ಭಾನುವಾರ, ಏಪ್ರಿಲ್ 27, 2025
HomeSportsVirat Kohli : ವಿರಾಟ್‌ ಕೊಯ್ಲಿ ಬಗ್ಗೆ ಜೈಶಾಗೆ ದೂರು ಕೊಟ್ಟ ರಹಾನೆ, ಪೂಜಾರಾ !

Virat Kohli : ವಿರಾಟ್‌ ಕೊಯ್ಲಿ ಬಗ್ಗೆ ಜೈಶಾಗೆ ದೂರು ಕೊಟ್ಟ ರಹಾನೆ, ಪೂಜಾರಾ !

- Advertisement -

ಮುಂಬೈ : ಟೀಂ ಇಂಡಿಯಾ ನಾಯಕ ವಿರಾಟ್‌ ಕೊಯ್ಲಿ ರಾಜೀನಾಮೆ ಮಾತು ಕ್ರಿಕೆಟ್‌ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಸಾಕಷ್ಟು ಊಹಾಪೋಹದ ಮಾತುಗಳು ಕೇಳಿಬರುತ್ತಿದೆ. ಅದ್ರಲ್ಲೂ ಟೀಂ ಇಂಡಿಯಾದ ಆಟಗಾರರಾ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಯ್ಲಿ ವಿರುದ್ದವೇ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರಿಗೆ ದೂರು ನೀಡಿದ್ದಾರಂತೆ.

ವಿರಾಟ್‌ ಕೊಯ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಒಂದೊಂದಾಗಿಯೇ ಬಯಲಾಗುತ್ತಿದೆ. ಇದೀಗ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ದ ಟೀಂ ಇಂಡಿಯಾ ಸೋಲನ್ನು ಕಂಡಿತ್ತು. ಈ ಸೋಲು ಅಸಂಖ್ಯಾತ ಭಾರತೀಯರಿಗೆ ಬೇಸರವನ್ನುಂಟು ಮಾಡಿತ್ತು. ವಿಶ್ವ ಕ್ರಿಕೆಟ್‌ ಟೀಂ ಇಂಡಿಯಾ ಟೆಸ್ಟ್‌ ಚಾಂಪಿಯನ್‌ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿತ್ತು. ಆದ್ರೆ ಟೀಂ ಇಂಡಿಯಾ ಆಟಗಾರರ ಕೆಟ್ಟ ಆಟಕ್ಕೆ ಭಾರತೀಯರು ನಿರಾಸೆ ಅನುಭವಿಸಿದ್ದರು.

ಇಂಗ್ಲೆಂಡ್‌ ಅಂಗಳದಲ್ಲಿ ನಡೆದ ಗುಲಾಬಿ ಚೆಂಡಿನ ಪಂದ್ಯವೀಗ ಬಾರೀ ಚರ್ಚೆಗೆ ಕಾರಣವಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ನಲ್ಲಿ ಭಾರತದ ಸೋಲಿಗೆ ಇದೀಗ ನಾಯಕ ವಿರಾಟ್‌ ಕೊಯ್ಲಿ ವರ್ತನೆಯೇ ಕಾರಣವಾಗಿತ್ತಾ ಅನ್ನೋ ಅನುಮಾನ ಮೂಡುತ್ತಿದೆ. ಯಾಕೆಂದ್ರೆ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರಾದ ಅಜಿಂಕ್ಯಾ ರೆಹಾನೆ ಹಾಗೂ ಚೇತೇಶ್ವರ ಪೂಜಾರ ಅವರು ವಿರಾಟ್‌ ಕೊಯ್ಲಿಯಿಂದಾಗಿ ತಮಗೆ ಆಗಿರುವ ಕಠಿಣ ವರ್ತೆನೆಯ ಬಗ್ಗೆಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಗೌರವ ಕಾರ್ಯದರ್ಶಿ ಜಯ್ ಶಾ ಅವರಿಗೆ ದೂರು ನೀಡಿದ್ದಾರೆ. ಕೊಯ್ಲಿ ವರ್ತನೆಯೇ ತಂಡದ ಸೋಲಿಗೆ ಶರಣಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಯ್ಲಿ ಅವರು ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆಯನ್ನು ಡ್ರೆಸ್ಸಿಂಗ್‌ ರೂಮ್‌ ಒಳಗೆ ಎಳೆದಿದ್ದಾರೆ. ಈ ಘಟನೆ ದೊಡ್ಡ ಸಮಸ್ಯೆಗೆ ಕಾರಣವಾಗಿತ್ತು. ಇಬ್ಬರು ಆಟಗಾರರು ಅಂದು ಜೈಶಾ ಅವರನ್ನು ಕರೆಯಿಸಿಕೊಂಡಿದ್ದರು. ನಂತರ ಬಿಸಿಸಿಐ ಮಧ್ಯಪ್ರವೇಶ ಮಾಡಿದೆ. ಮಾತ್ರವಲ್ಲ ಈ ಕುರಿತು ಹಲವು ಆಟಗಾರರ ಬಳಿಯಲ್ಲಿಯೂ ಬಿಸಿಸಿಐ ಪ್ರತಿಕ್ರಿಯೆಯನ್ನು ಕೇಳಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವಕಪ್‌ ಬೆನ್ನಲ್ಲೇ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್‌ ಕೊಯ್ಲಿ ಈಗಾಗಲೇ ಘೋಷಣೆಯನ್ನು ಮಾಡಿದ್ದಾರೆ. ಆದರೆ ಯುಎಇನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯಾವಳಿಯ ನಂತರದ ಕೊಯ್ಲಿ ಏಕದಿನ ನಾಯಕತ್ವದ ಭವಿಷ್ಯದ ಬಗ್ಗೆಯೂ ಸ್ಪಷ್ಟನೆಯನ್ನು ನೀಡಲಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿ : ರಾತ್ರೋರಾತ್ರಿ ಜಾಕ್​ಪಾಟ್ : ಕೋಟ್ಯಾಧಿಪತಿಯಾದ ಕ್ಷೌರಿಕ !

ಇದನ್ನೂ ಓದಿ : ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ಶ್ರೀಶಾಂತ್‌

(Ajinkya Rahane, Cheteshwar Pujara Complained to BCCI Secretary Jay Shah About Virat Kohli’s Attitude )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular