ದುಬೈ : ಟಿ20 ವಿಶ್ವಕಪ್‌ನಲ್ಲಿ (T20 World Cup) ಪಾಕಿಸ್ತಾನ ತಂಡವನ್ನು ಭರ್ಜರಿ 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಾರ್ಕ್ ಸ್ಟೋಯಿನಿಸ್ ಹಾಗೂ ಮ್ಯೂಥ್ಯೂ ಹೆಡ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಗೆಲವು ಕಂಡಿದ್ದು, ಪ್ರಸಕ್ತ ಸಾಲಿನಲ್ಲಿ ಎಲ್ಲಾ ಪಂದ್ಯವನ್ನು ಗೆದ್ದು ಫೈನಲ್ ಕನಸು ಕಾಣುತ್ತಿದ್ದ ಪಾಕಿಸ್ತಾನಕ್ಕೆ ನಿರಾಸೆಯಾಗಿದೆ.

ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಮ್ ಭರ್ಜರಿ ಜೊತೆಯಾಟ ನೀಡಿದ್ರು. ಮೊದಲ ವಿಕೆಟ್‌ಗೆ ಈ ಜೋಡಿ 21ರನ್ ಗಳಿಸಿತ್ತು. 34 ಎಸೆತಗಳಲ್ಲಿ ೩೯ರನ್‌ಗಳಿಸಿದ್ದ ಬಾಬರ್ ಅಜಂ ಆಡಂ ಜಂಪಾಗೆ ವಿಕೆಟ್ ಒಪ್ಪಿಸಿದ್ರು. ನಂತರ ರಿಜ್ವಾನ್ ಜೊತೆಯಾದ ಫಖರ್ ಜಮಾನ್ ಸ್ಪೋಟಕ ಆಟಕ್ಕೆ ಮನ ಮಾಡಿದ್ರು. ಮೊಹಮ್ಮದ್ ರಿಜ್ವಾನ್ 52 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ ೬೭ರನ್ ಸಿಡಿಸಿದ್ರೆ, ಜಮಾನ್ 32 ಎಸೆತಗಳಲ್ಲಿ 4 ಸಿಕ್ಸರ್ ೩ ಬೌಂಡರಿ ನೆರವಿನಿಂದ 55 ರನ್ ಬಾರಿಸಿದ್ದಾರೆ. ಪಾಕಿಸ್ತಾನ ತಂಡ ೨೦ ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 176ರನ್ ಗಳಿಸಿತ್ತು. ಮಿಚಲ್ ಸ್ಟಾರ್ಕ್2 ಹಾಗೂ ಆಡಂ ಜಂಪಾ ಹಾಗೂ ಪಾಟ್ ಕುಮಿನ್ಸ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಪಾಕಿಸ್ತಾನ ತಂಡ ನೀಡಿದ್ದ 177 ರನ್ ಗುರಿಯನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಶಾಹೀನ್ ಅಫ್ರಿದಿ ಶಾಕ್ ಕೊಟ್ರು. ಆರಂಭಿಕ ಆರೋನ್ ಪಿಂಚ್‌ಗೆ ಮೊದಲ ಎಸೆತದಲ್ಲಿಯೇ ಫೆವಿಲಿಯನ್ ಹಾದಿ ತೋರಿಸಿದ್ರು. ನಂತರ ಡೇವಿಡ್ ವಾರ್ನರ್ ಜೊತೆಯಾದ ಮಿಚೆಲ್ ಮಾರ್ಶ್ ಎರಡನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ನೆರವಾದ್ರು. ಮಾರ್ಶ್ 28 ರನ್ ಗಳಿಸಿ ಔಟಾದ್ರೆ ಡೇವಿಡ್ ವಾರ್ನರ್ 49 ರನ್‌ಗೆ ಶಬಾದ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ನಂತರ ಸ್ಟೀವ್ ಸ್ಮಿತ್ ಹಾಗೂ ಮ್ಯಾಕ್ಸ್‌ವೆಲ್ ಎರಡಂಕಿ ರನ್ ದಾಟೋದಕ್ಕೆ ಶಬಾದ್ ಖಾನ್ ಅವಕಾಶವನ್ನೇ ನೀಡಲಿಲ್ಲ. ಮಾರ್ಕ್ ಸ್ಟೋಯಿನಿಸ್ ಹಾಗೂ ಮ್ಯಾಥ್ಯೂ ವೇಡ್ ಉತ್ತಮ ಆಡದ ಮೂಲಕ ತಂಡಕ್ಕೆ ನೆರವಾದ್ರು. ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ತಂಡ 5 ವಿಕೆಟ್ ಕಳೆದುಕೊಂಡು 177ರನ್ ಗಳಿಸಿದೆ. ಈ ಮೂಲಕ ಟಿ 20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದೆ.
ಶಬಾದ್ ಖಾನ್ 4 ವಿಕೆಟ್ ಪಡೆದ್ರೆ, ಶಾಹೀನ್ ಅಫ್ರಿದಿ 1 ವಿಕೆಟ್ ಪಡೆದಿದ್ದಾರೆ.
Australia are through to the final of the #T20WorldCup 2021 🔥#PAKvAUS | https://t.co/W7izrV7PAI pic.twitter.com/z7ebx6BRem
— T20 World Cup (@T20WorldCup) November 11, 2021
ಸಂಕ್ಷಿಪ್ತ ಸ್ಕೋರ್ :
ಪಾಕಿಸ್ತಾನ : ಮೊಹಮ್ಮದ್ ರಿಜ್ವಾನ್ 67 (52 ಎಸೆತ), ಫಖರ್ ಜಮಾನ್ 55 (32 ಎಸೆತ), ಬಾಬರ್ ಅಜಮ್ 39 (34 ಎಸೆತ), ಮಿಚಲ್ ಸ್ಟಾರ್ಕ್ 38/2, ಪಾಟ್ ಕುಮಿನ್ಸ್ 30/1, ಅಡಂ ಜಂಪಾ 22/1
ಆಸ್ಟ್ರೇಲಿಯಾ : ಮಾರ್ಕ್ ಸ್ಟೊಯಿನಿಸ್ 40, ಡೇವಿಡ್ ವಾರ್ನರ್ 49 ( 30ಎಸೆತ), ಮ್ಯಾರ್ಥೂ ವೇಡ್ 41 , ಮಿಚಲ್ ಮಾರ್ಶ್ 28 ( 22 ಎಸೆತ) ಶಬಾದ್ ಖಾನ್ 26/4, ಶಾಹೀನ್ ಅಫ್ರಿದಿ 14/1
ಇದನ್ನೂ ಓದಿ : ನ್ಯೂಜಿಲೆಂಡ್ ಸರಣಿಗೆ ಟಿಂ ಇಂಡಿಯಾ ಆಯ್ಕೆ : ರೋಹಿತ್ ಶರ್ಮಾ ನಾಯಕ, ರಾಹುಲ್ ಉಪ ನಾಯಕ
ಇದನ್ನೂ ಓದಿ : ಟಿ20 ವಿಶ್ವಕಪ್ ಫೈನಲ್‌ಗೇರಿದ ನ್ಯೂಜಿಲೆಂಡ್ : ಮುಗ್ಗರಿಸಿದ ಇಂಗ್ಲೆಂಡ್
(T20 World Cup : PAK vs AUS Match Australia beat Pakistan, set up final vs New Zealand )