ಸೋಮವಾರ, ಏಪ್ರಿಲ್ 28, 2025
HomeSportsCricketShreyanka Patil : ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾಳೆ ಕನ್ನಡದ ಕುವರಿ, ಈ ಸಾಧನೆ ಮಾಡಲಿರುವ...

Shreyanka Patil : ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾಳೆ ಕನ್ನಡದ ಕುವರಿ, ಈ ಸಾಧನೆ ಮಾಡಲಿರುವ ಮೊದಲ ಭಾರತೀಯ ಕ್ರಿಕೆಟರ್!

- Advertisement -

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಸ್ಟಾರ್ ಆಟಗಾರ್ತಿ, ಕರ್ನಾಟಕದ ಯುವ ಮಹಿಳಾ ಕ್ರಿಕೆಟ್ ತಾರೆ ಶ್ರೇಯಾಂಕಾ ಪಾಟೀಲ್ (Shreyanka Patil ) ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್ (Caribbean Premier League – CPL) ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ. ಸಿಪಿಎಲ್‌ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟರ್ ಎಂಬ ಅಪರೂಪದ ದಾಖಲೆಗೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಪಾತ್ರರಾಗಲಿದ್ದಾರೆ.

20 ವರ್ಷದ ಆಫ್‌ಸ್ಪಿನ್ ಆಲ್ರೌಂಡರ್ ಆಗಿರುವ ಶ್ರೇಯಾಂಕಾ ಪಾಟೀಲ್ ಗಯಾನಾ ಅಮೆಜಾನ್ ವಾರಿಯಾರ್ಸ್ ತಂಡದ ಪರ ಆಡಲಿದ್ದಾರೆ. 2023ನೇ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮಿಂಚುವ ಮೂಲಕ ಶ್ರೇಯಾಂಕಾ ಪಾಟೀಲ್ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು.

WPL ಪ್ರದರ್ಶನದ ಆಧಾರದಲ್ಲಿ ಎಸಿಸಿ ಮಹಿಳಾ ಎಮರ್ಜಿಂಗ್ ಟಿ20 ಟೂರ್ನಿಯಲ್ಲಿ ಆಡಲಿರುವ ಭಾರತ ಎ ಮಹಿಳಾ ತಂಡದಲ್ಲಿ ಸ್ಥಾನ ಪಡೆದಿದ್ದ ಶ್ರೇಯಾಂಕಾ ಪಾಟೀಲ್, ಆಡಿದ ಎರಡು ಪಂದ್ಯಗಳಿಂದ 9 ವಿಕೆಟ್ ಪಡೆದು ಮಿಂಚಿದ್ದರು. ಹಾಂಕಾಂಗ್ ಮಹಿಳಾ ತಂಡದ ವಿರುದ್ಧ ಕೇವಲ 2 ರನ್ನಿಗೆ 5 ವಿಕೆಟ್ ಪಡೆದಿದ್ದ ಶ್ರೇಯಾಂಕಾ, ಬಾಂಗ್ಲಾದೇಶ ಎ ಮಹಿಳಾ ತಂಡದ ವಿರುದ್ಧ 13 ರನ್ನಿಗೆ 4 ವಿಕೆಟ್ ಕಬಳಿಸಿದ್ದರು. ಈ ಸಾಧನೆಗೆ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದಿದ್ದರು. ಇದೀಗ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನೇ ಆಡದೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಯಾನ ಅಮಜಾನ್ ವಾರಿಯರ್ಸ್ (Guyana Amazon Warriors) ತಂಡದ ಪರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಭಾರತ ಪುರುಷರ ತಂಡದ ಆಟಗಾರರಿಗೆ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡುವ ಅವಕಾಶವಿಲ್ಲ. ಆದರೆ ಮಹಿಳಾ ತಂಡದ ಆಟಗಾರ್ತಿಯರಿಗೆ ವಿದೇಶಿ ಟಿ20 ಲೀಗ್’ಗಳಲ್ಲಿ ಆಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಟೀಮ್ ಇಂಡಿಯಾ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮತಿ ಮಂಧನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮೈಮಾ ರಾಡ್ರಿಗ್ಸ್ ಈಗಾಗಲೇ ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ ಮತ್ತು ಇಂಗ್ಲೆಂಡ್‌ನ ಹಂಡ್ರೆಡ್ ಟಿ20 ಲೀಗ್ ಟೂರ್ನಿಗಳಲ್ಲಿ ಆಡಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಯಾನ ಅಮೆಜಾನ್ ತಂಡವನ್ನು ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ್ತಿ ಶೆಫಾನೀ ಟೇಲರ್ ಮುನ್ನಡೆಸಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ನ್ಯೂಜಿಲೆಂಡ್‌ನ ಸ್ಟಾರ್ ಆಲ್ರೌಂಡರ್ ಸೋಫಿ ಡಿವೈನ್ ಕೂಡ ಶ್ರೇಯಾಂಕಾ ಪಾಟೀಲ್ ಜೊತೆ ಗಯಾನ ಅಮೆಜಾನ್ ತಂಡದ ಪರ ಆಡಲಿದ್ದಾರೆ.

ಇದನ್ನೂ ಓದಿ : Ajit Agarkar : ಬಿಸಿಸಿಐ ಆಯ್ಕೆ ಸಮಿತಿಗೆ ಅಜಿತ್ ಅಗರ್ಕರ್ ಚೇರ್ಮನ್ ? ರೇಸ್’ನಲ್ಲಿದ್ದಾರೆ ವೆಂಗ್ಸರ್ಕರ್, ಶಾಸ್ತ್ರಿ

ಇದನ್ನೂ ಓದಿ : Dream11 Title Sponsorship : ಟೀಮ್ ಇಂಡಿಯಾಗೆ ಡ್ರೀಮ್11 ಟೈಟಲ್ ಸ್ಪಾನ್ಸರ್, ಡೀಲ್ ಕುದುರಿದ್ದು ಎಷ್ಟು ಕೋಟಿಗೆ ಗೊತ್ತಾ?

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿರುವ ಗಯಾನ ಅಮೆಜಾನ್ ತಂಡ ಹೀಗಿದೆ:
ಶೆಫಾನೀ ಟೇಲರ್ (ನಾಯಕಿ), ಶ್ರೇಯಾಂಕಾ ಪಾಟೀಲ್, ಸೋಫಿ ಡಿವೈನ್, ಸುಜೀ ಬೇಟ್ಸ್, ಶಬ್ನಿಮ್ ಇಸ್ಮಾಯಿಲ್, ಕರೀಷ್ಮಾ ರಾಮ್ಹರಕ್, ನತಾಶಾ ಮೆಕ್‌ಲೀನ್, ಶೆರ್ಮೈನ್ ಕ್ಯಾಂಪ್‌ಬೆಲ್, ಶಕಿಬಾ ಗಜ್ನಬಿ, ಶೆಕೀರಾ ಸಲ್ಮಾನ್, ಶೆನೆಟಾ ಗ್ರಿಮಂಡ್ಸ್, ಕೈಸಿಯಾ ಶಲ್ಟ್, ಶೆರಿ-ಆನ್ ಫ್ರೇಸರ್, ಅಶ್ಮಿಮಿ ಮುನಿಸರ್, ಜೆನಬಾ ಜೋಸೆಫ್.

Shreyanka Patil : Kannada Kuvari is going to play in the Caribbean Premier League, the first Indian cricketer to do this!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular