ಭಾನುವಾರ, ಏಪ್ರಿಲ್ 27, 2025
HomeSportsHarshal Patel : ಹೊಸ ದಾಖಲೆ ನಿರ್ಮಿಸಿದ ಹರ್ಷಲ್‌ ಪಟೇಲ್‌ : ಆರ್‌ಸಿಬಿ ಪರ ಹೆಚ್ಚು...

Harshal Patel : ಹೊಸ ದಾಖಲೆ ನಿರ್ಮಿಸಿದ ಹರ್ಷಲ್‌ ಪಟೇಲ್‌ : ಆರ್‌ಸಿಬಿ ಪರ ಹೆಚ್ಚು ವಿಕೆಟ್‌ ಪಡೆದ ಸಾಧನೆ

- Advertisement -

ದುಬೈ: ಕ್ರಿಕೇಟ್‌ ಆಟಗಾರರು ಒಬ್ಬರ ಹಿಂದೆ ಒಬ್ಬರು ಒಂದೊಂದು ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಈಗ ಇಂಡಿಯನ್ ಪ್ರೀಮಿಯರ್ ಲೀಗ್ ( IPL) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬಲಗೈ ವೇಗದ ಬೌಲರ್ ಹರ್ಷಲ್ ಪಟೇಲ್ ಪ್ರಸಕ್ತ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಐಪಿಎಲ್‌ ಟೂರ್ನಿಯ 43ನೇ ಪಂದ್ಯದಲ್ಲಿ ಹರ್ಷಲ್‌, ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ ಪಡೆದು ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 149 ರನ್‌ ಗಳಿಸಿತ್ತು. ಈ ಸವಾಲಿನ ಮೊತ್ತ ಬೆನ್ನತ್ತಿದ ಕೊಹ್ಲಿ ಪಡೆ 17.1 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತ್ತು.

ಇದನ್ನೂ ಓದಿ: Virat Kohli : ವಿರಾಟ್‌ ಕೊಯ್ಲಿ ಬಗ್ಗೆ ಜೈಶಾಗೆ ದೂರು ಕೊಟ್ಟ ರಹಾನೆ, ಪೂಜಾರಾ !

ಈ ಮೂಲಕ ಆರ್‌ಸಿಬಿ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಇತ್ತ ಹರ್ಷಲ್ ಪಟೇಲ್, ಈ ವರ್ಷ ಆರ್‌ಸಿಬಿ ಪರ ಆಡಿರುವ 11 ಪಂದ್ಯಗಳಲ್ಲಿ 26 ವಿಕೆಟ್‌ ಕಬಳಿಸಿದ್ದು, ‘ಪರ್ಪಲ್ ಕ್ಯಾಪ್’ ತಮ್ಮ ಬಳಿಯಲ್ಲಿಯೇ ಭದ್ರವಾಗಿರಿಸಿದ್ದಾರೆ. ಈ ಮೂಲಕ ಹರ್ಷಲ್‌, ಆರ್‌ಸಿಬಿ ತಂಡದ ಸಹ ಆಟಗಾರ ಯಜುವೇಂದ್ರ ಚಾಹಲ್‌, ಆರ್. ವಿನಯ್ ಕುಮಾರ್ ಅವರ ದಾಖಲೆಯನ್ನು ಮುರಿದಿದ್ದಾರೆ.

2015ರ ಐಪಿಎಲ್‌ ಟೂರ್ನಿಯಲ್ಲಿ ಚಾಹಲ್‌ 23 ವಿಕೆಟ್‌ ಪಡೆದಿದ್ದರು. ಆ ದಾಖಲೆಯನ್ನು ಚಾಹಲ್‌ ಹಾಗೂ ವಿನಯ್‌ ಜಂಟಿಯಾಗಿ ಹಂಚಿಕೊಂಡಿದ್ದರು. 30 ವರ್ಷದ ಹರ್ಷಲ್‌ ಪಟೇಲ್‌, ಇತ್ತೀಚಿಗೆ ಮುಂಬೈ ಇಂಡಿಯನ್ಸ್‌ ವಿರುದ್ಧ ‘ಹ್ಯಾಟ್ರಿಕ್‌’ ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. 2013ರ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಲ್‌ರೌಂಡರ್‌ ಡ್ವೇನ್ ಬ್ರಾವೊ 32 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: Dream 11 : ರಾತ್ರೋರಾತ್ರಿ ಜಾಕ್​ಪಾಟ್ : ಕೋಟ್ಯಾಧಿಪತಿಯಾದ ಕ್ಷೌರಿಕ !

(New record holder Harshal Patel: Most wicket-taker for RCB)

RELATED ARTICLES

Most Popular