ಲಂಡನ್ : ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಅವರಿಗೆ ಆರ್-ಟಿ ಪಿಸಿಆರ್ ಪರೀಕ್ಷೆಯಲ್ಲೂ ಕೋವಿಡ್ ಖಚಿತವಾಗಿದ್ದು ಕನಿಷ್ಠ 10 ದಿನ ಪ್ರತ್ಯೇಕ ವಾಸದಲ್ಲಿ ಇರಬೇಕಾಗಿದೆ. ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್‌ಗೆ ಅವರು ಭಾರತ ತಂಡದೊಂದಿಗೆ ಇರುವುದಿಲ್ಲ.
ಭಾನುವಾರ ನಡೆಸಿದ ರ‍್ಯಾಪಿಡ್ ಆಯಂಟಿಜೆನ್ ಪರೀಕ್ಷೆಯಲ್ಲಿ 59 ವರ್ಷದ ರವಿಶಾಸ್ತ್ರಿ ಅವರಿಗೆ ಕೋವಿಡ್ ಇರುವುದು ಖಚಿತವಾಗಿತ್ತು. ಭಾನುವಾರ ಮತ್ತು ಸೋಮವಾರ ಅವರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಸೆಪ್ಟೆಂಬರ್ 10 ರಂದು ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಆರಂಭ ವಾಗಲಿದೆ.
ರವಿಶಾಸ್ತ್ರಿ ಅವರ ಸಂಪರ್ಕದಲ್ಲಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೊಥೆರಪಿಸ್ಟ್ ನಿತಿನ್ ಪಟೇಲ್ ಕೂಡ ಪ್ರತ್ಯೇಕ ವಾಸದಲ್ಲಿ ಇರುವವರು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
(Big shock for Team India: No coach Ravi Shastri for Manchester Test)