ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ ದುಬೈಗೆ ಶಿಪ್ಟ್ ಆದ ಬೆನ್ನಲ್ಲೇ ಟಿ20 ವಿಶ್ವಕಪ್ ಗೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 17ರಂದು ವಿಶ್ವಕಪ್ ಪಂದ್ಯಾವಳಿ ಆರಂಭ ವಾಗಲಿದೆ.

ಟಿ20 ವಿಶ್ವಕಪ್ ಆತಿಥ್ಯವನ್ನು ಬಿಸಿಸಿಐ ವಹಿಸಿ ಕೊಂಡಿದೆ. ಆದರೆ ಅಕ್ಟೋಬರ್ ನಲ್ಲಿ ಮಳೆಗಾಲ ವಾಗಿರುವ ಹಿನ್ನೆಲೆ ಯಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ಯನ್ನು ದುಬೈ ಹಾಗೂ ಓಮನ್ ನಲ್ಲಿ ನಡೆಸಲು ಬಿಸಿಸಿಐ ಸಜ್ಜಾಗಿದೆ. ಒಟ್ಟು 16 ತಂಡಗಳು ಭಾಗವಹಿಸುವ ಈ ಟಿ20 ಕೂಟದ ಮೊದಲ 12 ಪಂದ್ಯಗಳು ಯುಎಇ ಮತ್ತು ಮುಂದಿನ ಪಂದ್ಯಗಳು ಓಮನ್‍ನಲ್ಲಿ ನಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಿಕೆ ಯಾದ ಐಪಿಎಲ್ ನ ಉಳಿದ ಪಂದ್ಯಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಯುಎಇನಲ್ಲಿ ನಡೆಯಲಿದೆ. ಇದಾದ ಬೆನ್ನಲ್ಲೇ ಟಿ 20 ವಿಶ್ವಕಪ್ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.