ಬೆಂಗಳೂರು: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು (Border-Gavaskar test series) 2-1ರಿಂದ ಗೆಲ್ಲುವುದರೊಂದಿಗೆ ಹಾಗೂ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಭೇರಿ ಬಾರಿಸುವುದರೊಂದಿಗೆ ಟೀಮ್ ಇಂಡಿಯಾ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ (ICC World test championship final) ತಲುಪಿದೆ. ಶ್ರೀಲಂಕಾ ಹಾಗೂ ಕಿವೀಸ್ ನಡುವಿನ ಟೆಸ್ಟ್ ಸರಣಿಯನ್ನು ಲಂಕಾ ಪಡೆ 2-0 ಅಂತರದಲ್ಲಿ ಗೆದ್ದರೆ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತದ ಕನಸು ನುಚ್ಚುನೂರಾಗುವ (Shami Siraj to get Duke ball) ಸಾಧ್ಯತೆಯಿತ್ತು. ಆದರೆ ಪ್ರಥಮ ಟೆಸ್ಟ್’ನಲ್ಲಿ 2 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿದ್ದ ನ್ಯೂಜಿಲೆಂಡ್ ಭಾರತ ಫೈನಲ್ ತಲುಪಲು ಕಾರಣನಾದ್ರೆ, ಲಂಕಾ ಫೈನಲ್ ಕನಸಿಗೆ ಕೊಳ್ಳಿ ಇಟ್ಟಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನ ಫೈನಲ್’ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಟೆಸ್ಟ್ ಚಾಂಪಿಯನ್’ಷಿಪ್’ನ ಫೈನಲ್ ಪಂದ್ಯ ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್’ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ ಟೀಮ್ ಇಂಡಿಯಾ ಈಗಿನಿಂದಲೇ ಸಿದ್ಧತೆ ಶುರು ಮಾಡಲು ನಿರ್ಧರಿಸಿದೆ. ತಂಡದ ಪ್ರಮುಖ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರಿಗೆ ಇಂಗ್ಲೆಂಡ್’ನಲ್ಲಿ ಟೆಸ್ಟ್ ಆಡುವ ವೇಳೆ ಬಳಸಲಾಗುವ ಡ್ಯೂಕ್ ಚೆಂಡನ್ನು ನೀಡಲು ಬಿಸಿಸಿಐ ನಿರ್ಧರಿಸಿದೆ. ಈ ಇಬ್ಬರೂ ವೇಗಿಗಳು ಐಪಿಎಲ್ ಟೂರ್ನಿಯಲ್ಲಿ ವಿರಾಮದ ವೇಳೆ ಡ್ಯೂಕ್ ಬಾಲ್’ಗಳಲ್ಲಿ ಅಭ್ಯಾಸ ನಡೆಸಲಿದ್ದಾರೆ.
ಇದನ್ನೂ ಓದಿ : Shreyas Iyer injury: ಆಸೀಸ್ ವಿರುದ್ಧದ ಏಕದಿನ ಸರಣಿಯಿಂದ ಔಟ್..? ಐಪಿಎಲ್ ಆರಂಭಕ್ಕೂ ಡೌಟ್; ಶ್ರೇಯಸ್ ಅಯ್ಯರ್ಗೆ ಇದೆಂಥಾ ಬ್ಯಾಡ್ ಲಕ್?
ಐಪಿಎಲ್’ನಲ್ಲಿ ಮೇ 21ರಂದು ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಲೀಗ್ ಹಂತದಲ್ಲೇ ಹೊರ ಬೀಳುವ ತಂಡಗಳಲ್ಲಿರುವ ಆಟಗಾರರು ಭಾರತ ಟೆಸ್ಟ್ ತಂಡದಲ್ಲಿದ್ದರೆ, ಅವರನ್ನು ಮುಂಚಿತವಾಗಿಯೇ ಇಂಗ್ಲೆಂಡ್’ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. 2021-23ನೇ ಸಾಲಿನ ಟೆಸ್ಟ್ ಚಾಂಪಿಯನ್’ಷಿಪ್ ಋತುವಿನಲ್ಲಿ 19 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 11 ಗೆಲುವು 3 ಸೋಲು ಹಾಗೂ 5 ಡ್ರಾ ಫಲಿತಾಂಶಗಳ ಮೂಲಕ 66.67 ಸರಾಸರಿ ಅಂಕಗಳೊಂದಿಗೆ ಒಟ್ಟು 152 ಪಾಯಿಂಟ್ ಗಳಿಸಿ ಅಗ್ರಸ್ಥಾನಿಯಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ 18 ಪಂದ್ಯಗಳಿಂದ 10 ಗೆಲುವು, 5 ಸೋಲು ಹಾಗೂ 3 ಡ್ರಾ ಫಲಿತಾಂಶಗಳೊಂದಿಗೆ 58.80 ಸರಾಸರಿ ಅಂಕಗಳೊಂದಿಗೆ ಒಟ್ಟು 127 ಅಂಕ ಕಲೆ ಹಾಕಿ 2ನೇ ಸ್ಥಾನದೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್’ಗೆ ಲಗ್ಗೆ ಇಟ್ಟಿದೆ.
Shami Siraj to get Duke ball: Shami, Siraj get Duke ball, Khatarnak pacers training for Test Championship finals during IPL