ಮುಂಬೈ : ಬಿಸಿಸಿಐ ಮುಂಬರುವ ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದು, ಎಡಗೈ ಓಪನರ್ ಶಿಖರ್ ಧವನ್ ಟೀಂ ಇಂಡಿಯಾದ ನಾಯಕನಾಗಿ ಆಯ್ಕೆಯಾಗಿದ್ದರೆ, ಮೂವರು ಕನ್ನಡಿಗರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ದ ಮೂರು ಏಕದಿನ ಹಾಗೂ ಮೂರು ಟಿ 20 ಪಂದ್ಯಗಳು ನಡೆಯಲಿದೆ. ಜುಲೈ 13ರಿಂದ ಏಕದಿನ ಸರಣಿ ಆರಂಭ ಗೊಳ್ಳಲಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರಸಾಸಕ್ಕೆ ತೆರಳಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹಿನ್ನೆಲೆಯಲ್ಲಿ ವಿರಾಟ್ ಕೊಯ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಓಪನರ್ ಶಿಖರ್ ಧವನ್ ಟೀಂ ಇಂಡಿಯಾ ನಾಯಕರಾಗಿದ್ರೆ, ವೇಗಿ ಭುವನೇಶ್ವರ್ ಕುಮಾರ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಐಪಿಎಲ್ ಹಾಗೂ ದೇಶೀಯ ಪಂದ್ಯಾವಳಿಗಳಲ್ಲಿ ಉತ್ತಮ ಸಾಧನೆ ಮಾಡಿರುವ ಕನ್ನಡಿಗ ದೇವದತ್ತ ಪಡಿಕ್ಕಲ್, ನಿತೀಶ್ ರಾಣಾ, ರುತುರಾಜ್ ಗಾಯಕ್ ವಾಡ್ ಹಾಗೂ ಚೇತನ್ ಸಕಾರಿಯಾ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಟೀಂ ಇಂಡಿಯಾದಲ್ಲಿ ಕನ್ನಡಿಗರಾದ ಮನೀಶ್ ಪಾಂಡೆ, ಕೆ.ಗೌತಮ್ ಹಾಗೂ ಡಿ.ಪಡಿಕ್ಕಲ್ ಆಯ್ಕೆಯಾಗಿದ್ದಾರೆ.
ಟೀಂ ಇಂಡಿಯಾ : ಶಿಖರ್ ಧವನ್ ( ನಾಯಕ), ಭುವನೇಶ್ವರ ಕುಮಾರ್ (ಉಪನಾಯಕ), ಪ್ರಥ್ವಿ ಶಾ, ದೇವದತ್ತು ಪಡಿಕ್ಕಲ್, ರುತುರಾಜ್ ಗಾಯಕ್ ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ.). ಯಜುವೇಂದ್ರ ಚಹಾಲ್, ರಾಹುಲ್ ಚಾಹರ್, ಕೆ.ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ