ಸೋಮವಾರ, ಏಪ್ರಿಲ್ 28, 2025
HomeSportsಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ರದ್ದು: ಕ್ರಿಕೆಟ್‌ ಪ್ರಿಯರಿಗೆ ಭಾರೀ ನಿರಾಸೆ

ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ರದ್ದು: ಕ್ರಿಕೆಟ್‌ ಪ್ರಿಯರಿಗೆ ಭಾರೀ ನಿರಾಸೆ

- Advertisement -

ಲಂಡನ್‌ : ಲಕ್ಷಾಂತರ ಕ್ರಿಕೆಟ್‌ ಪ್ರಿಯರಿಗೆ ಕೊರೊನಾ ನಿರಾಸೆ ಮಾಡಿದೆ. ಟೀಂ ಇಂಡಿಯಾ ಕೋಚ್‌ಗಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯವನ್ನು ಬಿಸಿಸಿಐ ರದ್ದುಗೊಳಿಸಿದೆ.

ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಮುನ್ನಡೆ ಕಾಯ್ದುಕೊಂಡಿದ್ದ ಟೀಂ ಇಂಡಿಯಾಕ್ಕೆ ನಿರಾಸೆಯಾಗಿದೆ. ಇಂದಿನಿಂದ ಐದನೇ ಟೆಸ್ಟ್‌ ಪಂದ್ಯ ಆರಂಭಗೊಳ್ಳಬೇಕಾಗಿತ್ತು. ಆದರೆ ಟೀಂ ಇಂಡಿಯಾದ ಕೋಚ್‌ ರವಿಶಾಸ್ತ್ರಿ, ಬೌಲಿಂಗ್‌ ಕೋಚ್‌ ರಘು, ಸಹಾಯಕ ಕೋಚ್‌ ಶ್ರೀಧರ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ- ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯ ರದ್ದು ಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಆಟಗಾರರ ಸುರಕ್ಷತೆಯಿಂದ ಬಿಸಿಸಿಐ ಇಂದು ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಟೀ ಇಂಡಿಯಾ ಮೆಂಟರ್ ಆಯ್ಕೆ ಬೆನ್ನಲ್ಲೇ ಮಹೇಂದ್ರ ಸಿಂಗ್‌ ಧೋನಿ ವಿರುದ್ಧ ದಾಖಲಾಯ್ತು ದೂರು !

ಟೀಂ ಇಂಡಿಯಾ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಬಿಸಿಸಿಐ ಆಟಗಾರರ ಸುರಕ್ಷತಾ ದೃಷ್ಟಿಯಿಂದ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ನಡೆಯಬೇಕಿದ್ದ ಕೊನೆಯ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲು ನಿರ್ಧಾರ ಕೈಗೊಂಡಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ 2-1 ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿ: Shikhar Dhavan : ಶಿಖರ್‌ ಧವನ್‌ ಗೆ ಇನ್ನೂ ಮುಗಿದಿಲ್ಲ ಟೀಂ ಇಂಡಿಯಾದಲ್ಲಿ ಅವಕಾಶ

(India-England 5th Test cancellation: Cricket lovers' biggest disappointment)
RELATED ARTICLES

Most Popular