ಸೋಮವಾರ, ಜೂನ್ 16, 2025
HomeBreakingMithali Raj : ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ ನಾಯಕಿ

Mithali Raj : ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ ನಾಯಕಿ

- Advertisement -

ವಾರ್ಸೆಸ್ಟರ್ : ಟೀ ಇಂಡಿಯಾದ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅದ್ಬುತ ಫಾರ್ಮ್ ಮುಂದುವರಿದಿದೆ‌. ಈ ನಡುವಲ್ಲೇ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

38 ವರ್ಷ ಪ್ರಾಯದ ಮಿಥಾಲಿ ರಾಜ್ ಮೂರು ಮಾದರಿ ಕ್ರಿಕೆಟ್ ನಿಂದ ಬರೋಬ್ಬರಿ 10,277 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ದದ 3 ನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ 15 ರನ್ ಗಳಿಸುತ್ತಿದ್ದಂತೆ ವಿಶ್ವದಾಖಲೆಗೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಜಿ ನಾಯಕಿ ಚಾರ್ಲೊಟ್ಟೆ ಎಡ್ವರ್ಡ್ 309 ಪಂದ್ಯಗಳನ್ನು ಆಡಿದ್ದು 13 ಶತಕ ಹಾಗೂ 78 ಅರ್ಧ ಶತಕದ ನೆರವಿ ನಿಂದ ಬರೋಬ್ಬರಿ 10,273 ರನ್ ಗಳಿಸಿದ್ದರು. ಆದರೆ ಮಿಥಾಲಿ ರಾಜ್ 317 ಪಂದ್ಯಗಳ ಮೂಲಕ 8 ಶತಕ ಹಾಗೂ 78 ಅರ್ಧ ಶತಕದ ನೆರವಿನಿಂದ 10,277 ರನ್ ಗಳಿಸುವ ಮೂಲಕ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅಲ್ಲದೇ 10 ಸಾವಿರ‌ ರನ್ ಬಾರಿಸಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿ‌ ಅನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇನ್ನು ಇಂಗ್ಲೆಂಡ್ ವಿರುದ್ದದ ಅಂತಿಮ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ಅತ್ಯಮೋಘ ಬ್ಯಾಟಿ‌ಂಗ್ ಪ್ರದರ್ಶಿಸಿ ದ್ದಾರೆ. 86 ಬಾಲ್ ಎದುರಿಸಿದ್ದ ಮಿಥಾಲಿ ರಾಜ್ 8 ಬೌಂಡರಿ ನೆರವಿನಿಂದ 76 ರನ್ ಗಳಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular