ಸೋಮವಾರ, ಏಪ್ರಿಲ್ 28, 2025
HomeSportsSania Mirza : ವೃತ್ತಿಪರ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮಾತುಗಳನ್ನಾಡಿದ ಸಾನಿಯಾ ಮಿರ್ಜಾ

Sania Mirza : ವೃತ್ತಿಪರ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮಾತುಗಳನ್ನಾಡಿದ ಸಾನಿಯಾ ಮಿರ್ಜಾ

- Advertisement -

Sania Mirza : ಭಾರತದ ಇತಿಹಾಸದಲ್ಲಿಯೆ ಟೆನ್ನಿಸ್​ ಆಟವನ್ನು ಮತ್ತೊಂದು ಹಂತಕ್ಕೆ ಏರಿಸಿದ್ದ ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ವಿದಾಯವನ್ನು ಘೋಷಿಸುವ ಮಾತುಗಳನ್ನಾಡಿದ್ದಾರೆ. 2022ರ ಆವೃತ್ತಿಯ ಬಳಿಕ ತಾವು ಟೆನ್ನಿಸ್​ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಾಗಿ ಮಾಹಿತಿ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ನೇ ಸಾಲಿನ ಮೊದಲ ಗ್ರ್ಯಾನ್​ ಸ್ಲಾಮ್​ ಟೆನ್ನಿಸ್​ ಟೂರ್ನಿ ಆಸ್ಟ್ರೇಲಿಯನ್​ ಓಪನ್​ ಮಹಿಳೆಯ ಡಬಲ್ಸ್​ ವಿಭಾಗದ ಮೊದಲ ಸುತ್ತಿನಲ್ಲಿ ಸೋಲನ್ನು ಕಂಡ ಬಳಿಕ ಸಾನಿಯಾ ಮಿರ್ಜಾ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.


ದೇಶ ಕಂಡ ಅತ್ಯದ್ಭುತ ಟೆನ್ನಿಸ್​ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ಒಂದು ಮಗುವಿನ ತಾಯಿ ಕೂಡ ಹೌದು. ಗ್ರ್ಯಾನ್​ ಸ್ಲಾಮ್​ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಸಾನಿಯಾ ಮಿರ್ಜಾರ ಮುಡಿಗೆ ಸೇರಿವೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಗ್ರ್ಯಾನ್​ ಸ್ಲಾಮ್​ ಟೆನ್ನಿಸ್​ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಹಾಗೂ ಉಕ್ರೇನ್​​ನ ನಾಡಿಯಾ ಕಿಚನೋಕ್​ ಜೋಡಿ ಸ್ಲೋವೆನಿಯಾದ ಜಿಡಾನ್ಸೆಕ್​ ಹಾಗೈ ಕಾಜಾ ಜುವಾನ್​ ವಿರುದ್ಧ 4-6,6-7 (5) ನೇರ ಸೆಟ್ ಗಳಿಂದ ಪರಾಭವಗೊಂಡಿದೆ.


ನನ್ನ ದೇಹವು ಕ್ಷೀಣಿಸುತ್ತಿದೆ. ಇಂದು ನನ್ನ ಮೊಣಕಾಲು ನಿಜವಾಗಿಯೂ ನೋಯುತ್ತಿದೆ ಮತ್ತು ನಾವು ಸೋತಿದ್ದೇವೆ ಎಂದು ನಾನು ಹೇಳುತ್ತಿಲ್ಲ ಆದರೆ ನಾನು ವಯಸ್ಸಾದಂತೆ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಕೊನೆಯ ಸೀಸನ್​ ಎಂದು ನಿರ್ಧರಿಸಿದ್ದೇನೆ ಎಂದು ಸಾನಿಯಾ ಹೇಳಿದರು.


2003ರಲ್ಲಿ ವೃತ್ತಿಪರ ಟೆನ್ನಿಸ್​ ಪಾದಾರ್ಪಣೆ ಮಾಡಿದ್ದ ಸಾನಿಯಾ ಮಿರ್ಜಾ ಮಹಿಳೆಯ ಡಬಲ್ಸ್​ ವಿಭಾಗದಲ್ಲಿ ನಂಬರ್​ 1 ಸ್ಥಾನವನ್ನು ಅಲಂಕರಿಸಿದ್ದರು. ಸಿಂಗಲ್ಸ್​ ವಿಭಾ್ದಲ್ಲಿ 2007ರಲ್ಲಿ 27ನೇ ಶ್ರೇಯಾಂಕವನ್ನು ಅಲಂಕರಿಸುವ ಮೂಲಕ ಸಾಧನೆ ಮಾಡಿದ್ದರು. ಈ ಮೂಲಕ ದೇಶದಲ್ಲಿಯೇ ಸಿಂಗಲ್ಸ್​​ ವಿಭಾಗದಲ್ಲಿ ಅತ್ಯಧಿಕ ರ್ಯಾಂಕ್​ ಹೊಂದಿರುವ ಸಾಧನೆಯನ್ನು ಸಾನಿಯಾ ಮಾಡಿದ್ದಾರೆ.


35 ವರ್ಷದ ಸಾನಿಯಾ ಮಿರ್ಜಾ ಮಾರ್ಚ್ 2019 ರಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಟೆನಿಸ್‌ಗೆ ಮರಳಿದ್ದರು . ಬಳಿಕ ಕೊರೊನಾ ವೈರಸ್​ನಿಂದಾಗಿ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ.

Sania Mirza announces retirement plans, says 2022 will be her last season on tour

ಇದನ್ನು ಓದಿ : supporters fighting : ಬಿ.ಕೆ.ಹರಿಪ್ರಸಾದ್‌ vs ರಮಾನಾಥ ರೈ : ಬೆಂಬಲಿಗರ ಗಲಾಟೆಗೆ ಹೈಕಮಾಂಡ್‌ ಗರಂ

ಇದನ್ನೂ ಓದಿ : Karnataka school collage close : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

RELATED ARTICLES

Most Popular