ಲಂಡನ್ : ಟೀ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೆಸರಲ್ಲಿದ್ದ ದಾಖಲೆ ಯೊಂದನ್ನು ನ್ಯೂಜಿಲ್ಯಾಂಡಿನ ಎಡಗೈ ಆರಂಭ ಕಾರ ಡೇವನ್ ಕಾನ್ವೆ ಮುರಿಯುವ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಇತಿಹಾಸ ಪ್ರಸಿದ್ಧ ಇಂಗ್ಲೆಂಡ್ ನ ಲಾರ್ಡ್ಸ್ ಅಂಗಳದಲ್ಲಿ ಪದಾರ್ಪಣೆಗೈದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾಗಿ ದ್ದಾರೆ. ಈ ಮೂಲಕ ಸ್ಮರಣೀಯ ಬ್ಯಾಟಿಂಗ್ ಸಾಧನೆ ಗೈದಿದ್ದಾರೆ. ಭರ್ಜರಿ ಬ್ಯಾಟಿಂಗ್ ನಡೆಸಿದ ಕಾನ್ವೆ 200 ರನ್ (347 ಎಸೆತ, 22 ಬೌಂಡರಿ, 1 ಸಿಕ್ಸರ್). ದ್ವಿಶತಕ ಪೂರ್ತಿಗೊಳಿಸಿದ ಕೂಡಲೇ ರನೌಟ್ ಆಗಿ ನಿರ್ಗಮಿಸಿದ್ದಾರೆ.
1996ರಲ್ಲಿ ಸೌರವ್ ಗಂಗೂಲಿ ಅವರು ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ಲಾರ್ಡ್ಸ್‌ನಲ್ಲಿ 131 ರನ್ ಹೊಡೆದಿದ್ದರು. ಇಬ್ಬರ ಜನ್ಮ ದಿನಾಂಕ ಕೂಡ ಜುಲೈ 8 ಆಗಿರುವುದು ಇನ್ನೊಂದು ವಿಶೇಷ. ಅಷ್ಟೇ ಅಲ್ಲಾ ಕಾನ್ವೆ ಹಾಗೂ ಗಂಗೂಲಿ ಇಬ್ಬರೂ ಕೂಡ ಎಡಗೈ ಆರಂಭಿಕ ಆಟಗಾರ ರಾಗಿದ್ದಾರೆ. ಡೇವನ್ ಕಾನ್ವೆ ಲಾರ್ಡ್ಸ್‌ನಲ್ಲಿ ಟೆಸ್ಟ್ ಪದಾರ್ಪಣೆಗೈದು ಶತಕ ಬಾರಿಸುವ ಮೂಲಕ 6ನೇ ಹಾಗೂ ನ್ಯೂಜಿಲ್ಯಾಂಡಿನ ಮೊದಲ ಕ್ರಿಕೆಟಿಗ. ಚೊಚ್ಚಲ ಟೆಸ್ಟ್‌ನಲ್ಲೇ ದ್ವಿಶತಕ ಹೊಡೆದ ವಿಶ್ವದ 6ನೇ ಹಾಗೂ ನ್ಯೂಜಿಲ್ಯಾಂಡಿನ 2ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.