ಗುರುವಾರ, ಮೇ 1, 2025
HomeSportsದುಬೈನ ಗೋಲ್ಡನ್ ವೀಸಾ ಪಡೆದ ಭಾರತದ ಗಾಲ್ಫ್ ಆಟಗಾರ...! ಇವರು ಯಾರು ಗೊತ್ತಾ?

ದುಬೈನ ಗೋಲ್ಡನ್ ವೀಸಾ ಪಡೆದ ಭಾರತದ ಗಾಲ್ಫ್ ಆಟಗಾರ…! ಇವರು ಯಾರು ಗೊತ್ತಾ?

- Advertisement -

ಭಾರತದ ಜೀವ್ ಮಿಲ್ಖಾ ಸಿಂಗ್ ಅವರು 10 ವರ್ಷಗಳ ಅವಧಿಗೆ ದುಬೈ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರತಿಷ್ಠಿತ ದುಬೈ ಗೋಲ್ಡನ್ ವೀಸಾ ಪಡೆದ ವಿಶ್ವದ ಮೊದಲ ಗಾಲ್ಫ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕ್ರೀಡೆಯಲ್ಲಿ ತೋರಿದ ಅತ್ಯುತ್ತಮ ಸಾಧನೆಗಳನ್ನು ಪರಿಗಣಿಸಿ 49 ವರ್ಷದ ಮಿಲ್ಖಾ ಸಿಂಗ್ ಅವರಿಗೆ ಈ ಗೌರವ ನೀಡಲಾಗಿದೆ. ಈ ಮೂಲಕ ಮಿಲ್ಖಾ ಅವರು ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ, ಪಾಲ್ ಪೊಗ್ಬಾ, ರಾಬರ್ಟೊ ಕಾರ್ಲೋಸ್, ಲೂಯಿಸ್ ಫಿಗೊ ಮತ್ತು ರೊಮೆಲ್ ಲುಕಾಕು ಅವರಂತಹ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಗೆ ಸೇರಿದ್ದಾರೆ. ಇತ್ತೀಚೆಗೆ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡ ದುಬೈ ಗೋಲ್ಡನ್ ಪಾಸ್ ಪಡೆದಿದ್ದರು.

ಇದನ್ನೂ ಓದಿ: ಭಾರತದಲ್ಲಿ ಕ್ರೂಸ್ ಲೈನರ್ ಸೇವೆ ಆರಂಭಿಸಲಿದೆ IRCTC

ಸಿಂಗ್ ದುಬೈಯೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದರು. ಇಲ್ಲಿ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು. ಜೊತೆಗೆ ಇಲ್ಲಿ ಹಲವು ಸ್ನೇಹಿತರನ್ನು ಸಂಪಾದಿಸಿದ್ದರು. 2001ರ ದುಬೈ ಡೆಸರ್ಟ್ ಕ್ಲಾಸಿಕ್ ಟೂರ್ನಿಯಲ್ಲಿ 4 ಸುತ್ತುಗಳನ್ನು ಪೂರ್ಣಗೊಳಿಸಿದ ಜೀವ್ ಮಿಲ್ಖಾ ಸಿಂಗ್ ವಿಶ್ವದಾಖಲೆ ಸ್ಥಾಪಿಸಿದ್ದರು. ಯುರೋಪಿಯನ್ ಹಾಗೂ ಜಪಾನ್ ಟೂರ್ನಿಗಳಲ್ಲಿ ತಲಾ 4 ಬಾರಿ ಮತ್ತು ಏಷ್ಯನ್ ಟೂರ್ನಿಗಳಲ್ಲಿ ಆರು ಬಾರಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಇದನ್ನೂ ಓದಿ: Shikhar Dhavan : ಶಿಖರ್‌ ಧವನ್‌ ಗೆ ಇನ್ನೂ ಮುಗಿದಿಲ್ಲ ಟೀಂ ಇಂಡಿಯಾದಲ್ಲಿ ಅವಕಾಶ

(Indian golf player got Golden visa of Dubai)

RELATED ARTICLES

Most Popular