ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಸಿನಿ ಪ್ರೇಮಿಗಳ ಆರಾಧ್ಯದೈವವಾಗಿದ್ದವರು ವಿಷ್ಣು. ಡಾ.ವಿಷ್ಣುವರ್ಧನ್ ಸಿನಿಮಾಗಳಂತೆ ಅವರ ಸಿನಿಮಾ ಹಾಡುಗಳೂ ಕೂಡ ಅಷ್ಟೇ ಫೇಮಸ್. ಇವತ್ತಿಗೂ ವಿಷ್ಣುವರ್ಧನ್ ಅವರ ಸಿನಿಮಾ ಹಾಡುಗಳು ಎವರ್’ಗ್ರೀನ್. ಹೊಸ ತಲೆಮಾರಿನ ನಟರ ಎಷ್ಟೇ ಹಾಡುಗಳು ಬಂದರೂ ವಿಷ್ಣುವರ್ಧನ್ ಸಿನಿಮಾ ಹಾಡುಗಳಿಗೆ ಸಾಟಿಯೇ ಇಲ್ಲ. ಅಂತಹ ಒಂದು ಹಾಡುಗಳಲ್ಲೊಂದು ‘ಹೊಂಬಿಸಿಲು’ ಸಿನಿಮಾದ “ಜೀವ ವೀಣೆ’ ಹಾಡು. ವಿಷ್ಣುವರ್ಧನ್ ಮತ್ತು ಅಭಿನೇತ್ರಿ ಆರತಿ ನಟಿಸಿರುವ ಈ ಸಿನಿಮಾ ಹಾಡು ಈಗಲೂ ಎವರ್”ಗ್ರೀನ್ (Vishnu Vardhan Evergreen Song).
ಇದೇ ಹಾಡಿಗೆ ತಮಿಳುನಾಡಿನ ಮಾಜಿ ಕ್ರಿಕೆಟಿಗರೊಬ್ಬರು ಫಿದಾ ಆಗಿದ್ದಾರೆ. ಭಾರತ ಪರ 11 ಟೆಸ್ಟ್, 27 ಏಕದಿನ ಪಂದ್ಯಗಳನ್ನಾಡಿರುವ ಡಬ್ಲ್ಯು.ವಿ ರಾಮನ್, ಕನ್ನಡದ “ಜೀವ ವೀಣೆ’ ಹಾಡಿನ ಬಗ್ಗೆ ಟ್ವೀಟ್ ಮಾಡಿದ್ದು, “ಕನ್ನಡದ ಈ ಹಳೆಯ ಹಾಡು ಯಾಕೆ ನೆನಪಿಗೆ ಬಂತು ಎಂದು ತಿಳಿಯುತ್ತಿಲ್ಲ” ಎಂದು ಟ್ವಿಟರ್”ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದ ದಿಗ್ಗಜ್ ಸ್ಪಿನ್ ಮಾಂತ್ರಿಕ ಸುನಿಲ್ ಜೋಶಿಯವರಿಗೆ ಹಾಡನ್ನು ಟ್ಯಾಗ್ ಕೂಡ ಮಾಡಿದ್ದು, ಈ ಹಾಡು ಖಂಡಿತಾ ನಿಮಗೆ ಗೊತ್ತಿರತ್ತೆ ಎಂದು ಟ್ವೀಟ್ ಮಾಡಿದ್ದಾರೆ.
ಸುನಿಲ್ ಜೋಶಿಯವರಿಗೆ ಅಷ್ಟೇ ಅಲ್ಲದೆ, ಕರ್ನಾಟಕದ ಕೆಲ ಕ್ರಿಕೆಟ್ ಪ್ರಿಯರಿಗೂ ಡಬ್ಲ್ಯು.ವಿ ರಾಮನ್ ತಮ್ಮ ಟ್ವೀಟನ್ನು ಟ್ಯಾಗ್ ಮಾಡಿದ್ದಾರೆ.
ತಮಿಳುನಾಡಿನ ದಿಗ್ಗಜ ಬ್ಯಾಟ್ಸ್’ಮನ್”ಗಳಲ್ಲಿ ಒಬ್ಬರಾಗಿರುವ ಡಬ್ಲ್ಯು.ವಿ ರಾಮನ್ 132 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 19 ಶತಕಗಳಿಂದ 7,939 ರನ್ ಕಲೆ ಹಾಕಿದ್ದಾರೆ. 87 ಲಿಸ್ಟ್ ಎ ಪಂದ್ಯಗಳಿಂದ 4 ಶತಕಗಳ ಸಹಿತ 2,892 ರನ್ ಗಳಿಸಿದ್ದಾರೆ. 1988ರಲ್ಲಿ ಭಾರತ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್”ಗೆ ಪದಾರ್ಪಣೆ ಮಾಡಿದ್ದ ರಾಮನ್, ಆಡಿದ ಒಟ್ಟು 38 ಅಂತರಾಷ್ಟ್ರೀಯ ಪಂದ್ಯಗಳಿಂದ ಒಂದು ಶತಕ ಹಾಗೂ 7 ಅರ್ಧಶತಕಗಳ ನೆರವಿನಿಂದ 1,065 ರನ್ ಕಲೆ ಹಾಕಿದ್ದಾರೆ.
ಕ್ರಿಕೆಟ್ ಕೋಚ್ ಆಗಿಯೂ ಹೆಸರು ಮಾಡಿರುವ ರಾಮನ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕೋಚ್ ಕೂಡ ಆಗಿದ್ದರು. ಅಷ್ಟೇ ಅಲ್ಲ, ಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಮನ್ ಕೋಚ್ ಆಗಿದ್ದಾಗಲೇ 2019ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿತ್ತು.
ಇದನ್ನೂ ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !
ಇದನ್ನೂ ಓದಿ : Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !
Tamil Nadu Cricketer Says Dr. Vishnu Vardhan Evergreen Song Remembers