ಸೋಮವಾರ, ಏಪ್ರಿಲ್ 28, 2025
HomeSportsCricketShikhar Dhawan : ವಿಶ್ವಕಪ್ ರೇಸ್‌ನಿಂದ ಶಿಖರ್ ಧವನ್ ಔಟ್, ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾಗೆ...

Shikhar Dhawan : ವಿಶ್ವಕಪ್ ರೇಸ್‌ನಿಂದ ಶಿಖರ್ ಧವನ್ ಔಟ್, ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾಗೆ ಗಬ್ಬರ್ ಕ್ಯಾಪ್ಟನ್?

- Advertisement -

ಬೆಂಗಳೂರು : ಹಿರಿಯ, ಅನುಭವಿ ಎಡಗೈ ಓಪನರ್ ಶಿಖರ್ ಧವನ್ (Shikhar Dhawan) ಅವರ ವಿಶ್ವಕಪ್ ಕನಸು ಬಹುತೇಕ ಭಗ್ನವಾಗುವ ಸಾಧ್ಯತೆಯಿದೆ. ವಿಶ್ವಕಪ್‌ನಲ್ಲಿ ಆಡುವ ಶಿಖರ್ ಧವನ್ ಅವರ ಆಸೆಗೆ ಬಿಸಿಸಿಐ ತಣ್ಣೀರೆರಚಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ವಿಶ್ವಕಪ್ ಸಮಯದಲ್ಲೇ ನಡೆಯುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸುವ ಸಾಧ್ಯತೆಯಿದೆ. ಏಷ್ಯನ್ ಗೇಮ್ಸ್‌ನಲ್ಲಿ ಆಡಲಿರುವ ಭಾರತ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೋಚ್ ಆಗುವ ಸಾಧ್ಯತೆಯಿದೆ.

ಏಷ್ಯನ್ ಗೇಮ್ಸ್ 2023 (Asian Games 2023) ಇದೇ ವರ್ಷದ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಾಂಗ್‌ಜೌನಲ್ಲಿ (Hangzhou, China) ನಡೆಯಲಿದ್ದು, ಭಾರತ ಪುರುಷರ (India men’s cricket team) ಮತ್ತು ಮಹಿಳೆಯರ ಕ್ರಿಕೆಟ್ ತಂಡಗಳು (India Women’s cricket team) ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದೆ. ಏಷ್ಯನ್ ಗೇಮ್ಸ್‌ಗೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳನ್ನ ಕಳುಹಿಸಿಕೊಡಲು ಬಿಸಿಸಿಐ (BCCI) ನಿರ್ಧರಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪಂದ್ಯಗಳು ಟಿ20 ಫಾರ್ಮ್ಯಾಟ್‌ನಲ್ಲಿ ನಡೆಯಲಿವೆ.

ಏಷ್ಯನ್ ಗೇಮ್ಸ್ ನಡೆಯುವ ಹೊತ್ತಲ್ಲೇ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ (ICC World Cup 2023)
ಟೂರ್ನಿ ಕೂಡ ಆರಂಭವಾಗಲಿದೆ. ಹೀಗಾಗಿ ವಿಶ್ವಕಪ್‌ಗೆ ಆಯ್ಕೆಯಾಗದ ಯುವ ಆಟಗಾರರನ್ನೊಳಗೊಂಡ ತಂಡವನ್ನು ಏಷ್ಯನ್ ಗೇಮ್ಸ್‌ಗೆ ಬಿಸಿಸಿಐ ಆಯ್ಕೆ ಮಾಡಲಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರ ಪೈಕಿ ಬಹುತೇಕರು ಆಡಲಿದ್ದು, ಅಲ್ಲಿ ಅವಕಾಶ ಪಡೆಯದವರು ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 23ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯಲಿದೆ.

ಇದನ್ನೂ ಓದಿ : Karun Nair : ರಾಜ್ಯ ತೊರೆಯಲಿದ್ದಾರೆಯೇ ಮತ್ತೊಬ್ಬ ಕನ್ನಡಿಗ? ವಿದರ್ಭ ಪರ ಆಡಲಿದ್ದಾರೆಯೇ ಕರುಣ್ ನಾಯರ್?

ಇದನ್ನೂ ಓದಿ : Shreyanka Patil : ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾಳೆ ಕನ್ನಡದ ಕುವರಿ, ಈ ಸಾಧನೆ ಮಾಡಲಿರುವ ಮೊದಲ ಭಾರತೀಯ ಕ್ರಿಕೆಟರ್!

37 ವರ್ಷಗ ಅನುಭವಿ ಓಪನರ್ ಶಿಖರ್ ಧವನ್ ಐಸಿಸಿ ಟೂರ್ನಿಗಳಲ್ಲೇ ಅಮೋಘ ದಾಖಲೆ ಹೊಂದಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಅವರ ಸ್ಥಾನವನ್ನು ಶುಭಮನ್ ಗಿಲ್ ಆಕ್ರಮಿಸಿಕೊಂಡಿರುವುದರಿಂದ ವಿಶ್ವಕಪ್ ತಂಡದಲ್ಲಿ ಗಬ್ಬರ್ ಖ್ಯಾತಿಯ ಶಿಖರ್ ಧವನ್‌ಗೆ ಸ್ಥಾನ ಸಾಗುವ ಸಾಧ್ಯತೆಗಳಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲೂ ಶಿಖರ್ ಧವನ್ ಅವರಿಗೆ ಸ್ಥಾನ ನೀಡಲಾಗಿಲ್ಲ.

Shikhar Dhawan : Shikhar Dhawan out of World Cup race, Gabbar captain for Team India in Asian Games?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular