ಬಿಹಾರ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಪಂದ್ಯಗಳು ಕುತೂಹಲ ಮೂಡಿಸುತ್ತಿದೆ. ಆದ್ರೆ ಇದೇ ಐಪಿಎಲ್ ಕ್ಷೌರಿಕನೋರ್ವನನ್ನು ಕೋಟ್ಯಾಧಿಪತಿಯನ್ನಾಗಿಸಿದೆ. ಡ್ರೀಮ್ 11ನಲ್ಲಿ ಕಟ್ಟಿದ್ದ ಕನಸಿನ ತಂಡದಿಂದಾಗಿ ಒಂದು ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿರುವ ಈತನ ಹೆಸರು ಅಶೋಕ್ ಕುಮಾರ್. ಬಿಹಾರದ ಮಧುಬಾನಿ ಅಂಧರ್ಥಂಡಿ ಬ್ಲಾಕ್ನ ನನೌರ್ ಚೌಕ್ನಲ್ಲಿ ಕ್ಷೌರದ ಅಂಗಡಿಯನ್ನು ನಡೆಸುತ್ತಿದ್ದಾರೆ. ಆದರೆ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ಅದ್ರಲ್ಲೂ ಐಪಿಎಲ್
ಇದನ್ನೂ ಓದಿ: T20 World CUP SONG : ಟಿ20 ವಿಶ್ವಕಪ್ ಅಧಿಕೃತ ಗೀತೆ ರಿಲೀಸ್
ಪಂದ್ಯಾವಳಿಯನ್ನು ಮಿಸ್ ಮಾಡದೇ ನೋಡ್ತಾ ಇದ್ರು. ಕಳೆದ ಕೆಲವು ವರ್ಷಗಳಿಂದ ಡ್ರೀಮ್ 11 (dream 11) ಫ್ಯಾಂಟಸಿ ಕ್ರಿಕೆಟ್‌ನಲ್ಲಿ ತನ್ನ ಕನಸಿನ ತಂಡವನ್ನು ಕಟ್ಟುತ್ತಿದ್ದರು. ಆದ್ರೆ ಮೊನ್ನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಅಶೋಕ್ ಕುಮಾರ್ ಗೆ ಜಾಕ್ ಪಾಟ್ ಹೊಡೆದಿದೆ. ಅಶೋಕ್ ಕುಮಾರ್ ಅವರು ಕಟ್ಟಿದ್ದ ಡ್ರೀಮ್ ಟೀಂ 1 ಕೋಟಿ ರೂಪಾಯಿ ಬಹುಮಾನವನ್ನು ತಂದುಕೊಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಮುಗಿದ ವೇಳೆಯಲ್ಲಿ ಅಶೋಕ್ ಕುಮಾರ್ ಅವರ ತಂಡ ಮೊದಲ ಸ್ಥಾನದಲ್ಲಿತ್ತು. ಹೀಗಾಗಿ ಮೊದಲ ಬಹುಮಾನವಾಗಿ ನಾನು 1ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದೆ. ಕೆಲವೇ ಹೊತ್ತಲ್ಲಿ ನನಗೆ ಈ ಬಗ್ಗೆ ಅಧಿಕೃತ ಕರೆ ಕೂಡ ಬಂತು.
ಮುಂದಿನ 2 ದಿನಗಳಲ್ಲಿ 70 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಬರಲಿದೆ ಅಂತಾ ತಿಳಿಸಿದ್ದಾರೆ. ತೆರಿಗೆ ಕಡಿತದ ಬಳಿಕ ಉಳಿದ ಮೊತ್ತ ನಿಮ್ಮ ಖಾತೆಗೆ ಸಂದಾಯವಾಗಲಿದೆ ಎಂದು ಹೇಳಿದರು. ನಾನೆಷ್ಟು ಖುಷಿಯಾಗಿದ್ದೆ ಅಂದರೆ ನನಗೆ ರಾತ್ರಿ ನಿದ್ದೆಯೇ ಬರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: IPL 2021 SRH vs DC: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸನ್ ರೈಸರ್ಸ್ ಹೈದರಾಬಾದ್ ಗೆ ಸೋಲು
ಕ್ಷೌರಿಕ ವೃತ್ತಿಯ ಜೊತೆಗೆ ಅಶೋಕ್ ಕುಮಾರ್ ಕ್ರಿಕೆಟ್ ಆಸಕ್ತಿ ಕೊನೆಗೂ ಕೋಟ್ಯಾಧಿಪತಿಯನ್ನಾಗಿಸಿದೆ. ಹಲವು ವರ್ಷಗಳಿಂದ ಡ್ರೀಮ್ 11 ನಲ್ಲಿ ಆಟವಾಡ್ತಿದ್ದು, ಕೊನೆಗೂ ಜಾಕ್ ಪಾಟ್ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
(Overnight Jack Pot: The Millionaire Barber!)