಂದ್ರ ಸೆಹವಾಗ್ ಅವರು ಅಪ್ಪು ನಿಧನಕ್ಕೆ ಟ್ವೀಟ್ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಉತ್ತಮ ನಟನ ನಿಧನ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹೊಡೆತವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದಿದ್ದಾರೆ.
Saddened to hear about the passing away of #PuneethRajkumar . Warm , and humble, his passing away is a great blow to Indian cinema. May his soul attain sadgati. Om Shanti. pic.twitter.com/YywkotiWqC
— Virender Sehwag (@virendersehwag) October 29, 2021
ಇನ್ನು ಭಾರತ ತಂಡ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಅಪ್ಪು ಹಠಾತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಮ್ಮ ಆತ್ಮೀಯ ಪುನೀತ್ ರಾಜ್‌ಕುಮಾರ್ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಕುಟುಂಬಕ್ಕೆ ಈ ಯಾತನಾಮಯ ಸಮಯದಲ್ಲಿ ಅವರ ಅಭಿಮಾನಿಗಳು ಶಾಂತತೆಯನ್ನು ಕಾಪಾಡಿಕೊಳ್ಳಲು ಮತ್ತು ಅವರ ಸದ್ಗತಿಗಾಗಿ ಪ್ರಾರ್ಥಿಸಲು ನಾನು ವಿನಂತಿಸುತ್ತೇನೆ. ಓಂ ಶಾಂತಿ
Extremely sad to know of the passing away of our dear #PuneethRajkumar . My heartfelt condolences to his family, friends and fans. I request his fans to maintain calm and pray for his Sadgati in this excruciating time for the family. Om Shanti 🙏🏼 pic.twitter.com/T3WsUnBS7n
— Venkatesh Prasad (@venkateshprasad) October 29, 2021
ಬಾಲಿವುಡ್ ನಟ ಸೋನು ಸೂದ್ ಪುನೀತ್ ಹಠಾತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸುದ್ದಿಯಿಂದ ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಮನೋಜ್ ಮಂಚು ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
Heartbroken 💔
— sonu sood (@SonuSood) October 29, 2021
Will always miss you my brother. #PuneethRajkumar
ಇದನ್ನೂ ಓದಿ : ಬಾರದ ಲೋಕಕ್ಕೆ ಪಯಣಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು : ತಂದೆಯಂತೆಯೇ ನೇತ್ರದಾನ ಮಾಡಿದ ಪುನೀತ್ ರಾಜ್ ಕುಮಾರ್
Puneeth Raj Kumar dies: Great blow to Indian cinema; Virender Sehwag